ಪರೀಕ್ಷೆಗಳನ್ನು ಹಬ್ಬದಂತೆ ಸಂಭ್ರಮಿಸಿ : ಎ.ಸಿ.ಕೆರೂರ ಅಧ್ಯಕ್ಷರು

ಪರೀಕ್ಷೆಗಳನ್ನು ಹಬ್ಬದಂತೆ ಸಂಭ್ರಮಿಸಿ  :  ಎ.ಸಿ.ಕೆರೂರ ಅಧ್ಯಕ್ಷರು  Celebrate exams like a festival: A.C.Kerura President

ಮುದ್ದೇಬಿಹಾಳ 14 : ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳು ಬಂದರೆ ವಿದ್ಯಾರ್ಥಿಗಳಿಗೆ ಭಯದ ಜ್ವರ ಪ್ರಾರಂಭವಾಗುವುದು, ಅದನ್ನೆಲ್ಲ ತೆಗೆದುಹಾಕಿ ತಾವುಗಳೆಲ್ಲ ಹಬ್ಬಗಳಂತೆ ಸ್ವೀಕಾರ ಮಾಡಬೇಕು ಯಾಕೆಂದರೆ ಯಾವುದೇ ಹಬ್ಬವನ್ನು ಆಚರಣೆ ಮಾಡಬೇಕಾದರೆ ತಿಂಗಳ ಗಂಟಲೆ ತಯಾರು ಮಾಡಿಕೊಳ್ಳುತ್ತೇವೆ ಹಬ್ಬದ ದಿನ ಎಲ್ಲರೂ ಸಂಭ್ರಮದಿಂದ ಹೇಗೆ ಸಂಭ್ರಮಿಸುತ್ತೇವೆ, ಅದೇ ರೀತಿ ಸಂಭ್ರಮಿಸಿ. ತಾವುಗಳೆಲ್ಲ ವರ್ಷವಿಡಿ, ಅಂದರೆ ಜೂನ್ ತಿಂಗಳದಿಂದ ಮಾರ್ಚ್‌ ತಿಂಗಳವರೆಗೆ ಸಂಪೂರ್ಣವಾದಂತ ಅಧ್ಯಯನ ಶಾಲೆಯಲ್ಲಿ ಆಗಿರುತ್ತದೆ, ಪ್ರಾರಂಭದಿಂದ ಸೇತುಬಂಧ, ಪರಿಹಾರ ಬೋಧನೆ, ಪ್ರತಿ ವಿಷಯದಲ್ಲಿ ಅಧ್ಯಾಯದ  ಮೇಲೆ ಘಟಕ ಪರೀಕ್ಷೆಗಳು, ರೂಪನಾತ್ಮಕ 1,2,3,4 ಸಂಕಲನಾತ್ಮಕ1, 2 , ಸರಣಿ ಪರೀಕ್ಷೆ1,2,3, ಹೀಗೆ ಹತ್ತು ಹಲವಾರು ಪರೀಕ್ಷೆಗಳು , ಸುಮಾರು 30 ರಿಂದ 40 ಪರೀಕ್ಷೆಗಳನ್ನು ತಾವು ಒಂದು ವರ್ಷದಲ್ಲಿ ಎದುರಿಸಿರುತ್ತೀರಿ, ಹೀಗಿರುವಾಗ ಪರೀಕ್ಷೆ ಎಂಬ ಭಯವನ್ನು ಕಳೆದುಕೊಂಡಿರುತ್ತೀರಿ.   

ಶಾಲೆಯಲ್ಲಿ ಯಾವ ರೀತಿಯಾಗಿ ಪರೀಕ್ಷೆ ಎದುರಿಸುತ್ತೀರಿ ಅದೇ ಒಂದು ರೀತಿಯಲ್ಲಿ ಎದುರಿಸಿದಾಗ ತಮಗೆ ಉತ್ತಮ ಫಲಿತಾಂಶ ಬರುವುದು . ಶಾಲೆಯಲ್ಲಿ ಎಲ್ಲ ಶಿಕ್ಷಕರು ಪರೀಕ್ಷಾ ದೃಷ್ಟಿಯಿಂದ ಎಲ್ಲಾ  ರೀತಿಯಿಂದ ಪರಿಣಿತರನ್ನಾಗಿ ಮಾಡಿರುತ್ತಾರೆ.  ಎಲ್ಲಾ ವಿಷಯದ ಸಂಪೂರ್ಣ ಪ್ರಶ್ನೆ ಪತ್ರಿಕೆ ಮಾದರಿಯನ್ನು ತಿಳಿಸಿಕೊಟ್ಟಿರುತ್ತಾರೆ, ಒಂದು ಅಂಕಗಳ ಬಹು ಆಯ್ಕೆ ಪ್ರಶ್ನೆಗಳು, ನೇರ ಉತ್ತರಗಳು, 2 ಅಂಕಗಳ ಪ್ರಶ್ನೆ,  3 ಅಂಕಗಳ ಪ್ರಶ್ನೆಗಳಿಗೆ , 4 ಅಂಕಗಳ ಪ್ರಶ್ನೆಗಳಿಗೆ, ಎಷ್ಟು ಸಾಲುಗಳಲ್ಲಿ ಬರೆಯಬೇಕು ಅಥವಾ ಬಿಡಿಸಬೇಕು ಎನ್ನುವುದರ ಬಗ್ಗೆ ಮನದಟ್ಟು ಮಾಡಿರುತ್ತಾರೆ. ಹಾಗಿರುವಾಗ ಪರೀಕ್ಷೆ ಎಂಬ ಭಯ ಯ್ಯಾಕಿರಬೇಕು.   ಎಲ್ಲಾ ಶಿಕ್ಷಕರು ಪರೀಕ್ಷೆಗೆ  ನಿರ್ಭಯವಾಗಿ ಬರೆಯುವಂತೆ ಸಭಲರನ್ನಾಗಿ ಮಾಡಿರುತ್ತಾರೆ.  ಪರೀಕ್ಷೆಗಳು ತಮಗೆ ಮುಂದಿನ ಹಂತಕ್ಕೆ ಹೋಗುವ ಮಾನದಂಡ ಮಾತ್ರ,  ಹಾಗಾಗಿ ಹಬ್ಬದಂತೆ ಸಂಭ್ರಮಿಸಿ ಪರೀಕ್ಷೆಗಳನ್ನ ಎದುರಿಸಿರಿ. ಪರೀಕ್ಷಾ ದೃಷ್ಟಿಯಿಂದ ಪ್ರತಿಯೊಬ್ಬ ವಿದ್ಯಾರ್ಥಿಯು ಈ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಲು ಅವಶ್ಯಕ.     

ಪರೀಕ್ಷೆ ಕೇವಲ ಮುಂದಿನ ತರಗತಿಗೆ ಹೋಗುವ ಒಂದು ಮಾನದಂಡವಾಗಿರುತ್ತದೆ ಎಂದು ತಿಳಿದುಕೊಂಡು ನಿರ್ಭಯದಿಂದಿರಿ . ಆರೋಗ್ಯವೇ ಭಾಗ್ಯ ಎನ್ನುವಂತೆ ಪರೀಕ್ಷಾ ದಿನಗಳಲ್ಲಿ ಲಘು ಆಹಾರವನ್ನು ಸೇವಿಸಿ . ಪರೀಕ್ಷೆ ಎಂಬ ಒತ್ತಡಕ್ಕೆ ಒಳಗಾಗದೆ ಬೇಗ ಮಲಗಿ ಬೇಗ ಎದ್ದು ಪ್ರಶಾಂತ ವಾತಾವರಣದಲ್ಲಿ ಅಭ್ಯಾಸವನ್ನು ಮಾಡಿ . ಪ್ರತಿದಿನ ಎಲ್ಲಾ ವಿಷಯಗಳು ಬರುವಂತೆ ಮನೆಯಲ್ಲಿ ಪ್ರತಿ ವಿಷಯಕ್ಕೆ ಒಂದು ಗಂಟೆ ಅಥವಾ ಒಂದುವರೆ ಗಂಟೆ ಬರುವಂತೆ ವೇಳಾಪತ್ರಿಕೆಯನ್ನು ಸಿದ್ಧಪಡಿಸಿಕೊಂಡು ಅದರಂತೆ ಅಭ್ಯಾಸವನ್ನು ಮಾಡಿ . ತಮಗೆ ನೆನಪಿನಲ್ಲಿ ಇಟ್ಟುಕೊಳ್ಳಲು ತೊಂದರೆ ಆದಲ್ಲಿ ಯಾವ ರೀತಿಯಾಗಿ ನೆನಪು ಇಟ್ಟುಕೊಳ್ಳಬೇಕು ಎನ್ನುವುದರ ಬಗ್ಗೆ ಶಿಕ್ಷಕದಿಂದ ಕೇಳಿ ತಿಳಿದುಕೊಳ್ಳಿ .ಪರೀಕ್ಷೆ ಹಿಂದಿನ ದಿನದಂದು ಒತ್ತಡಕ್ಕೆ ಒಳಗಾಗದೆ ಫ್ರೀಯಾಗಿ ಇರುವುದು ಮತ್ತು ಸಮಯಕ್ಕೆ ಸರಿಯಾಗಿ ವಿಶ್ರಾಂತಿ ಪಡೆದುಕೊಳ್ಳುವುದು .ಪರೀಕ್ಷೆ ದಿನದಂದು ಬೇಗೆ ಎದ್ದು ಯಾವುದೇ ರೀತಿ ಗೊಂದಲಕ್ಕೆ ಒಳಗಾಗದೆ ಶಾಂತ ಚಿತ್ತದಿಂದ ತಯಾರಾಗಿ ಪರೀಕ್ಷೆ ಕೇಂದ್ರಕ್ಕೆ ಸಮಯಕ್ಕೆ ಮುಂಚಿತವಾಗಿ ಹೊರಡುವುದು. 

 ಸ್ನೇಹಿತರೊಂದಿಗೆ ಪರೀಕ್ಷೆ ಬಗ್ಗೆ ಯಾವುದೇ ರೀತಿ ಚರ್ಚೆಗಳು ಬೇಡ.ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡ ಮೇಲೆ ಮನದಲ್ಲಿ ದೇವರನ್ನು ಮತ್ತು ತಂದೆ ತಾಯಿಯವರನ್ನು ಒಂದು ಸಾರಿ ನೆನಪಿಸಿಕೊಂಡು ಶಾಂತ ಚಿತ್ತದಿಂದ ಪ್ರಶ್ನೆಪತ್ರಿಕೆಯನ್ನು ಓದುವುದು .ಓದಿದ ಪ್ರಶ್ನೆ ಪತ್ರಿಕೆಯಲ್ಲಿ ಅತಿ ಸುಲಭ, ಭಾಗಂಶ ಸರಳ, ಕಠಿಣ ಪ್ರಶ್ನೆಗಳು ಎಂದು ವಿಂಗಡಿಸಿಕೊಳ್ಳಿ. ಯಾವುದು ಅತೀ ಸರಳ ಅನಿಸುತ್ತದೆ ಅವುಗಳನ್ನು ಗುರುತಿಸಿ ಶಾಂತಚಿತದಿಂದ ಪ್ರಶ್ನೆಗಳಿಗೆ ಉತ್ತರಿಸುವುದು.   

 ಭಾಗಂಶ ಸರಳ ಪ್ರಶ್ನೆಗಳಿಗೆ ತಾವು ಬಿಡಿಸುತ್ತಾ ಹೋದಲ್ಲಿ , ಕಲಿತಿದ್ದನ್ನು ನೆನಪಿಸಿಕೊಳ್ಳುತ್ತಾ ಹೋದಲ್ಲಿ ಸರಳವಾಗಿ ಬರೆಯಬಹುದು . ತದನಂತರ ಕಠಿಣ ಪ್ರಶ್ನೆಗಳಿಗೆ ಕೈ ಹಾಕಿದ್ದಲ್ಲಿ ಯಾವುದೇ ಒತ್ತಡವಿಲ್ಲದೆ ನೆನಪಿಸಿಕೊಂಡಾಗ ಉತ್ತರ ಬರುವುದು .  ಪರೀಕ್ಷೆಯಾದ ಮೇಲೆ ಯಾವುದೇ ಕಾರಣಕ್ಕೂ ಸ್ನೇಹಿತರೊಂದಿಗೆ ಬರೆದಂತಹ ಪ್ರಶ್ನೆ ಪತ್ರಿಕೆ ಬಗ್ಗೆ ಚರ್ಚೆ ಮಾಡಬೇಡಿ ಏಕೆಂದರೆ ಸಣ್ಣಪುಟ್ಟ ಏನಾದರೂ ತಪ್ಪುಗಳು ಆದಲ್ಲಿ ಒತ್ತಡಕ್ಕೆ ಒಳಗಾಗುತ್ತೀರಿ, ಮುಂದಿನ ಪರೀಕ್ಷೆಗೆ ಇದು ಮಾರಕವಾಗುವುದು ಹಾಗಾಗಿ ಚರ್ಚಿಸದೆ ಶಾಂತ ಚಿತ್ತದಿಂದ ಮನೆಗೆ ಹೋಗಿ. ಮುಂದಿನ ಪರೀಕ್ಷೆ ಬಗ್ಗೆ ಅಭ್ಯಾಸ ಮಾಡುವುದು.  ಉತ್ತರ ಪತ್ರಿಕೆಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ,  ಬರೆದ ಅಕ್ಷರಗಳು ಸ್ಪಷ್ಟವಾಗಿ ಮತ್ತು ಶುದ್ಧವಾಗಿ ದುಂಡಾಗಿ ಇರಲಿ. ಈ ರೀತಿಯಾಗಿ ಎಲ್ಲಾ ಪರೀಕ್ಷೆ ಆಗುವವರಿಗೆ ತಾವು ಅಳವಡಿಸಿಕೊಂಡಲ್ಲಿ ಸರಳ ರೀತಿಯಾಗಿ ಪರೀಕ್ಷೆಯಲ್ಲಿ ಯಶಸ್ಸನ್ನು ಕಂಡುಕೊಳ್ಳುತ್ತೀರಿ.