ಮೊಹರಂ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಿ - ನಾಗರಾಜ್ ಗಡದ

ಮೊಹರಂ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಿ - ನಾಗರಾಜ್ ಗಡದ  Celebrate Muharram with harmony - Nagaraj Gadda

ಲಕ್ಷ್ಮೇಶ್ವರ"  18 : ಹಲವಾರು ಇತಿಹಾಸವನ್ನು ಹೊಂದಿರುವ ಮೊಹರಂ ಹಬ್ಬ ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯತೆಯನ್ನು ಸಾರುವ ಹಬ್ಬವಾಗಿದ್ದು ಎಲ್ಲರೂ ಸೌಹಾರ್ದತೆಯಿಂದ ಶಾಂತಿ ರೀತಿಯಿಂದ ಆಚರಿಸಿ ಎಂದು ಲಕ್ಷ್ಮೇಶ್ವರ ಪೊಲೀಸ್ ಠಾಣೆ ಪಿಎಸ್‌ಐ ನಾಗರಾಜ ಗಡದ ಅವರು ಹೇಳಿದರು ಅವರು ಮೊಹರಂ ಹಬ್ಬದ ಹಿನ್ನೆಲೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಾನವ ಜಾತಿ ಎಂಬುದು ಒಂದೇಹಿಂದೂ ಆಗಲಿ ಮುಸ್ಲಿಂ ಸಾಗಲಿ ಎಲ್ಲರ ಮೈಯಲ್ಲಿ ಹರಿಯುತ್ತಿರುವುದು ಒಂದೇ ರಕ್ತ ಅದಕ್ಕಾಗಿ ಮುಕ್ತಿಮಂದಿರ ಧರ್ಮ ಕ್ಷೇತ್ರದ ವಿರಗಂಗಾಧರ ಸ್ವಾಮಿಗಳು ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಎಂಬ ಸಂದೇಶವನ್ನು ಸಾರಿ ಹೋಗಿದ್ದಾರೆ.

ಅಂತ ಮಹಾತ್ಮರು ನೀಡಿ ಹೋದ ಸಂದೇಶವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ವಿನಹ ಆ ಜಾತಿ ಈ ಜಾತಿ ಎಂದು ಬೇದ ಬಾವ ಮಾಡುತ್ತಾ ಸಮಾಜದಲ್ಲಿರುವ ನೆಮ್ಮದಿಯನ್ನು ಹಾಳು ಮಾಡುವಂತಹ ಪ್ರವರ್ತಿಯನ್ನು ಯಾರು ಮಾಡಬಾರದುಮೊಹರಂ ಹಬ್ಬದಲ್ಲಿ ಅಲೆ ದೇವರು ಪ್ರತಿಷ್ಠಾಪಿಸುವ ಪ್ರತಿ ಗಲ್ಲಿಯಲ್ಲಿ ಗಲ್ಲಿಯ ಮುಖಂಡರು ಹೆಚ್ಚಿನ ಜಾಗೃತಿಯನ್ನು ವಹಿಸಬೇಕು ಯುವಕರನ್ನು ಗುಂಪು ಗುಂಪಾಗಿ ಸೇರಲು ಬಿಡಬಾರದು ಯುವಕರ ಕಡೆ ಹೆಚ್ಚು ಗಮನ ಕೊಡಬೇಕು ಯುವಕರು ತಮ್ಮ ಮಾತಿಗೆ ಬೆಲೆ ಕೊಡದೆ ಇದ್ದಾಗ ನಮಗೆ ಮಾಹಿತಿ ನೀಡಬೇಕು.

ನಾವು ಯಾವುದೇ ಅಹಿತಕರ ಘಟನೆಗಳು ನಡೆದಂತೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಒಟ್ಟಿನಲ್ಲಿ ಎಲ್ಲರೂ ಶಾಂತಿ ರೀತಿಯಿಂದ ಮೊಹರಂ ಹಬ್ಬವನ್ನು ಆಚರಿಸಬೇಕು ಲಕ್ಷ್ಮೇಶ್ವರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಹ ಸಿಸಿಟಿ ಕ್ಯಾಮೆರಾ ಅಳವಡಿಸಲಾಗಿದ್ದು ಎಲ್ಲಾ ಕಡೆ ಪೊಲೀಸ್ ಕಗಂಗಾವಲು ಇರುತ್ತದೆ ಅದಕ್ಕಾಗಿ ಎಲ್ಲರೂ ಶಾಂತಿ ರೀತಿಯಿಂದ ಮೊಹರಂ ಹಬ್ಬವನ್ನು ಆಚರಿಸಿ ಎಂದರು  ಈ ಸಮಯದಲ್ಲಿ ಹಿಂದೂ ಮುಸ್ಲಿಂ ಸಮಾಜದ ಹಿರಿಯರು ಮುಖಂಡರು ಪೊಲೀಸ್ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು