ಶಾಂತಿ ರೀತಿಯಿಂದ ಮೊಹರಂ ಆಚರಿಸಿ: ಸಿಪಿಐ ಮಠಪತಿ
Celebrate Muharram peacefully: CPI Mathapati
ಯರಗಟ್ಟಿ 20 : ಹಿಂದೂ ಮುಸ್ಲಿಂ ಬಾಂಧವರ ಭಾವೈಕ್ಯ ಸಾರುವ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿ ರೀತಿಯಿಂದ ಆಚರಿಸ ಬೇಕು ಎಂದು ಸಿಪಿಐ ಐಎಂ. ಮಠಪತಿ ಹೇಳಿದರು. ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ ಉದ್ದೇಶಿಸಿ ಮಾತನಾ ಡಿದರು. ‘ಮಾನವ ಜಾತಿ ಎಂಬುದು ಒಂದೇ. ಹಿಂದೂ ಆಗಲಿ, ಮುಸ್ಲಿಂ ಆಗಲಿ ಎಲ್ಲರ ಮೈಯಲ್ಲಿ ಹರಿಯುತ್ತಿರುವುದು ಒಂದೇ ರಕ್ತ. ಅದಕ್ಕಾಗಿಯೇ ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಎಂಬ ಸಂದೇಶ ಸಾರಿದ್ದಾರೆ. ಅಂತ ಮಹಾತ್ಮರು ನೀಡಿದ ಸಂದೇಶವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.‘ಮೊಹರಂ ಹಬ್ಬದಲ್ಲಿ ದೇವರನ್ನು ಪ್ರತಿಷ್ಠಾಪಿಸುವ ಪ್ರತಿಗಲ್ಲಿಯ ಮುಖಂಡರು ಹೆಚ್ಚಿನ ಜಾಗೃತಿಯನ್ನು ವಹಿಸಬೇಕು. ಯುವಕರನ್ನು ಗುಂಪು ಗುಂಪಾಗಿ ಸೇರಲು ಬಿಡಬಾರದು.
ಯುವಕರ ಕಡೆ ಹೆಚ್ಚು ಗಮನ ಕೊಡಬೇಕು. ಯಾವುದೇ ಅಹಿತಕರ ಘಟನೆಗಳು ನಡೆದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು. ಈ ಸಮಯದಲ್ಲಿ ಹಿಂದೂ ಮುಸ್ಲಿಂ ಸಮಾಜದ ಹಿರಿಯರು ಮುಖಂಡರು ಇದ್ದರು.ಈ ವೇಳೆ ಇಮಾಮಸಾಬ ಹುಸೇನನಾಯ್ಕರ, ವಿಠ್ಠಲಗೌಡ ದೇವರಡ್ಡಿ, ಭಾಸ್ಕರ ಹಿರೇಮೆತ್ರಿ, ಮಲಿಕಸಾಬ ಬಾಗವಾನ, ಮುದಕಪ್ಪ ತಡಸಲೂರ, ಮದಾರಸಾಬ ಚಾಂಖಾನ್ನವರ, ಫಿರೋಜ ಖಾದ್ರಿ, ರಫೀಕ ಡಿಕೆ, ಅಮೀರ ದೇವಡಿ, ದೂದನಾನಾ ಪತ್ತುನಾಯ್ಕರ, ಶಿವಾನಂದ ಬಳಿಗಾರ, ಕೆ.ಎಫ್. ನಾದಾಫ, ಸಲಿಂಬೇಗ ಜಮಾದಾರ, ನಜೀರ ನದಾಫ, ಪಿಎಸೈ ಎಲ್.ಬಿ ಮಾಳಿ, ಪ್ರೊಫೆಸರ್ ಪಿಎಸ್ಐ ಮಾರುತಿ ಲಮಾಣಿ, ಎಎಸ್ಐ ಬಿ.ಎಸ್ ರಂಗಣ್ಣವರ, ಪಿಸಿಗಳಾದ ಎಂ. ಬಿ. ಸಣ್ಣನಾಯ್ಕ, ರಮೇಶ ತೇಲಿ, ವಾಯ್. ಎನ್. ಮೇಟ್ಯಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ಇದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 