ಸೌಹಾರ್ದಯುತೆಯಿಂದ ಬಕ್ರಿದ್ ಹಬ್ಬ ಆಚರಣೆ : ಡಿವೈಎಸ್ಪಿ

ಸೌಹಾರ್ದಯುತೆಯಿಂದ ಬಕ್ರಿದ್ ಹಬ್ಬ ಆಚರಣೆ : ಡಿವೈಎಸ್ಪಿ Celebrate Bakrid festival with harmony: DySP

ಕೊಲ್ಹಾರ 24 : ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸರ್ವರೂ ಶಾಂತಿ ಹಾಗೂ ಸೌಹಾರ್ದಯುತೆಯಿಂದ ಬಕ್ರಿದ್ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಕ್ರಿದ್ ಹಬ್ಬದ ಶಾಂತಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.ಯುವ ಸಮುದಾಯ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಜಾಗರೂಕರಾಗಿರಬೇಕು ಅನಗತ್ಯವಾಗಿ ಬಕ್ರಿದ್ ಹಬ್ಬದ ಫೋಟೋ, ವಿಡಿಯೋ ಹಂಚಿಕೊಂಡು ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದ ಅವರು ಹಬ್ಬ ಹರಿದಿನಗಳ ಅಚ್ಚುಕಟ್ಟಾಗಿ ಆಚರಿಸಲ್ಲಡುವಲ್ಲಿ ಹಿರಿಯರ ಪಾತ್ರ ಅಪಾರವಾಗಿರುತ್ತದೆ ಹೀಗಾಗಿ ಹಿರಿಯರು ಯುವ ಸಮುದಾಯಕ್ಕೆ ತಿಳಿ ಹೇಳುವ ಮೂಲಕ ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದರು. 

ಪಿಎಸ್‌ಐ ಅಶೋಕ ನಾಯಕ್ ಮಾತನಾಡಿ ಬಕ್ರಿದ್ ಹಬ್ಬದ ಆಚರಣೆಯಲ್ಲಿ ಅನಗತ್ಯ ಗೊಂದಲಗಳಿಗೆ ಆಸ್ಪದ ನೀಡದೆ ಶಾಂತಿಯಿಂದ ಆಚರಣೆ ಮಾಡಬೇಕು ಎಂದರು. ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರಿದ್ ಹಬ್ಬವನ್ನು ಹಿಂದೂ, ಮುಸ್ಲಿಂ ಬಾಂಧವರು ಜೊತೆಯಾಗಿ ಆಚರಿಸುವ ಮೂಲಕ ಭಾವೈಕ್ಯತೆಗೆ ಭಾಷ್ಯ ಬರೆಯಬೇಕು ಎಂದು ಅವರು ಸಲಹೆ ನೀಡಿದರು. ಮುಸ್ಲಿಂ ಸಮುದಾಯದ ಹಿರಿಯರಾದ ಆರಿ​‍್ಬ ಪಕಾಲಿ ಮಾತನಾಡಿ ಕೊಲ್ಹಾರ ಪಟ್ಟಣದಲ್ಲಿ ಹಿಂದೂ, ಮುಸ್ಲಿಂ ಸಮುದಾಯದವರು ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದೆವೆ. ಸರ್ವರೂ ಒಂದಾಗಿ ಹಬ್ಬವನ್ನು ಆಚರಿಸುತ್ತೆವೆ ಎಂದರು.ಅಲ್ಲಾಭಕ್ಷ ಬಿಜಾಪುರ ಮಾತನಾಡಿ ಭಾವೈಕ್ಯತೆಗೆ ಚ್ಯುತಿ ಬರದಂತೆ ಸರ್ವರೂ ಬಕ್ರಿದ್ ಹಬ್ಬವನ್ನು ಆಚರಣೆ ಮಾಡುತ್ತೆವೆ ಎಂದರು. ಮುಂದುವರೆದು ಮಾತನಾಡಿದ ಅವರು ಪ್ರತಿ ವರ್ಷ ಬಕ್ರಿದ್ ಹಬ್ಬದ ಹಾಗೂ ಇತರ ಸಂದರ್ಭಗಳಲ್ಲಿ ಗೋ ಹತ್ಯೆ ಹೆಸರಿನಲ್ಲಿ ನಡೆಯುವ ಗೊಂದಲಗಳು ನಿಲ್ಲಬೇಕಾದರೆ.  

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೋ ವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು ಇದರಿಂದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಪ್ರಮುಖರಾದ ಉಸ್ಮಾನ್ ಪಟೇಲ್ ಖಾನ್, ಟಿ.ಟಿ ಹಗೇದಾಳ, ಟಿ.ಟಿ ಹಗೇದಾಳ, ಗುರುನಗೌಡ ಬಿರಾದಾರ, ದಶರಥ ಈಟಿ, ಎಂ.ಆರ್ ಕಲಾದಗಿ, ಡೊಂಗ್ರಿ ಕಟಬರ, ಸುಭಾಷ್ ಭಜಂತ್ರಿ, ಸುರೇಶ ಗಿಡ್ಡಪ್ಪಗೊಳ, ಪರಶುರಾಮ ಚಿಮ್ಮಲಗಿ, ಸಿಡ್ಲಪ್ಪ ತಳಗೇರಿ ಸೇರಿದಂತೆ ಇತರರು ಇದ್ದರು.