ರಾಮ ಮಂದಿರ ಟ್ರಸ್ಟ್ನಲ್ಲಿ ಹಣ ಚಿನ್ನ ಲೂಟಿ ಪ್ರಕರಣ : ಅಮಿತ್ ಶಾ’ ಯೋಗಿ ರಾಜೀನಾಮೆಗೆ ಉಗ್ರ​‍್ಪ ಆಗ್ರಹ

ರಾಮ ಮಂದಿರ  ಟ್ರಸ್ಟ್ನಲ್ಲಿ ಹಣ ಚಿನ್ನ ಲೂಟಿ ಪ್ರಕರಣ :  ಅಮಿತ್ ಶಾ’ ಯೋಗಿ  ರಾಜೀನಾಮೆಗೆ ಉಗ್ರ​‍್ಪ ಆಗ್ರಹ Case of alleged looting of funds and gold from the Ram Mandir Trust: Ugrappa demands the resignation

ಕಾರವಾರ 12 : ಅಯೋಧ್ಯೆಯ ಶ್ರೀರಾಮ ಮಂದಿರ  ಟ್ರಸ್ಟ್ನಲ್ಲಿ ನಡೆದ  ಕೋಟ್ಯಂತರ ರೂಪಾಯಿ ಎಗರಿಸಿದ, ಚಿನ್ನ ಕದ್ದ   ಆರೋಪದ ಕುರಿತು  ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ,ಯುಪಿ ರಾಜ್ಯದ ಸಿಎಂ ಯೋಗಿ ಆದಿತ್ಯನಾಥ್ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ನ ಹಿರಿಯ ನಾಯಕ ವಿ.ಎಸ್‌. ಉಗ್ರ​‍್ಪ ಆಗ್ರಹಿಸಿದರು. ಕಾರವಾರದ ಪತ್ರಿಕಾ ಭವನದಲ್ಲಿ ರವಿವಾರ ನಡೆದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಟ್ರಸ್ಟ್ನಲ್ಲಿ ನಡೆದಿರುವ ಹಣ , ಚಿನ್ನ ಬೆಳ್ಳಿ ಕದ್ದ ಪ್ರಕರಣಕ್ಕೆ  ಕೇಂದ್ರ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ ನ ಮುಖಂಡ ಉಗ್ರ​‍್ಪ  ಆರೋಪಿಸಿದರು.

ಟ್ರಸ್ಟ್ನ ಅಧ್ಯಕ್ಷ ಚಂಪತ್ ರಾಯ್ , ಇನ್ನೊಬ್ಬ  ರಾಜೀನಾಮೆ ನೀಡಿರುವುದು ಹಾಗೂ ಎಂಟು ಮಂದಿಯನ್ನು ಬಂಧಿಸಿರುವುದು ಹಗರಣದ ಗಂಭೀರತೆಯನ್ನು ತೋರಿಸುತ್ತದೆ. ಇಷ್ಟೆಲ್ಲ ಬೆಳವಣಿಗೆಗಳಾದರೂ ಪ್ರಧಾನಿ ಮೋದಿ ಮತ್ತು ಗೃಹ ಸಚಿವ  ಅಮಿತ್ ಶಾ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು. ಪ್ರಧಾನಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಸೇರಿದಂತೆ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳು ಟ್ರಸ್ಟ್ನಲ್ಲಿ ಇದ್ದಾರೆ.  ಇಂತಹ ಸನ್ನಿವೇಶದಲ್ಲಿ ರಾಮ ಮಂದಿರ ಲೂಟಿ  ಹಗರಣದ ಹೊಣೆಗಾರಿಕೆಯಿಂದ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಉಗ್ರ​‍್ಪ ಹೇಳಿದರು.

ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಸಂಘಟನೆಗಳು ರಾಜಕೀಯ ಲಾಭಕ್ಕಾಗಿ ಶ್ರೀರಾಮನ ಹೆಸರನ್ನು ಬಳಸಿಕೊಂಡಿವೆ ಎಂದು ಆರೋಪಿಸಿದ ಅವರು, ರಾಮಾಯಣದಲ್ಲಿ ಭ್ರಷ್ಟಾಚಾರದ ವಿರುದ್ಧ ರಾಮನೇ ಸಂದೇಶ ನೀಡಿದ್ದಾನೆ. ಆದರೆ ರಾಮನ ಹೆಸರಿನಲ್ಲಿ ದೇವಸ್ಥಾನದಲ್ಲೇ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳು ಅತ್ಯಂತ ಗಂಭೀರವಾಗಿವೆ ಎಂದು ಕಿಡಿಕಾರಿದರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಸಂಘಟನೆಯ ಪ್ರಮುಖರು ಈ ವಿಷಯದಲ್ಲಿ ಮೌನವಾಗಿರುವುದನ್ನೂ ಪ್ರಶ್ನಿಸಿದ ಉಗ್ರ​‍್ಪ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ   ನೈತಿಕ ಹೊಣೆಗಾರಿಕೆಯ ಪರಂಪರೆಯನ್ನು ನೆನಪಿಸಿದರು.

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿ ಆಗಿದ್ದ ಅವಧಿಯಲ್ಲಿ,  ರೈಲು ಅಪಘಾತದ ಬಳಿಕ, ನೇರ ಸಂಬಂಧವಿಲ್ಲದಿದ್ದರೂ ರಾಜೀನಾಮೆ ನೀಡಿದ್ದರು. ಆದರೆ ಈಗ ರಾಮಮಂದಿರ ಟ್ರಸ್ಟ್‌  ಹಗರಣದ ಆರೋಪಗಳ ನಡುವೆಯೂ ಜವಾಬ್ದಾರಿಯುತ ನಡೆ ಬಿಜೆಪಿ ಸರ್ಕಾರದಲ್ಲಿ  ಕಾಣುತ್ತಿಲ್ಲ ಎಂದು ಟೀಕಿಸಿದರು.ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ರಾಮಲಲ್ಲಾ ಪೂಜೆಗೆ ಅವಕಾಶ ಕಲ್ಪಿಸಿದ ಸಂದರ್ಭ ಹಾಗೂ ಗಂಗಾ ನದಿ ಸ್ವಚ್ಛತೆಗೆ ಅನುದಾನ ನೀಡಿದ ಉದಾಹರಣೆಗಳನ್ನು ಉಲ್ಲೇಖಿಸಿದ  ಉಗ್ರ​‍್ಪ ಅವರು, ಧರ್ಮವನ್ನು ಕಾಂಗ್ರೆಸ್ ಪಕ್ಷ  ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೆ,  ಸಂವಿಧಾನದ ಜಾತ್ಯತೀತ ಮೌಲ್ಯಗಳನ್ನು ಗೌರವಿಸಿದೆ  ಎಂದು ಹೇಳಿದರು. ಪ್ರಧಾನಿ ದೇಶದ ಪ್ರಧಾನಿಯಾಗಿ ನಡೆದುಕೊಳ್ಳಬೇಕೇ ಹೊರತು  ರಾಜಕೀಯ ಪ್ರಚಾರಕರಂತೆ ವರ್ತಿಸಬಾರದು ಎಂದು ಉಗ್ರ​‍್ಪ ವಾಗ್ದಾಳಿ ನಡೆಸಿದರು.