ತೀವ್ರತರ ವಿಕಲಚೇತನರ ಆರೈಕೆದಾರರಿಗೆ ಮನೋಸ್ಥೈರ್ಯ ಅಗತ್ಯ
Carers of severely disabled people need morale
ಲೋಕದರ್ಶನ ವರದಿ
ತೀವ್ರತರ ವಿಕಲಚೇತನರ ಆರೈಕೆದಾರರಿಗೆ ಮನೋಸ್ಥೈರ್ಯ ಅಗತ್ಯ
ಯಲಬುರ್ಗಾ 09: ತೀವ್ರತರ ವಿಕಲಚೇತನರ ಆರೈಕೆಯಲ್ಲಿ ತೊಡಗಿರುವ ಆರೈಕೆದಾರರಿಗೆ ಮನೋಸ್ಥೈರ್ಯ ಅಗತ್ಯವಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ತಿಳಿಸಿದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕೊಪ್ಪಳ, ಅರುಣಚೇತನ ವಿಶೇಷ ಮಕ್ಕಳ ಶಾಲೆ ಕೊಪ್ಪಳ, ಮಹಾತ್ಮಾಗಾಂಧಿ ಅನಾಥ ಸೇವಾಶ್ರಮ ಟ್ರಸ್ಟ್ ಕೊಪ್ಪಳ, ಶಾಂತಗಂಗಾ ಫೌಂಡೇಶನ್ (ರಿ) ಕೊಪ್ಪಳ, ಶ್ರೀ.ವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ (ರಿ) ಯಲಬುರ್ಗಾ ಹಾಗೂ ವಂದೇಮಾತರಂ ಸೇವಾ ಸಂಘ (ರಿ) ಕೊಪ್ಪಳ ಇವರುಗಳ ಸಹಯೋಗದಲ್ಲಿ ಅರುಣಚೇತನ ವಿಶೇಷ ಮಕ್ಕಳ ಶಾಲೆಯಲ್ಲಿ ಶನಿವಾರ ಜರುಗಿದ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರ ಆರೈಕೆದಾರರ ಸಂಕಷ್ಟಗಳನ್ನು ಮನಗಂಡು ಅವರನ್ನು ಗುರುತಿಸಿ ಅವರಿಗೆ ಮಾಸಿಕ ರೂ.1000 ಮಾಸಾಶನ ಕೊಡುವ ಯೋಜನೆ ಜಾರಿಗೆ ತಂದಿದ್ದು, ಆಯ್ದ ಅಂಗವಿಕಲತೆಯುಳ್ಳ ವಿಕಲಚೇತನರ ಆರೈಕೆದಾರರಿಗೆ ನೀಡಲಾಗುತ್ತಿದೆ. ಅದರಂತೆ ನಗರಸಭೆಯ ಅನುದಾನದಡಿ ಆರೈಕೆದಾರರಿಗೆ ಸಹಾಯಧನ ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ತ್ವರಿತವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಮಾಜ ಕಾರ್ಯಕರ್ತ ಪ್ರಸಾದ ಪ್ರಾಸ್ತಾವಿಕವಾಗಿ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಸಂಘ-ಸಂಸ್ಥೆಗಳ ಮೂಲಕ ವಿಕಲಚೇತನರ ಆರೈಕೆದಾರರ ಸಬಲೀಕರಣಕ್ಕಾಗಿ ಪ್ರಾರಂಭವಾದ ಕಾರ್ಯಗಳು ಮತ್ತು ವಕಾಲತ್ತು ಚಟುವಟಿಕೆಗಳ ಫಲವಾಗಿ ಇಂದು ಕರ್ನಾಟಕ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಆರೈಕೆದಾರರ ಅಭಿವೃದ್ಧಿಗೆ ನೀತಿ ನಿಯಮ ರೂಪಿಸಿ ಮಾಸಾಶನ ಯೋಜನೆ ಜಾರಿಗೆ ತಂದಿರುವುದು ಸಾವಿರಾರು ಆರೈಕೆದಾರರಿಗೆ ನೆರವಾಗಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಹಾತ್ಮಾಗಾಂಧಿ ಅನಾಥ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಜೈನ್ ಮಾತನಾಡಿ ಅರುಣಚೇತನ ವಿಶೇಷ ಮಕ್ಕಳ ಶಾಲೆಯ ವಿಕಲಚೇತನ ಮಕ್ಕಳ ಪುನಃಶ್ಚೇತನಕ್ಕೆ ದಾನಿಗಳು ನೆರವಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜು ಶೆಟ್ಟರ ಮತ್ತು ಸುಮಂಗಲಾ ಶೆಟ್ಟರ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವ ನಿಮಿತ್ಯ ಶಾಲೆಯ ಮೂವರು ವಿಕಲಚೇತನ ಮಕ್ಕಳಿಗೆ ಸಾಧನ-ಸಲಕರಣೆ ವಿತರಿಸಿದರು. ಆರೈಕೆದಾರರ ಸಬಲೀಕರಣಕ್ಕೆ ತಮ್ಮ ಇಳಿ ವಯಸ್ಸಿನಲ್ಲೂ ಕೊಡುಗೆ ನೀಡಿದ ಡಾಽಽ ರಾಧಾ ಕುಲಕರ್ಣಿಯವರಿಗೆ ಸಂಘ-ಸಂಸ್ಥೆಗಳ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಸಮಿತಿಯಿಂದ ಶೈಲಜಾ ದೇಶಪಾಂಡೆಯವರಿಗೆ ಅತ್ಯುತ್ತಮ ಆರೈಕೆದಾರರು ಎಂದು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮಧು ಶೆಟ್ಟರ್, ಕಾರ್ಯದರ್ಶಿ ರೇಖಾ ಕಡ್ಲಿ, ಶಾಂತಗಂಗಾ ಫೌಂಡೇಶನ್‌ನ ನೀಲಕಂಠಯ್ಯ ಹಿರೇಮಠ, ಶ್ರೀ.ವೀರಭದ್ರೇಶ್ವರ ವಿಕಲಚೇತನರ ಸಂಸ್ಥೆಯ ಅಧ್ಯಕ್ಷ ಈರ್ಪ ಕರೇಕುರಿ, ಶಾಲಾ ಫಿಜಿಯೋಥೆರಪಿಸ್ಟ್ ವಿರುಪಾಕ್ಷಪ್ಪ ಅಳವಂಡಿ, ವರ್ಷಾ ಹಿರೇಮಠ, ಸಿದ್ಧನಗೌಡ ಮಾಲಿಪಾಟೀಲ್, ನಾಗರಾಜ ಅರಸಿನಕೇರಿ, ಶಾಲಾ ಸಿಬ್ಬಂದಿ ವರ್ಗ, ವಿಕಲಚೇತನ ಮಕ್ಕಳು ಮತ್ತು ಆರೈಕೆದಾರರು ಉಪಸ್ಥಿತರಿದ್ದರು. ವಿರುಪಾಕ್ಷಪ್ಪ ಅಳವಂಡಿ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 