ಡಮಾಸ್ಕಸ್ ನಲ್ಲಿ ಕಾರ್ ಬಾಂಬ್ ಸ್ಫೋಟ : ಓರ್ವ ಸಾವು

ಡಮಾಸ್ಕಸ್, ಡಿ 17 (ಸ್ಫುಟ್ನಿಕ್) ಸಿರಿಯಾ ರಾಜಧಾನಿ ಡಮಾಸ್ಕಸ್ ನಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದೆ.     ಭಯೋತ್ಪಾದಕರು ಕಾರೊಂದರಲ್ಲಿ ಸ್ಫೋಟಕ ಸಾಧನ ಇರಿಸಿದ್ದು, ವಾಹನ ಮುಂದಕ್ಕೆ ಸಾಗುತ್ತಿದ್ದಂತೆ ಆ ಬಾಂಬ್ ಸ್ಫೋಟಿಸಿ ಕಾರ್ ಚಾಲಕ ಮೃತಪಟ್ಟಿದ್ದಾನೆ. ಡಮಾಸ್ಕಸ್ ನ ದಕ್ಷಿಣದಲ್ಲಿ ನಹೇರ್ ಐಷಾದಲ್ಲಿ ಈ ಘಟನೆ ನಡೆದಿದೆ.  ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.