ಸಿರಿಯಾದ ಕೇಂದ್ರ ಕಾರಾಗೃಹದ ಹೊರಗೆ ಕಾರ್ ಬಾಂಬ್ ಸ್ಫೋಟ

ಹಸಾಕಾಹ್, ಅ 12:   ಆಗ್ನೇಯ ಸಿರಿಯಾದ ಕೇಂದ್ರ ಕಾರಾಗೃಹದ ಹೊರಗೆ ಶನಿವಾರ ಬೆಳಗಿನ ಜಾವ ಕಾರ್ ಬಾಂಬ್ ಸ್ಫೋಟ ಸಂಭವಿಸಿದೆ.    ಅಲ್ ಲೇಲಿಯಾ ಕ್ವಾರ್ಟರ್ ಭಾಗದ ಕಾರಾಗೃಹದ ಹೊರ ಗೋಡೆ ಸಮೀಪ  ಈ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ. ಈ ಕಾರಾಗೃಹ ಖುರ್ದಿಷ್ ನೇತೃತ್ವದ ಸಿರಿಯನ್ ಡೆಮಾಕ್ರೆಟಿಕ್ ಪಡೆಗಳ ನಿಯಂತ್ರಣದಲ್ಲಿದ್ದು ಇದರಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಅನೇಕ ಸದಸ್ಯರಿದ್ದಾರೆ ಎಂದು ಸಾನಾ ಸುದ್ದಿಸಂಸ್ಥೆ ವರದಿ ಮಾಡಿದೆ.