ಶಿಗ್ಗಾವಿ 13 : ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ಅಂಗವಾಗಿ ನಸಿಂರ್ಗ್ ಪಿತಾಮಹೆ ಫ್ಲಾರೆನ್ಸ್ ನೈಟಿಂಗಲ್ ಅವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಕೋರಲು ಕ್ಯಾಂಡಲ್ ಡೇ ಆಚರಿಸಿದರು.
ಈ ಸಂದರ್ಭದಲ್ಲಿ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಣ ನಾಯಕ, ತಜ್ಞ ವೈದ್ಯರಾದ ಡಾ. ಗುರುರಾಜ, ಡಾ.ಸುಭಾಸ ಲೋಖ್ರೆ, ಡಾ. ವಿವೇಕ ಜೈನಕೇರಿ, ಡಾ. ಮಹೇಶ ಜಗದವರ, ಡಾ.ರಾಜೇಶ್ವರಿ ಚನ್ನಗೌಡ್ರ, ಡಾ.ತಬುಸುಮ್, ಡಾ.ಬಿ.ಆರ್.ಪಾಟೀಲ, ಡಾ.ವಿಧ್ಯಾವತಿ ಬ್ಯಾಟಪ್ಪನವರ, ಶುಶ್ರೂಷಾ ಅಧೀಕ್ಷಕಿ ಸುಶೀಲಾ ದೇವಸೂರ, ಶುಶ್ರೂಷಕರಾದ ಆರ್ ಸಾರಮ್ಮ, ಉಮಾ ಮುಳಗುಂದ, ವನಿತಾ ಕುರಂದವಾಡ, ಶಕುಂತಲಾ ಶಾನವಾಡ, ಶಶಿಕಲಾ ರಾಮಗೇರಿ, ರತ್ನಾ ಕಮ್ಮಾರ, ಯಶೋಧಾ, ಆನಂದ ಹುಂಬಿ, ಸುಧಾ ಸಾಲಿ, ಅಂಜು ಡಿ, ಸರಸ್ವತಿ, ಅನಿತಾ, ಈರಮ್ಮ, ಕವಿತಾ, ಜಮೀಮಾ, ಸಂಗೀತಾ, ಸುವರ್ಣಾ, ಸುನೀತಾ , ಮಾಶಾಭಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.