ಜೆಸ್ಕಾಂ ಕಛೇರಿಯಲ್ಲಿ ಮತಯಾಚಿಸಿದ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳು
Candidates for the post of director sought votes at the GESCOM office
ಕಂಪ್ಲಿ 04: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಡಿ.7ರ ಭಾನುವಾರದಂದು ಬಳ್ಳಾರಿಯಲ್ಲಿ ನಡೆಯುವ ಚುನಾವಣೆ ಹಿನ್ನಲೆ ಕಂಪ್ಲಿಯ ಜೆಸ್ಕಾಂ ಕಚೇರಿಯಲ್ಲಿ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳಲ್ಲಿ ಮತ ನೀಡುವಂತೆ ಅಭ್ಯರ್ಥಿಗಳು ಗುರುವಾರ ಮತಯಾಚಿಸಿದರು. ಅಭ್ಯರ್ಥಿ ಸುಕುಮಾರ ನೇತೃತ್ವದಲ್ಲಿ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳಾದ ಎಸ್.ತಿಪ್ಪೇಸ್ವಾಮಿ, ಸಿ.ಪಿ.ರಾಜಣ್ಣ, ವಿ.ಗಂಗಾಧರ ನಾಯ್ಕ, ಹೆಚ್.ಬಸವರಾಜ, ಕೆ.ಯಲ್ಲಪ್ಪ, ರುದ್ರ್ಪ, ಕೆ.ಎಂ.ವಿರೇಶ ಮತ ಕೋರಿದರು.
ನಂತರ ಸುಕುಮಾರ ಮಾತನಾಡಿ, ಇದೇ 7ರಂದು ಸಂಘಕ್ಕೆ ಚುನಾವಣೆ ನಡೆಯಲಿದ್ದು, ಮತದಾರರು ಮತ ನೀಡಿ, ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಂಪ್ಲಿ ಪ್ರಾಥಮಿಕ ಸಮಿತಿ ಅಧ್ಯಕ್ಷ ಡಿ.ಶ್ರೀನಿವಾಸ, ಕಾರ್ಯದರ್ಶಿ ಎನ್.ಉಮೇಶ, ಸದಸ್ಯರಾದ ಕೆ.ನಾಗರಾಜ, ಎನ್.ವೆಂಕಟಚಲಮ್, ಬಿ.ಹೊನ್ನೂರಸ್ವಾಮಿ, ದೊಡ್ಡಬಸಪ್ಪ, ಹಿರಿಯರಾದ ಸಿ.ರಾಜಣ್ಣ, ಕೆ.ಬಸಪ್ಪ ಸೇರಿದಂತೆ ನೌಕರರು ಇದ್ದರು.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ 