ಕ್ಯಾಮರೂನ್‌: ಮತದಾನ ಕೇಂದ್ರಗಳ ಮೇಲೆ ನಡೆದ ಗುಂಡಿನ ದಾಳಿ, ಏಳು ಮಂದಿ ಸಾವು

ಯೌಂಡೆ, ಫೆ 10, ದೇಶದ ನೈರುತ್ಯ ಭಾಗದಲ್ಲಿರುವ  ಇಂಗ್ಲಿಷ್ ಮಾತನಾಡುವ ಪ್ರದೇಶದಲ್ಲಿ ಮತದಾನ ಕೇಂದ್ರಗಳ ಮೇಲೆ ಗುಂಡಿನ ದಾಳಿ ನಡೆಸಿದ ಏಳು ಸಶಸ್ತ್ರ ಪ್ರತ್ಯೇಕತಾವಾದಿಗಳು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.ಮಧ್ಯ ಆಫ್ರಿಕಾದ ದೇಶದಲ್ಲಿ ವಿಧಾನಸಭೆ ಮತ್ತು ಪುರಸಭೆ ಚುನಾವಣೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಬಂಗೇಮ್ ಪಟ್ಟಣದಲ್ಲಿ ಭಾನುವಾರ ಈ ಘಟನೆ ನಡೆದಿದೆ.ಎರಡು ಬಾರಿ ಮುಂದೂಡಿದ ನಂತರ ಏಳು ವರ್ಷಗಳ ಮೊದಲ ಬಾರಿಗೆ ಈ ಚುನಾವಣೆಗಳು ನಡೆಯುತ್ತಿವೆ.

ದೇಶದ ವಾಯುವ್ಯ ಮತ್ತು ನೈರುತ್ಯ ಭಾಗದಲ್ಲಿ ಇಂಗ್ಲಿಷ್ ಮಾತನಾಡುವ ಪ್ರದೇಶಗಳಿಂದ ಸ್ವಾತಂತ್ರ್ಯಕ್ಕಾಗಿ ಪ್ರತ್ಯೇಕತಾವಾದಿಗಳು 2017 ರಿಂದ ಹೋರಾಡುತ್ತಿದ್ದಾರೆ. ಚುನಾವಣೆಯನ್ನು ಅಡ್ಡಿಪಡಿಸಲು ಹಿಂಸಾಚಾರಕ್ಕೆ ಇಳಿಯುವುದಾಗಿ ಪ್ರತ್ಯೇಕವಾದಿಗಳು ಬೆದರಿಕೆ ಹಾಕಿದ್ದರು. ಇದರ ಹೊರತಾಗಿಯೂ, , ಈ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮತದಾನವಾಗಿದೆ ಎಂದು ಸ್ಥಳೀಯ ಆಡಳಿತ ಸಚಿವ ಪಾಲ್ ಅಟಂಗಾ ಎನ್ಜಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.