ಕ್ಯಾಲಿಫೋನರ್ಿಯಾ ಕಾಳ್ಗಿಚ್ಚು 80ಕ್ಕೂ ಹೆಚ್ಚು ಮಂದಿ ಸಾವು

ಕ್ಯಾಲಿಫೋನರ್ಿಯಾ: ಕ್ಯಾಲಿಫೋನರ್ಿಯಾದಲ್ಲಿ ಸಂಭವಿಸಿರುವ  ವಿನಾಶಕಾರಿ ಕಾಳ್ಗಿಚ್ಚಿನಿಂದಾಗಿ  1,42,000 ಎಕರೆ ಪ್ರದೇಶ ಸುಟ್ಟುಕರಕಲಾಗಿದೆ. ಸುಮಾರು 80ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ. 1000ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.  

ಉತ್ತರ ಕ್ಯಾಲಿಫೋನರ್ಿಯಾದಲ್ಲಿ ವಾರದ ಹಿಂದೆ ಹಬ್ಬಿದ  ಅನಾಹುತಕಾರಿ ಕಾಳ್ಗಿಚ್ಚು ದಿನದಿಂದ ದಿನಕ್ಕೆ ವ್ಯಾಪಿಸುತ್ತಲೇ ಇದ್ದು,  ರಸ್ತೆ ಮಧ್ಯೆ ನಿಲ್ಲಿಸಿದ್ದ ನೂರಾರು ಕಾರುಗಳು, ಸಾವಿರಾರು ಮನೆಗಳು, ಪ್ರಾಣಿ ಸಂಕುಲ, ಜನ ಸೇರಿದಂತೆ ಸಿಕ್ಕಸಿಕ್ಕವರನ್ನು ಆಪೋಷನ ತೆಗೆದುಕೊಳ್ಳುತ್ತಿದೆ.  

ಕಾಡ್ಗಿಚ್ಚು ಹೆಚ್ಚಿದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕ್ಯಾಲಿಫೋನರ್ಿಯಾದಲ್ಲಿ ನೆಲೆಸಿದ್ದ ಹಾಲಿವುಡ್ ನಟ ವಿಲ್ ಸ್ಮಿತ್, ಲೇಡಿ ಗಾಗ್, ಕಿಮ್ ಕದರ್ಾಶಿಯಾನ್ ಹಾಗೂ ಚೇರ್ ಅವರನ್ನು ಬಲವಂತವಾಗಿ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.