ಕ್ಯಾಲೆಂಡರ ಬಿಡುಗಡೆ ಕಾರ್ಯಕ್ರಮ
Calendar release event
ಮುದ್ದೇಬಿಹಾಳ 10: ಪಟ್ಟಣದಲ್ಲಿ ಪ್ರತಿಷ್ಠತ ಎಸ್.ಎಸ್ ವ್ಹಿ ವ್ಹಿ ಸಂಘದ ಆಶ್ರಯದಲ್ಲಿ ರವಿ ನಾಯಕ ಸಂಸ್ಥಾಪಕರು ಕಾರ್ಯದರ್ಶಿಗಳ ಅವರ ಎಲ್‌ಕೆಜಿ ಯಿಂದ ಪದವಿ ಮತ್ತು ಪಿಎಚ್‌ಡಿ, ಪಿಜಿ ಹಾಗೂ ತಾಂತ್ರಿಕ ಸಮೂಹ ಶಿಕ್ಷಣ ಸಂಸ್ಥೆಗಳ ಸನ್ 2026ನೇ ಸಾಲಿನ ಹೊಸ ಕ್ಯಾಲೆಂಡರ ಬಿಡುಗಡೆ ಕಾರ್ಯಕ್ರಮ ದಿ. 10 ಶನಿವಾರ ದಂದು ಅದ್ಯೂರಿಯಾಗಿ ನಡೆಯಿತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮುದ್ದೇಬಿಹಾಳ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭಾವಂತ ಬಡಮಕ್ಕಳು ವಿವಿಧ ದೂರದ ಊರುಗಳಿಂದ ಹೋಗಿ ಶಿಕ್ಷಣ ಕಲಿಯುವದು ಕಷ್ಟದ ಕೆಲಸ. ಅವರು ಶಿಕ್ಷಣದಿಂದ ವಂಚಿತರಾಗಬಾರದೆಂದು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಎಸ್‌ಎಸ್‌ವ್ಹಿವ್ಹಿ ಸಂಘದ ಅಡಿಯಲ್ಲಿ ಎಲ್‌ಕೆಜಿಯಿಂದ ಪದವಿ ಪಿಜಿ ಪಿಎಚ್‌ಡಿ ತಾಂತ್ರಿಕ ಎಲ್ಲಾ ವಿಭಾಗಗಳನ್ನು ಪ್ರಾರಂಭಿಸಿದ ತಾಲೂಕಿನ ಏಕೈಕ ಶಿಕ್ಷಣ ಸಂಸ್ಥೆ ನಮ್ಮ ಸಂಸ್ಥೆಯಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ರವಿ ನಾಯಕ ಹೇಳಿದರು.
ನಮ್ಮ ಸಂಸ್ಥೆಯ ಎಲ್ಲಾ ವಿಭಾಗಗಳು ಸರಕಾರದ ಆದೇಶಕ್ಕನುಗುಣವಾಗಿ ಶಿಕ್ಷಣವನ್ನು ನೀಡುತ್ತಾ ಎಲ್ಲಾ ವಿಭಾಗದಲ್ಲಿ ಅನುಭವಿಕ ನುರಿತ ಉಪನ್ಯಾಸಕರು ಸಿಬಂದಿಗಳನ್ನು ಹೊಂದಿದೆ ಹಾಗೂ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ಮೂಲಭೂತ ಸೌಲಭ್ಯಗಳನ್ನು ಮತ್ತು ಲ್ಯಾಬ್ ಶಾಲಾವಾಹನ ವಿಶಾಲವಾದ ಆಟದ ಮೈದಾನವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳಿಗೆ ಮೆಚ್ಚುಗೆಯಾಗಿ ಅತಿವೇಗವಾಗಿ ಬೆಳೆಯುತ್ತಿರುವ ಶಿಕ್ಷಣ ಸಂಸ್ಥೆಯಾಗದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಆರ್.ಎನ್. ನಾಯಕ ಸಂಸ್ಥಾಪಕರು, ಡಾ. ಅಶೋಕ ಆರ್ ರಾಠೋಡ, ಬಿ.ಜಿ. ಬಿರಾದಾರ, ಆರ್ ವ್ಹಿ ಕುಲಕರ್ಣಿ, ಬಿ.ಎಚ್.ಹುಡೇದ, ಆಯ್.ಎ. ಬಿರಾದಾರ, ಎಮ್. ಎಮ್. ಬಾವೂರ, ಪಿ. ಎಲ್. ರಾಠೋಡ, ದೀಪಾ ಕುಲಕರ್ಣಿ, ಆರ್.ಎಸ್ ರಾಠೋಡ, ಕೆ.ಪಿ.ರಾಠೋಡ, ಆರ್. ಎಮ್ ವಾಲಿಕಾರ ವಿದ್ಯಾರ್ಥಿಗಳು ಸೇರಿದಂತೆ ಹಲವರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 