ಕ್ಯಾಲೆಂಡರ್‌= ಏನಿದು ಕ್ಯಾಲೆಂಡರ್‌=ಏನಿದು ಹೊಸ ವರ್ಷ?

ಕ್ಯಾಲೆಂಡರ್ ಅಂದರೆ ಪ್ರಾಚೀನ ರೋಮನ್ನರ ಪ್ರಕಾರ ಸಾಲದ ಪುಸ್ತಕ ಅಂತ ಅರ್ಥ ನನ್ನಂಥ ಬ್ಯಾಂಕಿನವನಿಗೆ ಇದು ಇಷ್ಟವಾಯ್ತು. ನನ್ನ ಸರ್ವಿಸ್ನಲ್ಲಿ ಬಹುತೇಕ ವರ್ಷಗಳಲ್ಲಿ ಈಯರ್ ಎಂಡ್ ಅಕೌಂಟ್ಸ್‌ ಮಾಡಿದ್ದು ಆವಾಗಲೇ ಅಂದರೆ ಡಿಸೆಂಬರ್ ಬರ್‌. ಆಮೇಲೆ  ಏಪ್ರಿಲ್ ನಿಂದ ಮಾರ್ಚ್‌ ಎಕೌಂಟ್ಸ್‌ ಮಾಡುವುದುಶುರಾಯಿತು ಕ್ಯಾ ಟಜಟಿಜಜಡಿ ... ಏನು ಸಾಲಕೊಡುವವ ಅಂತ. ಬ್ಯಾಂಕಿನಲ್ಲಿಯ ಸಾಲಗಾರರ ಪಟ್ಟಿಯನ್ನು ನವೀಕರಿಸುವ ದಿನ  ಅಂತ ಇರಬೇಕು.  

ಹಾಗಾದರೆ ಏನಿದು ಕ್ಯಾಲೆಂಡರ್ ಏನಿದು ಹೊಸ ವರ್ಷ?  ಕ್ಯಾಲೆಂಡರ್  ನಮ್ಮದೇಶದಲ್ಲಿ ಪ್ರಾರಂಭವಾಗಿದ್ದು ಯಾವಾಗ. ಇದಕೆಲ್ಲ ಉತ್ತರ ಕೊಡುವ ಸಣ್ಣ ಪ್ರಯತ್ನ ನನ್ನದು.  

ಇಲ್ಲಿ ನಾವು ಮೈಸೂರಿನ ಆಗಿನ ದೀವಾನರಾಗಿದ್ದ ಶ್ರೀ ವಿಶ್ವೇಶ್ವರಯ್ಯನವರ ಮುಂದಾಲೋಚನೆ ಮತ್ತು ಮೈಸೂರು ರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೆರವು ಮತ್ತು ಬೆಂಗಳೂರು ಮುದ್ರಣಾಲಯದ ಇತಿಹಾಸವನ್ನು ನೆನೆಯ ಬೇಕಾಗುತ್ತದೆ.  

ಪರಮ ಪೂಜನೀಯ ಮತ್ತು ಆದರಣೀಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಮಗನ ಆಮಂತ್ರಣ ಪತ್ರಿಕೆಯನ್ನು ಇಂಗ್ಲೆಂಡ್ನಲ್ಲಿ ಮುದ್ರಿಸಿ ತರಿಸಿಕೊಂಡಿದ್ದರು 1914ರಲ್ಲಿ. ಇದನ್ನು ಅಂದು ದಿವಾನರಾಗಿದ್ದ ಶ್ರೀ ವಿಶ್ವೇಶ್ವರಯ್ಯನವರು ನೋಡಿದರು. ಕೂಡಲೇ ಅದರ ಬೆಲೆಯನ್ನು ವಿಚಾರಿಸಿ ಅವರು ರಾಜರಿಗೆ ಹೀಗೆ ಹೇಳಿದರಂತೆ.ಇದು ಬಹಳ ದುಬಾರಿ ಇದೇ  ಬೆಲೆಗೆ ನಾವು ಇಲ್ಲಿ ಒಂದು ಹೊಸ ಮುದ್ರಣ ಕಾರ್ಯಾಲಯವನ್ನೇ ಸ್ಥಾಪಿಸಬಹುದಲ್ವೇ ಅಂತ. ತಕ್ಷಣ ಶುರಾಯಿತು ಪ್ರಕ್ರಿಯೆ.  

ಮಹಾರಾಜರು, ವಿಶ್ವೇಶ್ವರಯ್ಯನವರ ಜೊತೆ ಲಂಡನ್ನಿನ "ಲಂಡನ್ ರಾಯಲ್ ಕಂಪನಿ" ಅವರ ಜೊತೆ ಮಾತುಕತೆ ನಡೆಸಿ ಮೈಸೂರು ರಾಜ್ಯದಲ್ಲಿ ಮುದ್ರಣ ಕಾರ್ಯಾಲಯವನ್ನು ಸ್ಥಾಪಿಸಲು ಎಲ್ಲ ಏರ​‍್ಾಡುಗಳನ್ನು ಮಾಡಿಯೇ ಬಿಟ್ಟರು.  

ಹೀಗಾಗಿ ಆಗಸ್ಟ್‌ 5, 1916ರಲ್ಲಿ ಬೆಂಗಳೂರು ಪ್ರಿಂಟಿಂಗ್ ಪ್ರೆಸ್ ಅಧಿಕೃತವಾಗಿ ಪ್ರಾರಂಭವಾಯ್ತು. ಇದರ ಫೌಂಡರ್ ಎಂ ವಿಶ್ವೇಶ್ವರಯ್ಯ ನವರು. ಅದರ ಹೆಡ್ ಕ್ವಾರ್ಟರ್ಸ್‌ ಮೈಸೂರಿನಲ್ಲಿದೆ. ಕ್ಯಾಲೆಂಡರ್ ಇಲ್ಲಿಂದಲೇ ಹೊರಟಿದ್ದು.ಇಲ್ಲಿ ಇನ್ನೂರು ಕೋಟಿ ವ್ಯವಹಾರ ವಾಗುತ್ತೆ. ಅಂದರೆ ಊಹಿಸಿ  ಅದರ ಹಿಂದಿನ ರೋಚಕ ಕಥೆ. ಮೈಸೂರಿನ ಆಫೀಸ್ ನ ಹೊರಗೆ  ಫಲಕದಲ್ಲಿ ಇದನ್ನು ಬರೆದಿದ್ದಾರೆ. ಮಹಾರಾಜರ ಅಧಿಕೃತ ಪ್ರೆಸ್ ಅಂತ.  

ಇದು ಮೊದಮೊದಲು ಮೈಸೂರು ಸಂಸ್ಥಾನಕ್ಕೆ ಬೇಕಾದ ಅಧಿಕೃತ ಕಾಗದ ಪತ್ರಗಳನ್ನು ಮುದ್ರಿಸಲು ಮಾತ್ರ ಬಳಸಲಾಗುತ್ತಿತ್ತು. ಅಂದಿನ ಜನರಿಗೆ ರಾಜ ಪ್ರಭುತ್ವದ ಕೆಲಸಕ್ಕೆ ರಜೆಯನ್ನು ತಿಳಿಸುವ ಅವಶ್ಯಕತೆ ಇತ್ತು, ಹಾಗಾಗಿ ವಿಶ್ವೇಶ್ವರಯ್ಯನವರು ಕ್ಯಾಲೆಂಡರ್ ನ ಅಗತ್ಯತೆ ಕಂಡು ಮುದ್ರಿಸುವ ಜವಾಬ್ದಾರಿಯನ್ನು ಈ ಸಂಸ್ಥೆಗೆ ಕೊಟ್ಟರು.ಅಲ್ಲಿಂದ ಕ್ಯಾಲೆಂಡರ್ ಮುದ್ರಣ ಶುರುವಾಯಿತು. ಮುಂದೆ 1919ರಲ್ಲಿ ವಿಶ್ವೇಶ್ವರಯ್ಯನವರು ರಿಟೈರ್ಮೆಂಟ್ ಆದ ನಂತರ ಅವರು ಈ ಸಂಸ್ಥೆಯ ಭಾಗವಾದರು.  

ಮುಂದೆ ಃಂಓಉಂಐಓಖಇ ಕಖಇಖಖ  ಎಂಬ ಹೊಸ ಹೆಸರಿನಡಿ ಕ್ಯಾಲೆಂಡರ್ ಮುದ್ರಣ ಜೋರಾಗಿ ಆರಂಭವಾಯಿತು. ಹೀಗಾಗಿ ಮೊದಲನೆಯ ಬ್ಯಾಂಗಲೋರ್ ಪ್ರೆಸ್ ಕ್ಯಾಲೆಂಡರ್ ಮುದ್ರಣ ಆಗಿದ್ದು 1921ರಲ್ಲಿ. ಅದರ ಮೇಲೆ ಮೈಸೂರು ಮಹಾರಾಜರ ಚಿತ್ರ ಇರುತ್ತಿತ್ತಂತೆ. ಜನರು ಇದನ್ನು ಅಧಿಕೃತವೆಂದು ಸ್ವೀಕರಿಸಿದರು. ಹಾಗಾಗಿ ಇದರ ವ್ಯಾಪಾರ ಜೋರಾಗಿ ನಡೆಯಿತು.  

ಮೊದಲು ಬರೀ ಇಂಗ್ಲಿಷ್ ನಲ್ಲೆ ಮುದ್ರಣ ಆಗುತ್ತಿತ್ತು. ಕನ್ನಡ ಕೂಡ ಇರಬೇಕು ಎಂಬ ಬೇಡಿಕೆಗಳು ಬಂದವು ಇದರ ವೇಗ ಪಡೆದುಕೊಂಡಿದ್ದು ಮಾತ್ರ 1932ನಲ್ಲಿ. ಕ್ಯಾಲೆಂಡರ್‌ನ ಸ್ವರೂಪವನ್ನು ಡಿಸೈನ್ ಮಾಡಿದವರು ಬಿ ಪುಟ್ಟಣ್ಣ ಎಂಬವರು. ಈಗ ಅವರನ್ನು ಯಾರೂ ನೆನೆಯುವುದೇ ಇಲ್ಲ.  

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತಮ್ಮ ಎಲ್ಲ ಕೃತಿಗಳ ಕಾಪಿರೈಟ್ ಅನ್ನು ಇದೇ ಸಂಸ್ಥೆಗೆ ಕೊಡಲು ತೀರ್ಮಾನಿಸಿದರು. ಆದರೆ ಅವರು ಒಂದು ಷರತ್ತನ್ನು ವಿಧಿಸಿದರು, ಕನ್ನಡದಲ್ಲೂ ಕ್ಯಾಲೆಂಡರ್ ಮುದ್ರಣ ಆಗಬೇಕೆಂಬಾ ಷರತ್ತು. ಇದಕ್ಕೆ ಒಪ್ಪಿದ ಸಂಸ್ಥೆಯು ಕನ್ನಡದಲ್ಲೂ ಕ್ಯಾಲೆಂಡರ್ಗಳನ್ನು ಮುದ್ರಿಸಿತು.ಹೀಗಾಗಿ 1936ರಲ್ಲಿ ಬೆಂಗಳೂರು ಮುದ್ರಣಾಲಯ ಎಂಬ ಹೆಸರಿನಡಿಯಲ್ಲಿ ಕನ್ನಡ ಕ್ಯಾಲೆಂಡರ್ಗಳು ಹೊರಬಂದವು.  

ಸ್ವತಂತ್ರ ಬಂದ ನಂತರ ಕ್ಯಾಲೆಂಡರಿನ ನಾಲ್ಕು ಮೂಲೆಗಳಲ್ಲಿ  ಸ್ವಾತಂತ್ರ್ಯಹೋರಾಟಗಾರರ ಚಿತ್ರಗಳನ್ನು ಹಾಕುತ್ತಿದ್ದರು. ಹಾಗೆ ಕಾಲ ಕಳೆದಂತೆ ಟೇಬಲ್ ಕ್ಯಾಲೆಂಡರ್, ಆನ್ಲೈನ್ ಕ್ಯಾಲೆಂಡರ್ ಎಲ್ಲ ಬಂದವು. ಹೀಗೆ ಇದು ಬೆಂಗಳೂರ್ ಪ್ರೆಸ್‌ನ ಕ್ಯಾಲೆಂಡರ್‌ಗೆ  ಕಳೆದ ವರ್ಷ ನೂರು ವರ್ಷಗಳನ್ನು ಪೂರೈಸಿದೆ.. ಕಳೆದ ವರ್ಷದ ಬೆಂಗಳೂರ್  ಪ್ರೆಸ್ ಕ್ಯಾಲೆಂಡರ್‌ನ ಹಿಂಭಾಗದಲ್ಲಿ ಈ ಇಡೀ ಘಟನೆಗಳ ರೋಚಕ ಕತೆ ಇದೆ.   

ಮೈಸೂರಲ್ಲಿ ಕ್ಯಾಲೆಂಡರ್ ತಯಾರಿಸುವ ಸಮಯದಲ್ಲಿ ಕ್ಯಾಲೆಂಡರಿನಲ್ಲಿ  ನಮೂದಿಸಲು ಎಲ್ಲ ಸಮುದಾಯಗಳ ಮುಖ್ಯಸ್ಥರನ್ನು ಕರೆಸಲಾಯ್ತು. ಜ್ಯೋತಿಷಿಗಳು, ಪಂಚಾಂಗ ಕರ್ತರು ಮುಲ್ಲಾಗಳು, ಕ್ರಿಶ್ಚಿಯನ್ ಪಾದ್ರಿಗಳು ಇನ್ನೂ ಹಲವಾರು ಪಂಡಿತರು ಸೇರಿ  ಕ್ಯಾಲೆಂಡರ್ ರಚಿಸಿದರು.ಎಲ್ಲ ಸಮುದಾಯಗಳ ಹಬ್ಬಗಳನ್ನು ಕ್ಯಾಲೆಂಡರಿನಲ್ಲಿ ನಮೂದಿಸಲಾಯ್ತು.  

ನಿಮಗೆ ಗೊತ್ತೇ ಆವಾಗ  ಪ್ರತಿಯೊಂದು ಅಮಾವಾಸ್ಯೆ ದಿನ ತಾರೀಕಿನ ಮುಂದೆ ಕಪ್ಪು ಸೂರ್ಯನ  ಚಿತ್ರವಿರುತ್ತಿತ್ತು. ಈ ದಿನ ಹಿಂದೂ ಜನಾಂಗಕ್ಕೆ  ಆಫೀಸುಗಳಲ್ಲಿ  ಮಧ್ಯಾಹ್ನ ಎರಡು ಗಂಟೆ ಬಿಡುವು ಸಿಗುತ್ತಿತ್ತು. ಮನೆಗೆ ಹೋಗಿ  ಅಮಾವಾಸ್ಯೆದಿನ  ಹಿರಿಯರಿಗೆ ತರ​‍್ಣ ಬಿಡಲು. ಸ್ವಾತಂತ್ರ್ಯ ಬಂದಮೇಲೆ ಆ  ವಿಷಯಕ್ಕೇ ತರ​‍್ಣ ಬಿಡಲಾಯ್ತು ! ಎಂದು ನಿಮಗೆ ಗೊತ್ತೇ ಇದೆ. ಈಗಲೂ ಕಪ್ಪು ಸೂರ್ಯನ ಚಿತ್ರ ಇದೆಅಮಾವಾಸ್ಯೆ ಗಳಂದು.  

ಈ ಮೊದಲು ಜನರು ಎಲ್ಲಾ ವಿಷಯಗಳನ್ನು  ಪಂಚಾಗದಲ್ಲೇ ನೋಡುತ್ತಿದ್ದರು. ದಕ್ಷಿಣ ಕನ್ನಡದ ಶಾಸ್ತ್ರ ಸಿದ್ಧ ಉಡುಪಿ ಶ್ರೀಕೃಷ್ಣ ಪಂಚಾಂಗ ಪ್ರಸಿದ್ಧ (ಒಂದು ವರ್ಷ ಸಿಂಡಿಕೇಟ್ ಬ್ಯಾಂಕಿನವರು ಕ್ಯಾಲೆಂಡರ್ ಜೊತೆ ಉಡುಪಿ ಶ್ರೀಕೃಷ್ಣ ಪಂಚಾಗವನ್ನೂ ಹಂಚಿದರಂತೆ), ಇದೇ ಥರ ಮೈಸೂರಿನ ಒಂಟಿಕೊಪ್ಪಲು ಪಂಚಾಗಕ್ಕೆ ಅತೀ ದೊಡ್ಡ ಇತಿಹಾಸವಿದೆ. ಒಂದೇ ಕುಟುಂಬದವರು ಇದನ್ನು ನಿರ್ವಹಿಸುತ್ತಿರುವುದು ನಮಗೆ ಹೆಮ್ಮೆ.  

ಈಗ ನಮ್ಮಲ್ಲಿ ನೂರಾರು ಪಂಚಾಗ ಗಳು ಸಿಗುತ್ತವೆ. ಗದುಗಿನಿಂದ  ಬಸವೇಶ್ವರ ಪಂಚಾಂಗ ಹೊರಡುತ್ತದೆ, ಗದಗದಲ್ಲಿ ಲಾಗಾಯ್ತಿನಿಂದ ಪೂಜ್ಯ ತೋಟಪ್ಪನವರ ಬಸವೇಶ್ವರ ಪಂಚಾಂಗ ಲಭ್ಯ. ಅದಕ್ಕೆ ಅಸಲೀ ಪಂಚಾಗ ಅಂತ  ಕೌಂಸಿನಲ್ಲಿ ನಲ್ಲಿ ಬರೆದದ್ದು ನಾನು ಗದಗದಲ್ಲಿ ಇರುವಾಗ ನೋಡಿದ್ದೇನೆ. ಬಿಜಾಪುರದಲ್ಲಿ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು 12ನೇ ಶತಮಾನದ ಗಣಿತಜ್ಞ ಭಾಸ್ಕರಾಚಾರ್ಯ ರವರು ವಿಜಯಪುರ ಪ್ರದೇಶದವರು ಎಂಬ ಅಭಿಮಾನವಿರಬೇಕು ಎನ್ನುತ್ತಾರೆ ಶ್ರೀ ಭಾಸ್ಕರಾಚಾರ್ಯ ಪಂಚಾಂಗದಲ್ಲಿ. ಇನ್ನು ಉದ್ಯಾವರ ಪಂಚಾಗ, ಕೊಲ್ಹಾಪುರದ ಲಾಟ್ ಕಾರ್ ಪಂಚಾಂಗವೂ ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ, ಸೋಲಾಪುರ ಪಂಚಾಂಗವೂ ಅಲ್ಲಿ ಲಭ್ಯ,  ನಾನು ಹುಟ್ಟಿದ ಊರಲ್ಲಿ ನನ್ನ ಮನೆಗೆ  ತಿಲಕ್ ಪಂಚಾಗ ದೊರೆಯುತ್ತಿತ್ತು . ಬಾಳ  ಗಂಗಾಧರ್ ತಿಲಕರ ಅಣ್ಣ ಅದನ್ನು ಪ್ರಾರಂಭಿಸುತ್ತಿದ್ದರು ಎಂದು ಕೇಳಿದ್ದೇನೆ. (ನನ್ನ ಊರಿಗೆ 1932ರಲ್ಲಿ ತಿಲಕರು ಬಂದಿದ್ದರಂತೆ.) ನಾನು ಈಗ ಉದಯವಾಣಿ ಕೆಲೆಂಡರನ್ನೂ ತರಿಸುತ್ತಿದ್ದೇನೆ. ನಮ್ಮೋರ ಹಬ್ಬಗಳ ಸಹಿತ ಕರ್ನಾಟಕದ ಎಲ್ಲಾ ಹಬ್ಬಗಳು ಇದರಲ್ಲಿ ನಮೂದಾಗಿವೆ. ಈಗ ಪ್ರತಿಯೊಂದು ಸಂಸ್ಥೆಗಳೂ ಕ್ಯಾಲೆಂಡರುಗಳನ್ನು ಶುರು ಮಾಡುತ್ತಿವೆ. ಎಲ್ಲ ಬ್ಯಾಂಕುಗಳ ಕ್ಯಾಲೆಂಡರ್‌ಗಳ ಜೊತೆ, ಕೋ ಓಪರೇಟಿವ್ ಬ್ಯಾಂಕುಗಳು ಮತ್ತು ವಿವಿಧ ಸಂಘಗಳೂ ಪೈಪೋಟಿಯಿಂದೆಂಬಂತೆ ಕ್ಯಾಲೆಂಡರ್ ಮುದ್ರಿಸಿ ಹಂಚುತ್ತಿವೆ.ವಾಲ್ ಕ್ಯಾಲೆಂಡರ್‌. ಪಾಕೆಟ್ ಕ್ಯಾಲೆಂಡರ್‌ನಂತೆ ಕಣ್ಣೀರಿನ ಕ್ಯಾಲೆಂಡರ್ ಕೂಡಾ ಇರತ್ತಂತೆ. ನೃತ್ಯ ಮತ್ತು ಸಂಗೀತ  ಕ್ಯಾಲೆಂಡರ್‌ಗಳೂ ಇದ್ದವು. ನಿನ್ನೆ ಮೈಸೂರಲ್ಲಿ ನನ್ನ ಮನೆಗೆ ಸಿಲಿಕಾನ್ ಕಂಟ್ರೊಲ್ಸ್‌ ಅಂದರೆ ನನಗೆ ಇನ್ವರ್ಟರ್ ಬ್ಯಾಟರಿಯನ್ನು ಚಾಲ್ತಿಯಲ್ಲಿ ಇಡುವವರು ಕ್ಯಾಲೆಂಡರ್ ನನ್ನ ಬಾಗಿಲಲ್ಲಿ ಇಟ್ಟು ಹೋಗಿದ್ದಾರೆ ಅಂತೆ. ಒಂದು ವಿಷಯ ಮಾತ್ರ ಇಲ್ಲಿ ಗಮನಕ್ಕೆ ಬರುತ್ತದೆ. ಕ್ಯಾಲೆಂಡರ್ನಲ್ಲಿ ತಿಂಗಳ ಹೆಸರುಗಳ ಜೊತೆ ಭಾರತೀಯ ತಿಂಗಳುಗಳ ಹೆಸರುಗಳನ್ನೂ  ಮುದ್ರಿಸುತ್ತಾರೆ. ಉದಯವಾಣಿ ಕ್ಯಾಲೆಂಡರ್‌ನಲ್ಲಿ ತುಳು ತಿಂಗಳುಗಳ ಹೆಸರುಗಳಾದ ಪಗ್ಗು, ಬೇಷ್ಯ, ಕಾರ್ತೆಲ್, ಆಟಿಯಿಂದಾ ಹಿಡಿದು ಪೊನ್ನಿ ಮಾಯಿ ಸುಗ್ಗಿಗಳ ಹೆಸರುಗಳು ರಾರಾಜಿಸುತ್ತಿವೆ. ಪ್ರಕೃತಿಯು ಮತ್ತು  ಭೂಮಿ ಕೊಡುವ ಬೆಳೆ ಮಳೆಗಳ ಜೊತೆ ಸಾಗುತ್ತದೆ. ನಾನು ಬಾಲ್ಯದಲ್ಲಿ ಎಲ್ಲ ವರ್ಗಗಳ ತಿಂಗಳುಗಳ ಹೆಸರುಗಳನ್ನು ಬಾಯಿಪಾಠ ಮಾಡಬೇಕಾಗಿತ್ತು. ಹಾಗಾಗಿ ಜಮಾದಿ ಲಾವಲ್, ಜಲ್ಹಜ್ ಎಂಬೆಲ್ಲ ಹೆಸರುಗಳು ನನಗೆ ನೆನಪಿವೆ.    

ಈಗ ಕ್ಯಾಲೆಂಡರ್‌ನ ತಿಂಗಳುಗಳ ಹೆಸರುಗಳ ಬಗ್ಗೆ  ಬರೋಣ. ಜನವರಿ ಫೆಬ್ರವರಿ ತಿಂಗಳುಗಳು ಇತ್ತೀಚಿಗೆ ಅಂದರೆ ನಾಲ್ಕೈದು ಶತಮಾನಗಳ ಹಿಂದೆಯಷ್ಟೇ ಸೇರಿಸಲ್ಪಟ್ಟವು ಎಂದು ನಿಮಗೆ ತಿಳಿದಿದೆಯೇ? ಜುಲೈ ಅಗೋಸ್ತು ತಿಂಗಳುಗಳಾದ ನಂತರ ಬರುವವು ಸಪ್ಟಂಬರ್, ಅಕ್ಟೊಬರ್ ನವಂಬರ್  ಡಿಸೇಂಬರ್ ಗಳು ಏನನ್ನು ಸೂಚಿಸುತ್ತವೆ. ಸಪ್ತ, ಅಷ್ಟ, ನವಂ, ದಶಂ.. ಮುಂದೆ ಎರಡು ತಿಂಗಳುಗಳೂ ಇದ್ದವು. ಹಾಗಾಗಿ ಭಾರತದಂತೆ ಈ  ಎರಡು ತಿಂಗಳುಗಳು ಸೇರಿ ಮಾರ್ಚ್‌ ಹೊತ್ತಿನ ಯುಗಾದಿಗೆ ಬಂದು ಸೇರಿದವು. ಇನ್ನು ತಿಂಗಳುಗಳಲ್ಲಿಯ  ದಿನಗಳ ಹಂಚಿಕೆಯ ಗೊಂದಲಗಳು, ಫೆಬ್ರುವರಿಯಲ್ಲಿ ಬರೇ ಇಪ್ಪತ್ತೆಂಟು ದಿನಗಳು ಈಗ. ಡಿಕ್ಟೇಟರ್ ಜೂಲಿಯಸ್ ಸೀಝರ್ ತನ್ನ ಹೆಸರು ತಿಂಗಳುಗಳಲ್ಲಿ ಹೆಸರು ಇರಬೇಕೆಂದು ಬಯಸಿದರು. ಹಾಗಾಗಿ ಜುಲೈ ಬಂತು. ನಾನೇನು ಕಮ್ಮಿ ಅಂತ  ಅವರ ಉತ್ತರಾಧಿಕಾರಿ  ಆಗಸ್ಟಸ್  ತನ್ನ ಹೆಸರು ಕೂಡಾ ತಿಂಗಳುಗಳ ಹೆಸರು ಇರಬೇಕೆಂದು ಬಯಸಿದರು ಆಗಸ್ಟ್‌ ಬಂತು. ಅದಕ್ಕಾಗಿ ಫೆಬ್ರುವರಿ ತಿಂಗಳಿನಿಂದ ಎರಡು ದಿನಗಳನ್ನು ಎರವಲು ಪಡೆಯಲಾಯ್ತು. ಹಾಗಾಗಿ ಫೆಬ್ರುವರಿ ಬಡವಾಯ್ತು. ನಾಲ್ಕು ವರ್ಷಕ್ಕೊಮ್ಮೆ ಲೀಪ್ ಇಯರ್  ಅಂತ ನಮೂದಿಸಿ ಕೆಲವರ ಜನ್ಮ ದಿನ ನಾಲ್ಕು ವರ್ಷಕ್ಕೊಮ್ಮೆ ಬರುವಂತಾಯ್ತು. ಇರಲಿ.  

ಇಂಗ್ಲೀಷರು ಜೂಲಿಯನ್ ಕೆಲೆಂಡರ್‌ನಿಂದ  ಗ್ರೆಗೋರಿಯನ್ ಕೆಲೆಂಡರಿಗೆ ಶಿಫ್ಟ್‌ ಆದಾಗ 1752ರಲ್ಲಿ 11 ದಿನಗಳನ್ನು  ಬಿಟ್ಟೇ ಬಿಟ್ಟರು. ಆಗ ದೊಡ್ಡ ಗಲಾಟೆಯೇ ನಡೆಯಿತಂತೆ ಇಂಥ ಗೊಂದಲಗಳು  ಭಾರತದ ಪಂಚಾಂಗಗಳಲ್ಲಿಲ್ಲ. ಆದರೆ ನಮ್ಮವೇ ಆದ ಟಿ.ವಿ.ಗಳು ಮತ್ತು ವಿಜ್ಞಾನಿಗಳು ಭಾರತೀಯರ ನಂಬಿಕೆಯನ್ನು ಅಲುಗಾಡಿಸುತ್ತವೆ  

ಕಾರಣ ಸ್ಪಷ್ಟ ಅವರಿಗಿರುವ ಅಜ್ಞಾನ. ಮತ್ತು ಶಾಲೆಗಳಲ್ಲಿ ಇದರ ಬಗ್ಗೆ ಕಲಿಸದಿದ್ದುದೂ ಕಾರಣ.  

ಗ್ರಹಣದ ಬಗ್ಗೆ ಗೃಹಗಳ ಚಲನೆ ಬಗ್ಗೆ ಭಾರತೀಯ ಜ್ಯೋತಿಷ್ಯ ಶಾಸ್ತ್ರ ಸರಿಯಾದ ಮಾಹಿತಿ ಕೊಡುತ್ತದೆ. ಇದೊಂದು ವಿಜ್ಞಾನ ಅನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ ಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಬೇಡಿ ಎನ್ನುವುದೇ ಪ್ರಥಮ ವೈಜ್ಞಾನಿಕ ವಿಶ್ಲೇಷಣೆ. ಬೇರೆ ಬೇರೆ ಗ್ರಹಗಳು ಅಂದು ಎಲ್ಲೆಲ್ಲಿ ಇರುತ್ತವೆ ಎಂಬುದನ್ನು ಕರಾರು ವಾಕ್ಕಾಗಿ ಬಹಳ ಮೊದಲೇ ಹೇಳುವುದು ಜ್ಯೋತಿಷಿಗಳ ವೈಜ್ಞಾನಿಕತೆಗೆ ಸಾಕ್ಷಿ. ಅಲ್ಲಲ್ಲಿ ಪ್ರಕೃತಿಯ ಕೌತುಕವನ್ನು ಬೇರೆಯವರಿಗೆ ತಿಳಿಸುವ ಸಾಮರ್ಥ್ಯವನ್ನು ಹೊಂದಿದ್ದು ಪ್ರಥಮವಾಗಿ ಭಾರತೀಯರು. ಇದನ್ನು ಕ್ಯಾಲೆಂಡರ್‌ಗಳಲ್ಲಿ ಬರೆಯುತ್ತಾರೆ. ಬೇರೆ ದೇಶದವರು ಇನ್ನೂ ವಿಜ್ಞಾನದ ಬಗ್ಗೆ ಶೈಶವಾವಸ್ಥೆಯಲ್ಲಿ ಇದ್ದಾಗ ಸಾವಿರಾರು ವರ್ಷಗಳ ಹಿಂದೆ ಅಂದರೆ ಕ್ರಿಸ್ತಪೂರ್ವ 8000ದಲ್ಲಿಯೇ ಇದರ ಬಗ್ಗೆ ಭಾರತೀಯರು ಇದರ ಜ್ಞಾನವನ್ನು ಹೊಂದಿದ್ದು ಸ್ಪಷ್ಟವಾಗಿದೆ ಜಗತ್ತು ಅಂಕಗಣಿತ ಬೀಜಗಣಿತವನ್ನು ಶಾಲೆಯಲ್ಲಿ ಕಲಿಸುವ ಮೊದಲೇ ವೇದಗಣಿತದ ಆಧಾರದಲ್ಲಿ ಗುಣಿಸಿ ಭಾಗಿಸಿ ಗ್ರಹಣ ಮುಂತಾದ ವಿಷಯಗಳನ್ನು ತಿಳಿಸಿ ಪ್ರಪಂಚಕ್ಕೆ ಇದರ ಕೊಡುಗೆ ನೀಡಿದ್ದು ಭಾರತ. ಗ್ರಹಣವನ್ನು ನೋಡಿ ಅದು ಒಂದು ಕೌತುಕ ಅನ್ನುತ್ತದೆ ವಿಜ್ಞಾನ. ಬೇರೆ ವ್ಯಾಖ್ಯೆ ಅದರ ಹತ್ತಿರ ಇಲ್ಲ. ಅದರ ಚಿಜಿಣಜಡಿ  ಜಜಿಜಿಜಛಿ ನ್ನು ಹೇಳುತ್ತೆ ಜ್ಯೋತಿಷ್ಯ. ಸಮುದ್ರದ ಅಲೆಗಳಿಗೂ ಹುಣ್ಣಿಮೆಗೂ ಸಂಬಂಧವನ್ನು ಕಲ್ಪಿಸಿ ವಿವರಿಸಿದ್ದು ಪುರಾತನ ಜ್ಯೋತಿಷಿಗಳು ಮಾತ್ರ. ನಾವು ಮುಂದುವರಿದ ರಾಷ್ಟ್ರಗಳೆಂದು ಹೇಳಿಕೊಳ್ಳುವ ರಾಷ್ಟ್ರಗಳು ಇತ್ತೀಚಿನವರೆಗೆ ಯಾಕೆ ಇನ್ನೂ ಗ್ರಹಣವನ್ನು ರಡಿಜಚಿಣ ಜಡಿಜಚಿಜಜಿಣಟ ಜಚಿಥಿ ಅನ್ನುತ್ತದೆ? ಕಾರಣ ಸ್ಪಷ್ಟ ರಡಿಜಚಿಣ  ಜಡಿಜಚಿಜಜಿಣಟ ಜಚಿಥಿ, ಛಟಠರಜ ಟಠರಟಿ  ಎಂದೂ ಇನ್ನೂ ಕೆಲವು ಶಬ್ದಗಳು ಬಂದವು. ಇಸ್ಲಾಂ ಧರ್ಮದವರು ಸಲತ್ ಉಲ್ ಕುಸುಫ್ (ನಾನು ಕನ್ನಡದಲ್ಲಿ ಬರೆದದ್ದು ಸರಿ ಇದೆಯೋ ಗೊತ್ತಿಲ್ಲ ಇದು ಅರೇಬಿಕ್ ಶಬ್ದ) ಎಂದು ಪ್ರೇಯರ್ ಮಾಡುವುದು ಗ್ರಹಣದಲ್ಲಿ ಕಡ್ಡಾಯ. ಚಂದ್ರನನ್ನು  ನೋಡುವುದು ಇಸ್ಲಾಂನಲ್ಲಿ ಕಡ್ಡಾಯ. ಅವರ ದಿನಚರಿಯೇ ಚಾಂದ್ರಮಾನ ಪದ್ಧತಿಯಲ್ಲಿ. ಟಿಬೆಟ್‌ನವರು ಗ್ರಹಣದಂದು ಕೆಟ್ಟ ಕೆಲಸಗಳು ದ್ವಿಗುಣಗೊಳ್ಳುತ್ತವೆ ಅನ್ನುತ್ತಾರೆ. ದಕ್ಷಿಣ ಆಫ್ರಿಕಾದವರು ಗ್ರಹಣ ಅಂದರೆ ಸೂರ್ಯ ಚಂದ್ರರು ಜಗಳವಾಡುತ್ತಾರೆ ಅನ್ನುತ್ತಾರೆ. ಗರ್ಭಿಣಿಯರನ್ನು ಮನೆಯೊಳಗೇ ಕುಳಿತು ಅವಿತುಕೊಳ್ಳಿ ಅನ್ನುತ್ತಾರೆ. ಹತ್ತಿರ ಚಾಕು ಕೂಡಾ ಇಟ್ಟುಕೊಳ್ಳಿ ಅನ್ನುತ್ತಾರೆ. ಗೃಹಣದ ದಿನ ಅಜ್ಹ್‌ ಟೆಕ್ ದೇಶದವರು (ಕೊನೆಯ ರಾಜ 1428)ನವರು ಜಗತ್ತಿನಲ್ಲಿ ಭೂಕಂಪವಾಗುತ್ತದೆ ಅಂತ ಹೇಳಿ ಮನುಷ್ಯನನ್ನೇ ಬಲಿಕೊಡುತ್ತಿದ್ದರು  

ಗ್ರೀಕ ದೇಶವಂತೂ ಇನ್ನೂ ಮುಂದೆ ಹೋಗಿ ಗ್ರಹಣದ ದಿನ ರಾಜನನ್ನು ಮರಣದಿಂದ ಉಳಿಸಲು ಡಮ್ಮಿರಾಜನನ್ನು ಒಂದು ದಿನದ ಮಟ್ಟಿಗೆ ಅವನನ್ನೇ ರಾಜನೆಂದು ತಿಳಿಸಿ  ನಿಜವಾದ ರಾಜನನ್ನು ಉಳಿಸುತ್ತಿದ್ದರು ಗ್ರಹಣದ ನಂತರ ಡಮ್ಮಿ ರಾಜನನ್ನು ಕೊಲ್ಲುತ್ತಿದ್ದರು.  

ಚೀನಾ ದೇಶದಲ್ಲಿ ಇನ್ನೂ ಡ್ರಾಗನ್ ಸೂರ್ಯನನ್ನು ನುಂಗುತ್ತದೆ ಅನ್ನುತ್ತದೆ. ಇಷ್ಟೆಲ್ಲಾ ಇದ್ದರೂ ಜ್ಯೋತಿಷಿ ಎಂಬ ವಿಜ್ಞಾನಿಗಳನ್ನು ಭಾರತೀಯರೇ ಹಂಗಿಸುವುದು ಸರ್ವಥಾ ಸಲ್ಲದು ಇದು ನಮ್ಮನ್ನು ನಾವೇ ಆಡಿಕೊಂಡಂತೆ ಅಲ್ವೆ. ಪ್ರತೀವರ್ಷ ಜ್ಯೋತಿಷ್ಯ ಸಮ್ಮೇಳನ ದೇಶಾದ್ಯಂತ ನಡೆಯುತ್ತದೆ. ವಿದೇಶಿಯರೂ ಇದರಲ್ಲಿ ಭಾಗವಹಿಸುತ್ತಾರೆ.  

ಚಾಂದ್ರಮಾನ ಕ್ಯಾಲೆಂಡರ್ ಸೂರ್ಯನ ಚಲನೆಯನ್ನೂ ಕೂಡಿರುತ್ತದೆ. ಕೃಷಿಯ ಪಾತ್ರವನ್ನು ವಿವರಿಸಲು ಚಾಂದ್ರಮಾನ ಮತ್ತು ಸೌರ ಪಂಚಾಂಗ ಆಧರಿಸಲಾಯಿತು ಕೆಲವರು ಚಂದ್ರನ ಮತ್ತು ಸೂರ್ಯನ ಉಗಮದ ಟೈಮ್ ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಇದೆಯೆಂದು ತಿಳಿದುಕೊಳ್ಳಲೇ ಇಲ್ಲ. ಇಡೀ ಜಗತ್ತಿನ ಸೂರ್ಯೋದಯದ ಚಂದ್ರೋದಯದ  ಸಮಯಗಳನ್ನು ಕರಾರುವಾಕ್ಕಾಗಿ ಪಂಚಾಂಗಗಳು ಹೇಳುತ್ತವೆ. ಅವೆಲ್ಲವನ್ನೂ ಈಗಿನ ಕ್ಯಾಲೆಂಡರ್‌ಗಳಲ್ಲಿ ನಮೂದಿಸುತ್ತಾರೆ.  

ಭಾರತದ ಆಫೀಶಿಯಲ್ ಕ್ಯಾಲೆಂಡರ್ ಒಂದಿದೆಯಂತೆ. ಅದನ್ನು 1957ರಲ್ಲಿ ಪ್ರಾರಂಭಿಸಲಾಯ್ತು. ಅದನ್ನು ಯುಗಾದಿ ಪಾಡ್ಯದಂದು ಅಂದರೆ 22 ಮಾರ್ಚ್‌ 1957 ರಂದು ಪ್ರಾರಂಭಿಸಿದರು. ದೇಶದ 60 ಪಂಚಾಂಗಗಳನ್ನು ಅಭ್ಯಸಿಸಲಾಯ್ತಂತೆ. ಆದರೆ ಇನ್ನೂ ಅದು ಸಾರ್ವತ್ರಿಕವಾಗಿ ಅಂಗೀಕಾರವಾಗಿಲ್ಲ. ಭಾರತದಲ್ಲಿ ಪಂಚಾಂಗಗಳಲ್ಲಿ ಎಷ್ಟೋ ಜನ ಶಕಪುರುಷರು ಆಗಿ ಹೋದರು ಅವರ ಹೆಸರಲ್ಲಿ ಶಕ ಗಳು ಪ್ರಾರಂಭವಾದವು ಆದರೆ ಚಂದ್ರ ಸೂರ್ಯನ ಚಲನೆಗಳನ್ನೇ ಧಿಕ್ಕರಿಸಿ ಬರಿಯ ಅಂಕಿಗಳನ್ನು ತುಂಬುವ ಕ್ಯಾಲೆಂಡರ್  ಮಾತ್ರ ಇತ್ತು ಎಂದರೆ ಇದು ಸಾಧ್ಯವೇ. ಸಾಧುವ? ಕೇವಲ ದಿನಗಣನೆ ಅಷ್ಟೇ. ಯುಗಗಳನ್ನೇ ಐಡೆಂಟಿಫೈ ಮಾಡಿದ ಭಾರತದ ಹಿರಿಯರಿಗೆ ಯಾರು ಸಾಟಿ. ಭಾರತದ ಆರೋಹಣಂ  ಮಾರ್ತಾಂಡಸ್ಯ ಮತ್ತು ಪತನಂ ಮಾರ್ತಾಂಡಸ್ಯವನ್ನು ಸಲೀಸಾಗಿ ಂ ಒ ಮತ್ತು ಕಒ ಎಂದಾಗಿ ಹೇಳಿಕೊಂಡರು. ಭಾರತದ ಅಬ್ಜ ಮತ್ತು ಮಹಾಶಬ್ದ ಎಂಬ ಸಂಖ್ಯೆಗಳನ್ನು ಕಲಿಯಲು ನಮ್ಮಲ್ಲಿ ಬಹಳ ಸುಲಭ. ನಾವು ಸುಸಂಸ್ಕೃತ ರಾಗಬೇಕು ಅಷ್ಟೆ. ಎಲ್ಲ ಜಗತ್ತಿಗೂ ಒಂದೇ ಕ್ಯಾಲೆಂಡರ್ ಇದ್ದದ್ದನ್ನು ನಾವು ಆಗಲೇ ಪಡೆದಿದ್ದೆವು ಎಂಬುದನ್ನು  ಅಲ್ಲಗೆಳೆಯದಾದೀತೇ? ಬೇಂದ್ರೆಯವರು ಹೇಳುತ್ತಿದ್ದದ್ದು  ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ  ಮರಳಿ ಮರಳಿ ತರುತಿದೆ. ನೆನಪಾಯ್ತು. ಹಾಗಾದರೆ ನೀವೇ ಹೇಳಿ ಯಾವುದು ಹೊಸದು  ಯಾವುದು ಕ್ಯಾಲೆಂಡರ್ ಯಾವುದು ಹೊಸ ವರ್ಷ? ಇದೊಂದು ಪ್ರಬಂಧ ಅಷ್ಟೆ ಯಾರನ್ನೂ ದೂರುವುದಲ್ಲ. ಪಂಚಾಂಗಯುಕ್ತ ಕ್ಯಾಲೆಂಡರ್‌ನ್ನು ನೇತು ಹಾಕೋಣ ಭಾರತದ ಹಬ್ಬ ಹರಿದಿನಗಳನ್ನು ಆಚರಿಸೋಣ. ನಿಮ್ಮವನೇ ಆದ ರಘುಪತಿ ತಾಮ್ಹನ್ ಕರ್‌. ಮೈಸೂರು. ಇಡೀ ಲೇಖನವನ್ನು ತಾಳ್ಮೆಯಿಂದ ಓದಿದ್ದೀರಿ ಜೊತೆಗಿರುವ  ನನ್ನ ಕ್ಯಾಲೆಂಡರ್  ಕಣ್ಣು ಹಾಯಿಸುತ್ತಿರಲ್ಲ? ಆಂಧ್ರದ ಸ್ನೇಹಿತರೊಬ್ಬರು ಬರೆದಿದ್ದಂತೆ. ಇಡೀ ವರ್ಷದ ಕ್ಯಾಲೆಂಡರ್ ಇದು. ನೂರಾರು ವರ್ಷಗಳನ್ನು ತೋರಿಸುವ ಕ್ಯಾಲೆಂಡರ್‌ಗಳನ್ನು ತಂದಿದ್ದಾರೆ. ಭಾರತೀಯರು ಅದರಲ್ಲಿ ತಾರೀಕನ್ನು ನಮೂಡಿಸಿದರೆ ಸಾಕು. ವಾರ ವರ್ಷ ಗೊತ್ತಾಗತ್ತೆ. 

- * * * -