ಕೊರೊನಾ : 2020 ರ ಅಧ್ಯಕ್ಷೀಯ ಚುನಾವಣೆ ಮುಂದೂಡಿಕೆಗೆ ಟ್ರಂಪ್ ವಿರೋಧ

ವಾಷಿಂಗ್ಟನ್, ಏ 4,ಈ ವರ್ಷದ ನವೆಂಬರ್ 3 ರಂದು ಸಾರ್ವತ್ರಿಕ ಚುನಾವಣೆ ನಡೆಯುವ ನಿರೀಕ್ಷೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಸಾಂಕ್ರಾಮಿಕ ರೋಗ ವ್ಯಾಪಿಸಿರುವುದರಿಂದ ಅಧ್ಯಕ್ಷೀಯ ಚುನಾವಣೆ ಮುಂದೂಡಲಾಗುವುದೇ ಎಂಬ ಪ್ರಶ್ನೆಗೆ ನಿಗದಿಯಂತೆ ನವೆಂಬರ್ 3 ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದರು.ಅಂಚೆ ಮೂಲಕ ಮತದಾನಕ್ಕೆ ತಮ್ಮ ಬೆಂಬಲವಿಲ್ಲವೆಂದೂ, ಮತಗಟ್ಟೆಗಳಲ್ಲಿಯೇ ಮತದಾನ ನಡೆಯಬೇಕು ಎಂದೂ ಅವರು ಹೇಳಿದರು.ಕೊರೊನಾ ಸೋಂಕಿನ ಕಾರಣ ಅನೇಕ ದೇಶಗಳು ಚುನಾವಣೆ ಮುಂದೂಡುತ್ತಲಿವೆ.ಶುಕ್ರವಾರದ ವೇಳೆಗೆ ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ 7000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು 273880 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.