ರೈತರಿಗೆ 50 ಸಾವಿರ ವರೆಗೆ ಸಾಲಹೆಚ್ಚಿಸುವಂತೆ ಸಿಎಂಗೆ ಒತ್ತಾಯ

ರೈತರಿಗೆ 50 ಸಾವಿರ ವರೆಗೆ ಸಾಲಹೆಚ್ಚಿಸುವಂತೆ ಸಿಎಂಗೆ ಒತ್ತಾಯ  CM urged to increase loans to farmers up to Rs 50,000

ಲೋಕದರ್ಶನ ವರದಿ 

ಚಿಕ್ಕೋಡಿ 28 : ರೈತರಿಗೆ ನೀಡುತ್ತಿರುವ 40,000 ಸಾಲವನ್ನು ಹೆಚ್ಚಿಸಿ ಐವತ್ತು ಸಾವಿರ ನೀಡಬೇಕೆಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆ ಒತ್ತಾಯಿಸಿದ್ದೇನೆ. ಮುಂದಿನ ದಿನಮಾನಗಳಲ್ಲಿ ಹೋರಾಟ ಮಾಡಿ ಪ್ರತಿ ರೈತರಿಗೆ 50,000 ರೂಪಾಯಿಗಳು ಒದಗಿಸಿಕೊಡಲಾಗುವುದು ಎಂದು ವಿಧಾನ  ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹೇಳಿದರು.  

ಅವರು ತಾಲೂಕಿನ ಹತ್ತರವಾಟ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕಗ್ರಾಮೀಣ ಕೃಷಿ ಸಹಕಾರ ಸಂಘ ನಿ. ಹತ್ತರವಾಟ ಈ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು. ಹುಕ್ಕೇರಿ ಮತ್ತುಕತ್ತಿ ಮನೆತನ ಬೇರೆಅಲ್ಲ. ರಮೇಶ್‌ಕತ್ತಿ ಅವರು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷರಾದ ನಂತರ ಅನೇಕ ಸಂಸ್ಥೆಗಳಿಗೆ ಅನುದಾನವನ್ನು ನೀಡಿದ್ದಾರೆ. ನಾನು ಸಹ ಅನೇಕ ಪೀಕೆಪಿಎಸ್‌ಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ನೀಡಿದ್ದೇನೆ. ಈ ಭಾಗದಜನರ ಬೇಡಿಕೆಅನುಸಾರ ಸಂಕೇಶ್ವರ್ ಖಡಡಕಲಾಟ್ ಬಸ್ ಸೇವೆ ಪ್ರಾರಂಭಿಸಲಾಗುವುದು. ಮುಂದಿನ ದಿನಮಾನಗಳಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಎಂದರು.   

ಇದೇ ವೇಳೆ ಮಾಜಿ ಸಂಸದರಮೇಶ್‌ಕತ್ತಿ ಮಾತನಾಡಿ,50 ವರ್ಷದರಾಜಕಾರಣದಲ್ಲಿ ಪಿಕೆಪಿಎಸ್‌ಗಳಿಗೆ 25ರಿಂದ 50 ಲಕ್ಷ ವರೆಗೆಅನುದಾನ ನೀಡಿದರಾಜ್ಯದ ಏಕಮೇವ ಜನಪ್ರತಿನಿಧಿ ಪ್ರಕಾಶಯವರುಆಗಿದ್ದಾರೆ. ನಾನು ಸಹ ಈ ಸಂಸ್ಥೆಗೆ ಏಳು ಲಕ್ಷ ಪತ್ತಇದ್ದಿದ್ದು 4.5ಕೋಟಿ ಆಗಲಿಕ್ಕೆ ಸಹಾಯ ಮಾಡಿದ್ದೇನೆ. ರೈತಉದ್ಧಾರವಾದರೆ ಮಾತ್ರದೇಶಉದ್ಧಾರವಾಗಲಿದೆ. ನಾವು ಬೇರೆ ಪಕ್ಷದಲ್ಲಿಇದ್ರೂ ಸಹ ರೈತರಿಗೆ ನಮ್ಮತಮ್ಮ ಸಹೋದರಎಂದು ತಿಳಿದು ರೈತರ ಮನೆಯವರಿಗೆ ಯೋಜನೆಗಳು ನೀಡುವ ಕೆಲಸ ಮಾಡುತ್ತೇವೆ.   

ದಿವ್ಯ ಸಾನಿಧ್ಯ ವಹಿಸಿದ ಚಿಕ್ಕೋಡಿಯ ಸಂಪಾದನಾ ಮಹಾ ಸ್ವಾಮೀಜಿಗಳು ಮಾತನಾಡಿ, ಮುಖ್ಯಮಂತ್ರಿ ಹಾಗೂ ಸಚಿವರ ಮನೆಗೆ ಹೋಗಿ ಸಹಿ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳು ಮಂಜೂರು ಮಾಡುವ ಏಕೈಕ ವ್ಯಕ್ತಿ ಅಂದ್ರೆ ಪ್ರಕಾಶ್ ಹುಕ್ಕೇರಿ. ಸರ್ಕಾರಯಾವುದೇ ಪಕ್ಷದವಿರಲಿ ಕೆಲಸ ಮಾಡುವಛಲ ಪ್ರಕಾಶ್ ಹುಕ್ಕೇರಿ ಅವರಲ್ಲಿದೆ. ಪಿಕೆಪಿಎಸ್‌ಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಆಗಲಿ ಮೂಲಭೂತ ಸೌಕರ್ಯ ಕೆರೆಗಳು ತುಂಬುವ ಯೋಜನೆ, ಸೇರಿದಂತೆ ಅನೇಕ ಯೋಜನೆಗಳು ಮಾಡಿದ್ದಾರೆ ಎಂದು ಹೇಳಿದರು.   

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಅಧ್ಯಕ್ಷ ಮಾರುತಿಖೋತ, ಸಲಹೆಗಾರರಾದ ನ್ಯಾಯವಾದಿಗಳಾದ ಅಶೋಕ ಹರಗಾಪುರೆ,  ರವೀಂದ್ರ ಹಿರೇಕೊಡಿ, ಬ್ಯಾಂಕ್ ನೀರೀಕ್ಷಕ ಸಂತೋಷ್ ಪಾಟೀಲ್, ಉಪಾಧ್ಯಕ್ಷರಾದ ಮಾರುತಿ ಖೋತ, ನಿರ್ದೇಶಕರಾದ ಸದಾಶಿವ  ಇಣಚಿ, ಅಪ್ಪಾಸಾಬ ಮುರಗಾಲಿ, ದಿನಕರ ಮಗದುಮ್ಮ, ರಮೇಶ ನಂದಗಾವಿ, ಮನೋಹರ ಮಾದಿಗ, ರಾಜೇಂದ್ರಗುಂಡ ಕಲ್ಲೆ, ಸಾಹೇಬದಾದಾ  ಪಾಟೀಲ,   ಅನುಸುಯಾ ಮುಗಳಿ,   ಶೇವಂತಿ ಮಗದುಮ್ಮ, ಸೂರ್ಯಕಾಂತ ಬಡಿಗೇರ, ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ರೋಹಿತ್ ಘರಬುಡೇ ಸೇರಿದಂತೆ ಗ್ರಾಮದ ಗಣ್ಯರು ಸದಸ್ಯರುರೈತ ಬಾಂಧವರು ಉಪಸ್ಥಿತರಿದ್ದರು.