ಲಾಕ್ ಡೌನ್ ನಿಯಮ ಸಡಿಲ, ಅಧಿಕಾರಿಗಳ ಜೊತೆ ಸಿಎಂ ಪರಾಮರ್ಶೆ

ಬೆಂಗಳೂರು, ಏ 18,  ರಾಜ್ಯದಲ್ಲಿ ಇದೆ 20 ರ ಬಳಿಕ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಬೇಕೇ,  ಬೇಡವೇ ಎಂಬುದರ ಬಗ್ಗೆ  ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ದೇಶಾದ್ಯಂತ ಕೊರೊನಾ ಸೋಂಕಿನ ಕಾರಣ  ಮೇ.3 ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.  ಇಂದು ಮಧ್ಯಾಹ್ನ ಹಿರಿಯ ಅಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಲಿರುವ ಮುಖ್ಯಮಂತ್ರಿ ಅವರು,  ಲಾಕ್ ಡೌನ್ ಸಡಿಲಿಕೆ ಕ್ರಮ ಕುರಿತು  ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.ಲಾಕ್ ಡೌನ್ ಸಡಿಲಿಕೆ ಮಾಡಿದರೆ ಯಾವುದಕ್ಕೆ ವಿನಾಯಿತಿ ನೀಡಬೇಕು, ಯಾವುದಕ್ಕೆ ವಿನಾಯಿತಿ ಬೇಡ ಒಂದು ವೇಳೆ ಸಡಿಲಿಕೆ ಮಾಡಿದರೆ ಮುಂದೆ ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಇಂದಿನ ಸಭೆಯಲ್ಲಿ ಪರಾಮರ್ಶೆ ನಡೆಯಲಿದೆ.