ಮುಖ್ಯಮಂತ್ರಿ ಪದವಿ ಕೊಟ್ಟರೂ ಮತ್ತೆ ಬಿಜೆಪಿಗೆ ಹೂಗುವುದಿಲ್ಲ : ರಾಜು ಕಾಗೆ ಸ್ಪಷ್ಟನೆ

ಬೆಂಗಳೂರು,ನ 11:   ಮಾನಸಿಕವಾಗಿ ನಾನು ಬಿಜೆಪಿಯಿಂದ ದೂರ ಸರಿದಿದ್ದೇನೆ. ನಾಳೆ ಪಕ್ಷದ ಪ್ರಾಥ ಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ನ.13ರಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಯಾಗುತ್ತೇನೆ ಎಂದು ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ತಿಳಿಸಿ ದ್ದಾರೆ.    ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಳೆದರಡು ದಿನಗಳಲ್ಲಿ ಕಾಂಗ್ರೆಸ್ ನಾಯಕರಾದ ಮಾಜಿ ಸಚಿವ ಡಿಕೆ ಶಿವಕುಮಾರ್,ಪ್ರತಿಪಕ್ಷದ ನಾಯಕ ಸಿದ್ದರಾಮ ಯ್ಯ, ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ್ದೇನೆ.ಕಾಂಗ್ರೆಸ್ ನಾಯಕರು ತಮಗೆ ಟಿಕೆಟ್ ನೀಡುವ ಭರವಸೆ ನೀಡಿದ್ದು,ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.    ಕಾಗವಾಡ ಕ್ಷೇತ್ರದಿಂದ ಅನರ್ಹ ಶಾಸಕ ಶ್ರೀಮಂತ ಪಾಟೀಲ್ಗೆ ಬಿಜೆಪಿ ಟಿಕೆಟ್ ನೀಡಲು ಮುಂದಾಗಿದ್ದು, ಇದರಿಂದಾಗಿ ಅಸಮಧಾನಗೊಂಡು  ಮುಂದಿನ ರಾಜಕೀಯ ಭವಿಷ್ಯ ವನ್ನು ಕಾಂಗ್ರೆಸ್ ನಿಂದ ಮುಂದು ವರೆಸಲು ನಿರ್ಧಾರ ಕೈಗೊಂಡಿದ್ದಾರೆ.ಈಗ ನಾನು ಮನೆ ಯಲ್ಲಿ ಕುಳಿತರೆ ಜೀವನಪರ್ಯಂತ ಮನೆಯ ಲ್ಲಿಯೇ ಕೂರಬೇಕಾಗುತ್ತದೆ.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಅತೀ ಕಡಿಮೆ ಅಂತರಗಳಿಂದ ಸೋತಿದ್ದೇನೆ.ಈಗ ಪಕ್ಷ ಟಿಕೆಟ್ ನೀಡಲು ನಿರಾಕರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ತಮ್ಮಜೊತೆ ಒಮ್ಮೆ ಮಾತುಕತೆ ನಡೆಸಿದರು ಆದರೆ ಟಿಕೆಟ್ ನೀಡುವ ಭರವಸೆ ನೀಡಲಿಲ್ಲ ಎಂದರು.    ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕೊಡುತ್ತೇನೆ ಮುಂದಿನ ದಿನಗಳಲ್ಲಿ ಬದಲಾದ ಸನ್ನಿವೇಶ ದಲ್ಲಿ ತಮಗೆ ಸೂಕ್ತ  ಅಧಿಕಾರ ನೀಡುವ ಭರವಸೆ ನೀಡಿದ್ದಾರೆ.ಮುಖ್ಯಮಂತ್ರಿ ಅವರ ಮಾತು ಕೇಳಿ ಸುಮ್ಮನಾದೆ.ಆದರೆ ಈಗ ಶ್ರೀಮಂತ ಪಾಟೀಲ್ ಗೆಲ್ಲಿಸಿಕೊಂಡು ಬರಬೇಕು ಎಂದು ಷರ ತ್ತು ಹಾಕಿದ್ದಾರೆ.ಇದುವರೆಗೂಅವರ ವಿರುದ್ಧವೇ ಪ್ರಚಾರ ಮಾಡಿ ಈಗ ಅವರನ್ನೇ ಗೆಲ್ಲಿಸಲು ಹೋರಾಡುವುದು ನಮ್ಮ ತತ್ವ ಸಿದ್ದಾಂತಕ್ಕೆ ಸರಿ ಬರುವುದಿಲ್ಲ ಹಾಗಾಗಿ ಅದು ನನ್ನಿಂದ ಸಾಧ್ಯವಿಲ್ಲ ಎಂದಿದ್ದೇನೆ.ಇದರಿಂದಾಗಿಯೇ ಪಕ್ಷ ತೊರೆಯುವ  ನಿರ್ಧಾರ ಕೈಗೊಂಡಿದ್ದು .ಈಗ ಎಲ್ಲವೂ ಮುಗಿದ ಅಧ್ಯಾಯ ಎಂದರು.    ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಭರವಸೆ ಸಿಕ್ಕಿದೆ.ಈಗ ಬಿಜೆಪಿ ಅವರು ಎಷ್ಟೇ ಮನವೊಲಿಸುದರೂ ಪ್ರಯೋಜನವಿಲ್ಲ.ಎಲ್ಲವೂ ನಿರ್ಧಾರವಾಗಿದೆ.ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಪದವಿ ಕೊಟ್ಟರು ನಾನು ಮರಳಿ ಬಜೆಪಿಗೆ  ಸೇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.