ಸಿಇಟಿ ನೀಟ್ ಉಚಿತ ಶಿಕ್ಷಣ : ಎಸ್.ಎಂ.ಸಜ್ಜನ
CET NEET free education: S.M. Sajjan
ಲೋಕದರ್ಶನ ವರದಿ
ತಾಳಿಕೋಟೆ 17 : ಪಟ್ಟಣದ ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಡಿಯಲ್ಲಿರುವ ಬೆಸ್ಟ್ ಪಿ.ಯುಸೈನ್ಸ್ ಕಾಲೇಜು ಹಾಗೂ ಭವಿತಾ ನೀಟ್ ಅಕಾಡಮಿ ಬೆಂಗಳೂರು ಇವರ ವತಿಯಿಂದ 2 ತಿಂಗಳ ಅವಧಿಗೆ ಸಿಇಟಿ ಮತ್ತು ನೀಟ್ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅದ್ಯಕ್ಷರಾದ ಎಸ್.ಎಂ.ಸಜ್ಜನ ಅವರು ತಿಳಿಸಿದ್ದಾರೆ.
ಭವಿತಾನೀಟ್ ನೇತೃತ್ವದಲ್ಲಿ ಸಿಇಟಿ ನೀಟ್ ಉಚಿತ ನೀಡಲಾಗುತ್ತಿದ್ದು ಬೆಸ್ಟ್ ಪಿಯು ಕಾಲೇಜ್ ನ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಸಿಇಟಿ ನೀಟ್ ಉಚಿತ ಶಿಕ್ಷಣ ನೀಡಲಾಗುತ್ತಿದೆ ಇದರ ಹೊರತು ಪಡಿಸಿ ಬೇರೆ ಕಾಲೇಜ್ ನ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ. ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಸಿಇಟಿ ನೀಟ್ ಕೋಚಿಂಗ್ ಅತ್ಯಮೂಲ್ಯ ವಾಗಿದ್ದರಿಂದ ಎಲ್ಲ ಮಕ್ಕಳಿಗೆ ಸದುಪಯೋಗವಾಗಲೆಂಬ ಉದ್ದೇಶದಿಂದ ನಮ್ಮ ಘನಮಠೇಶ್ವರ ಶಿಕ್ಷಣ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ವಿದ್ಯಾರ್ಥಿಗಳು ಸದರಿ ಎರಡು ತಿಂಗಳವರೆಗೆ ನೀಡಲಾಗುವ ಸಿಇಟಿ ನೀಟ್ ಕೋಚಿಂಗ್ ದ ಸದುಪಯೋಗ ಪಡೆದುಕೊಳ್ಳಬೇಕೆಂದು ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಎಸ್.ಎಂ.ಸಜ್ಜನ ಅವರು ತಿಳಿಸಿದ್ದಾರೆ.
? ಸಮಯದಲ್ಲಿ ಮುಖ್ಯ ಕಾರ್ಯದರ್ಶಿಗಳಾದ ವಿವೇಕಾನಂದ ಸಜ್ಜನ, ಭವಿತಾ ನೀಟ್ ಅಕಾಡಮಿ ಬೆಂಗಳುರಿನ ಸಂಸ್ಥಾಪಕರಾದ ದತ್ತಾತ್ರೇಯ, ಗುರುವೃಂದದವರಾದ ಮೋಹನ್ ರಾವ್, ಡೇವಿಡ್ ರಾಜ್, ರಾಮಕೃಷ್ಣ, ಬೆಸ್ಟ ಪಿ ಯು ಕಾಲೇಜಿನ ಪ್ರಾಂಶುಪಾಲರಾದ ಎಮ್ ಮಾರಣ್ಣ, ಘನಮಠೇಶ್ವರ ಆಂಗ್ಲ ಮಾಧ್ಯಮದ ಪ್ರಾಂಶುಪಾಲರಾದ ಬಸವರಾಜ ಸಜ್ಜನ, ಜಯಚಂದ್ರನ, ಘನಮಠೇಶ್ವರ ಕನ್ನಡ ಮಾಧ್ಯಮದ ಮುಖ್ಯಗುರುಗಳಾದ ಆರ್ ಎಸ್ ದೇಸಾಯಿ, ಬಿ.ಇಡಿ ಕಾಲೇಜಿನ ಪ್ರಾಂಶುಪಾರಾದ ಟಿವಿ ಶೆಟ್ಟಿ ಅವರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 