ಬಾಗಲಕೋಟೆ: ತಾಲೂಕಿನ ತುಳಸಿಗೇರಿಯ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜೈವಿಕ ಗೊಬ್ಬರ ತಯಾರಿಸುವ ಘಟಕ್ಕೆ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಚಾಲನೆ ನೀಡಿದರು.
ಗುರುವಾರ ಜೈವಿಕ ಗೊಬ್ಬರ ತಯಾರಿಸುವ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಾಲೆಯ ಪ್ರತಿಯೊಬ್ಬ ಮಕ್ಕಳು ಬಿಸಿ ಊಟದ ನಂತರ ಉಳಿದ ಆಹಾರ ಪದಾರ್ಥವನ್ನು ಈ ಪೈಪ್ ಕಾಂಪೋಸ್ಟನಲ್ಲಿ ತಪ್ಪದೇ ಹಾಕಬೇಕು. ತುಂಬಿದ ತಕ್ಷಣ ಮೂರು ತಿಂಗಳು ಬಿಟ್ಟಾಗ ಜೈವಿಕ ಗೊಬ್ಬರ ತಯಾರಾಗುತ್ತದೆ. ಇದನ್ನು ಶಾಲಾ ಆವರಣದಲ್ಲಿ ಬೆಳೆಸಲಾದ ಗಿಡ, ಸಸಿಗಳಿಗೆ ಹಾಕಲು ಬಳಸಬೇಕು. ಬಿಸಿ ಊಟದ ನಂತರ ಉಳಿದ ಯಾವುದೇ ಪದಾರ್ಥವನ್ನು ವೆಸ್ಟ್ ಮಾಡದೇ ಜೈವಿಕ ಗೊಬ್ಬರ ತಯಾರಿಕೆಗೆ ಬಳಸುವಂತೆ ತಿಳಿಸಿದರು.
ಇಂತಹ ಜೈವಿಕ ಗೊಬ್ಬರ ಘಟಕವನ್ನು ಗ್ರಾಮ ಪಂಚಾಯತ ವತಿಯಿಂದ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಕೇವಲ ಶಾಲಾ ಆವರಣದಲ್ಲಿ ಮಾತ್ರ ಅಲ್ಲದೇ ಮನೆಯ ಆವರಣದಲ್ಲಿಯೂ ಘಟಕ ಸ್ಥಾಪಿಸಬಹುದಾಗಿದೆ. ಘಟಕ ಸ್ಥಾಪನೆಗೆ ಒಂದು ಗುಂಡಿಯನ್ನು ತೋಡಿ ಅದರೊಳಗೆ ಒಂದು ಪೈಪ್ ಇಟ್ಟು ಬೆಲ್ಲದ ನೀರು, ಸಗಣೆ ನೀರು ಹಾಗೂ ಸ್ವಲ್ಪ ಮಣ್ಣು ಹಾಕಬೇಕು. ನಂತರ ಮನೆಯಲ್ಲಿ ಉಳಿದ ವೆಸ್ಟ ಹಸಿ ಪದಾರ್ಥಗಳನ್ನು ಹಾಕಿದರೆ ಸಾಕು ಜೈವಿಕ ಗೊಬ್ಬರ ತಯಾರಿಸಬಹುದಾಗಿದೆ ಎಂದು ತಿಳಿಸಿದರು.
ರೈತರು ತಮ್ಮ ಜಮೀನುಗಳಲ್ಲಿ ಜೈವಿಕ ಗೊಬ್ಬರ ತಯಾರಿಸುವ ಘಟಕವನ್ನು ಸ್ಥಾಪಿಸಿ ಬಂದಂತಹ ಗೊಬ್ಬರವನ್ನು ಜಮೀನುಗಳಿಗೆ ಬಳಸುವದರ ಮೂಲಕ ಹಾಗೂ ಪ್ಯಾಕ್ ಮಾಡಿ ಬೇರೆಯವರಿಗೆ ಮಾರಬಹುದಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿರುವ ಎಲ್ಲ ಶಾಲಾ ಕಾಲೇಜುಗಳಲ್ಲಿ ಜೈವಿಕ ಘಟಕ ಸ್ಥಾಪನೆಗೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಂತರ ತುಳಸಿಗೇರಿಯ ಮಾದರಿ ಶಾಲೆಯ ಊಟದ ಕೋಣೆಗೆ ಭೇಟಿ ನೀಡಿ ಆಹಾರ ಪದಾರ್ಥಗಳನ್ನು ಪರಿಶೀಲಿಸಿ ಉತ್ತಮ ಗುಣಮಟ್ಟದ ಆಹಾರವನ್ನು ತಯಾರಿಸಿ ಮಕ್ಕಳಿಗೆ ಬಳಸಲು ಬಿಸಿ ಊಟ ಅಡುಗೆಯವರಿಗೆ ತಿಳಿಸಿದರು. ಅಲ್ಲದೇ ಶಾಲಾ ಆವರಣದಲ್ಲಿ ಪರಿಸರವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಅಲ್ಲದೇ ಮಧ್ಯಾಹ್ನದ ಬಿಸಿಊಟವನ್ನು ಮಕ್ಕಳೊಂದಿಗೆ ಸವಿದರು.
ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾದ್ಯಾಯ ಸಿ.ಎ.ಸಣ್ಣಪ್ಪನವರ ಮಾತನಾಡಿ ತುಳಸಿಗೇರಿ ಶಾಲೆಯಲ್ಲಿ ಅಂದಾಜು 1000ಕ್ಕು ಹೆಚ್ಚು ಗಿಡಗಳನ್ನು ಬೆಳೆಸಲಾಗಿದೆ. ವಿವಿಧ ಔಷಧಿ ಸಸಿಗಳನ್ನು ಸಹ ಬೆಳೆಸಲಾಗಿದೆ. ಶಾಲಾ ಪ್ರಾರಂಭದಿಂದ 2 ವರ್ಷ ಶಿಕ್ಷಕರ, ಎಸ್ಡಿಎಂಸಿ ಅಧ್ಯಕ್ಷರ ಹಾಗೂ ಸದಸ್ಯರ ಹುಟ್ಟು ಹಬ್ಬದ ನಿಮಿತ್ಯ ಅವರ ಹೆಸರಿನಲ್ಲಿ ಗಿಡಗಳನ್ನು ಬೆಳೆಸಲಾಗುತ್ತಿತ್ತು. ಈಗ ಮಕ್ಕಳ ಹುಟ್ಟು ಹಬ್ಬದ ಸವಿನೆನಪಿಗಾಗಿ ಮಕ್ಕಳ ಹೆಸರಿನಲ್ಲಿಯೂ ಸಹ ಗಿಡಗಳನ್ನು ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿಮರ್ಿಸಲಾಗಿದೆ. ಈ ಶಾಲೆಗೆ ಏಶಿಯಾ, ಆಸ್ಟ್ರೇಲಿಯಾ ಹಾಗೂ ಪ್ರಾನ್ಸ ದೇಶದ ಪ್ರವಾಸಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಸ್.ಎಸ್.ದಾಸರ ಹಾಗೂ ನಾರಾಯಣ ದಾಸರ ಅವರು ತಮ್ಮ ಸ್ವಂತ ಖಚರ್ಿನಲ್ಲಿ ಶಾಲಾ ಆವರಣದಲ್ಲಿ ವಿವಿಧ ತರಹದ ಗಿಡಗಳನ್ನು ಹಾಗೂ ರಸ್ತೆಗಳನ್ನು ನಿಮರ್ಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತುಳಸಿಗೇರಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ವಿಜಯಾ ಲದ್ದಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎನ್.ವಾಯ್.ಕುಂದರಗಿ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಸ್ವಪ್ನಾ ನಾಯಕ ಹಾಗೂ ಗ್ರಾಮದ ಶಿಕ್ಷಣ ಪ್ರೇಮಿ ಓಬಳಪ್ಪ ದೊಡಮನಿ ಸೇರಿದಂತೆ ಇತರರು ಇದ್ದರು.
ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ
ಬಾಗಲಕೋಟೆ ಜಿಲ್ಲೆಯ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಕಡಿಮೆ ಫಲಿತಾಂಶ ಹೊಂದಿದ ಶಾಲೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೀಯೋಜನೆ ಮಾಡಲಾಗಿದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಮತ್ತು ಮಕ್ಕಳ ಬೆಳವಣಿಗೆಗಾಗಿ ನಿಯೋಜಿಸಲಾಗಿದ್ದು, ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಅಧಿಕಾರಿಗಳು ಯಾವ ವಿಷಯದ ಮೇಲೆ ಪರಿಣಿತಿ ಹೊಂದಿರುವಿರೋ ಆ ವಿಷಯದ ಮೇಲೆ ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ತರಗತಿ ತೆಗೆದುಕೊಳ್ಳತಕ್ಕದ್ದು. ಅಲ್ಲದೇ ಶೈಕ್ಷಣಿಕ ಪ್ರಗತಿಗಾಗಿ ಶಾಲಾ ಮುಖ್ಯ ಗುರುಗಳ ಹಾಗೂ ಸಹಶಿಕ್ಷಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಮಾರ್ಗದಶನ ನೀಡಿ ಅಲುಪಾಲನಾ ಮಾಡಲು ತಿಳಿಸಲಾಗಿದೆ.
-ಗಂಗೂಬಾಯಿ ಮಾನಕರ, ಜಿ.ಪಂ ಸಿಇಓ