ಕಳ್ಳರ ಗ್ಯಾಂಗ್ ತಿರುಗಾಡುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆ

ಕಳ್ಳರ ಗ್ಯಾಂಗ್ ತಿರುಗಾಡುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆ CCTV footage of a gang of thieves roaming around

ಲೋಕದರ್ಶನ ವರದಿ 

ಜಮಖಂಡಿ 16 : ನಗರದ ಕೆಲವು ಪ್ರದೇಶದ ಬಡಾವಣೆಗಳಲ್ಲಿ ನಾಲ್ಕಾರು ಕಳ್ಳರ ತಂಡ ತಡರಾತ್ರಿಯಲ್ಲಿ ಬೀಗವನ್ನು ಮುರಿದು ತಮ್ಮ ಕೈ ಚಳಕವನ್ನು ತೋರಿಸುತ್ತಿದ್ದಾರೆ. ಕಳ್ಳರ ತಂಡವನ್ನು ನೋಡಿದ ಜನರು ಭಯಭೀತಗೊಂಡಿದ್ದಾರೆ. 

ನಗರದ ಕೆಲವು ಕಡೆಗಳಲ್ಲಿ ಕಳ್ಳರ ಗ್ಯಾಂಗ್ ಮುಖಕ್ಕೆ ಮಂಕಿ ಕ್ಯಾಫ್ ಧರಿಸಿಕೊಂಡು. ಕೈಯಲ್ಲಿ ಕಬ್ಬಿನದ ಸಲಾಕೆಗಳನ್ನು ಹಿಡುಕೊಂಡು. ಮನೆ-ಮನೆಗಳಿಗೆ ತಿರುಗಾಡುತ್ತಾ. ಮನೆಯ ಮುಂದೆ ಇರುವ ಗೇಟ್‌ಗಳನ್ನು ತೆಗೆದು ಮನೆಗಳನ್ನು ಕಳ್ಳತನ ಮಾಡುತ್ತಿರುವ ಖದೀಮ ಕಳ್ಳರ ತಂಡ ಗಲಿಗಲಿಗಳಲ್ಲಿ ತಿರುಗಾಡುತ್ತಿದ್ದಾರೆ. 

ಕಳ್ಳರ ತಂಡವು ತಿರುಗಾಡುವ ದೃಶ್ಯಾವಳಿಗ ಚಿತ್ರಗಳು ಸಿಸಿ ಕ್ಯಾಮರಾಗಳಲ್ಲಿ ಶೆರೆಯಾಗಿದ್ದು.ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಡಿಯೋಗಳನ್ನು ನೋಡಿದ ಪ್ರತಿಯೊಂದು ಗಲಿಯ ಜನರು ಭಯಭೀತಗೊಂಡಿದ್ದಾರೆ. ನಸುಕಿನ ಜಾವದಲ್ಲಿ ಮುಸ್ಲಿಂ ಸಮಾಜದವರು ನಮಾಜ ಮಾಡಲು ಮಸೀದಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ತಡರಾತ್ರಿಯಲ್ಲಿ ಮಹಿಳೆಯೊಬ್ಬಳು ಮನೆಯ ಮುಂದೆ ಇರುವ ನಾಯಿಯ ಚಿರಾಟವನ್ನು ಕೇಳಿ ಎದ್ದು ಹೊರಗೆ ಬಂದು ನೋಡಿದರೆ.

ನಾಲ್ಕಾರು ಕಳ್ಳರ ತಂಡ ಮನೆಯ ಬಾಗಿಲಿನಲ್ಲಿ ನಿಂತಿರುವದನ್ನು ಕಂಡು ಮಹಿಳೆಯೊಬ್ಬಳು ಹೆದರಿ ಬಾಗಿಲವನ್ನು ಹಾಕಿಕೊಂಡು ಪಕ್ಕದ ಮನೆಯವನ್ನು ಕೂಗಿ ಕರೆದಿದ್ದಾಳೆಂದು ಜನರು ಹೇಳುತ್ತಿದಾರೆ. ಈ ಕಳ್ಳರ ಗ್ಯಾಂಗ್ ನೋಡಿದ ಜನತೆ ಭಯಭೀತಗೊಂಡಿದ್ದಾರೆ. ಪೋಲಿಸರು ರಾತ್ರಿ ಸಮಯದಲ್ಲಿ ಹೆಚ್ಚು ನಿಗಾವಹಿಸಬೇಕೆಂದು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದಾರೆ.