ಸಿದ್ದರಾಮಯ್ಯ ಸೊಸೆಯ ಪಬ್ ಮೇಲೆ ಸಿಸಿಬಿ ದಾಳಿ
ಬೆಂಗಳೂರು 09: ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿ ಬಂಧನಕ್ಕೆ ಸಿಸಿಬಿ ಖೆಡ್ಡ ತೋಡಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೊಸೆ ಒಡೆತನದ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯನವರ ಪತ್ನಿ ಸ್ಮಿತಾ ಒಡೆತನದ ಪಬ್ ಮೇಲೆ ಸಿಸಿಬಿ ಪೊಲೀಸರು ಅಬಕಾರಿ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪಬ್ಗೆ ಬೀಗ ಜಡಿದಿದ್ದಾರೆ.
ಲೀ ಮೆರೆಡಿಯನ್ ಹೋಟೆಲ್ನಲ್ಲಿ ಸ್ಮಿತಾ ಅವರು ಮೈ ಶುಗರ್ ಫ್ಯಾಕ್ಟರಿ ಎಂಬ ಪಬ್ ನಡೆಸುತ್ತಿದ್ದಾರೆ. ಈ ಹಿಂದೆ ಇದನ್ನು ರಾಕೇಶ್ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದರು. ಅವರ ನಿಧನದ ನಂತರ ಕಿರುತೆರೆ ನಟ ರೋಹನ್ ಗೌಡ ಹಾಗೂ ಸ್ಮಿತ ನಿರ್ವಹಣೆ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಅವಧಿಗೂ ಮೀರಿದ ಪಬ್ ನಡೆಯುತ್ತಿದ್ದರಿಂದ ಸಿಸಿಬಿ ತಂಡ ಹಾಗೂ ಅಬಕಾರಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ನೋಟಿಸ್ ಜಾರಿ ಮಾಡಿದ್ದಾರೆ.
ಅಬಕಾರಿ ಇಲಾಖೆ ನಿಯಮದ ಪ್ರಕಾರ ರಾತ್ರಿ 1 ಗಂಟೆವರೆಗೆ ಪಬ್ ತೆರೆಯಬೇಕು. ಆದರೆ ಶುಗರ್ ಫ್ಯಾಕ್ಟರಿ ಪಬ್ 4 ಗಂಟೆವರೆಗೆ ತೆರೆದಿದ್ದರಿಂದ ಸಿಸಿಬಿ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬೀಗ ಜಡಿದಿದ್ದಾರೆ. 10 ದಿನದೊಳಗೆ ನೋಟಿಸ್ ನೀಡಬೇಕು ಇಲ್ಲದಿದ್ದರೆ ಶಾಶ್ವತವಾಗಿ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದ್ದಾರೆ.
ನಾವು ದಾಳಿ ಮಾಡಿರುವುದು ನಿಜ. ಶುಗರ್ ಫ್ಯಾಕ್ಟರಿ ಪಬ್ ಅವಧಿಗೂ ಮೀರಿ ತೆರೆದಿದ್ದರಿಂದ ದಾಳಿ ಮಾಡಲಾಗಿದೆ. ನಿಯಮವನ್ನು ಉಲ್ಲಂಘಿಸಿದ್ದರಿಂದ ನೋಟಿಸ್ ನೀಡಿದ್ದೇವೆ. ಒಂದು ವೇಳೆ 10 ದಿನದೊಳಗೆ ಉತ್ತರ ಬಾರದಿದ್ದರೆ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ಪಶ್ಚಿಮ ವಲಯದ ಅಬಕಾರಿ ಆಯುಕ್ತ ಶಿವನೇಗೌಡ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಶುಗರ್ ಫ್ಯಾಕ್ಟರಿ ಪಬ್ ಈ ಹಿಂದೆಯೂ ಸಾಕಷ್ಟು ಬಾರಿ ನಿಯಮ ಉಲ್ಲಂಘನೆ ಮಾಡಿತ್ತೆಂಬ ಆರೋಪ ಕೇಳಿಬಂದಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಪಬ್ ಮೇಲೆ ದಾಳಿ ನಡೆಸುವಂತಹ ದುಸ್ಸಾಹಕ್ಕೆ ಯಾರೊಬ್ಬರೂ ಕೈ ಹಾಕಿರಲಿಲ್ಲ.
ರಾಕೇಶ್ ಸಿದ್ದರಾಮಯ್ಯ ಹಾಗೂ ಮೋಹನ್ ಗೌಡ ಪಾಲುದಾರಿಕೆಯಲ್ಲಿ ಪಬ್ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ರಾಕೇಶ್ ಹಠಾತ್ತನೆ ನಿಧನರಾದ ನಂತರ ಇದರ ಹೊಣೆಗಾರಿಕೆಯನ್ನು ಸ್ಮಿತಾ ನೋಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಸಿದ್ದರಾಮಯ್ಯನವರ ಸೊಸೆ ಪಾಲುದಾರಿಕೆಯ ಪಬ್ ಮೇಲೆ ಸಿಸಿಬಿ ಮತ್ತು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಇದು ರಾಜಕೀಯ ಸ್ವರೂಪ ಪಡೆದುಕೊಂಡರೂ ಅಚ್ಚರಿ ಇಲ್ಲ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 