ಬೆಂಗಳೂರು,
ಏ.18, ಕೊರೊನಾ ನಿಯಂತ್ರಿಸಲು ಲಾಕ್ ಡೌನ್ ಜಾರಿಯಲ್ಲಿದ್ದರೂ ಅಕ್ರಮವಾಗಿ
ಮದ್ಯ, ಸಿಗರೇಟ್, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ
ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ರಾಮಮೂರ್ತಿ ನಗರದಲ್ಲಿ ದಾಳಿ ನಡೆಸಿ, 1
ಸಾವಿರ ಟೆಟ್ರಾ ಪ್ಯಾಕ್ ವಿಸ್ಕಿ ಹಾಗೂ ಕೆಂಗೇರಿಯಲ್ಲಿ ತಂಬಾಕು ಉತ್ಪನ್ನಗಳನ್ನು
ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆಅಲ್ಲದೆ, ಆರ್ಎಂಸಿ
ಯಾರ್ಡ್ನಲ್ಲಿ ಪಿಎಂಎಚ್ ಟ್ರೇಡರ್ಸ್ ಮಳಿಗೆ ಮೇಲೆ ದಾಳಿ ನಡೆಸಿದ ಸಿಸಿಬಿ
ಅಧಿಕಾರಿಗಳು, 1.96 ಲಕ್ಷ ರೂ ಮೌಲ್ಯದ 560 ಬಂಡಲ್ ನ 11 ಸಾವಿರದ 200 ಪ್ಯಾಕ್ಸ್
ಬೀಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರ್ ಎಂ ಸಿ ಯಾರ್ಡ್
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ನು, ಕೊಡಿಗೇಹಳ್ಳಿಯ ಲಿಕ್ಕರ್ ಶಾಪ್ ಮೇಲೂ
ಸಿಸಿಬಿ ಪೊಲೀಸರು ದಾಳಿ ನಡೆಸಿ, 17 ಲೀಟರ್ ನ 96 ಪೌಚಸ್ ಗಳ 180 ಎಂಎಲ್ ಲಿಕ್ಕರ್
ಜಪ್ತಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಕೋಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.