CA ಪರೀಕ್ಷೆ: ಸಂದೀಪ ಜೇವೂರ, ಶ್ರೀದೇವಿ ಸಾರವಾಡ ತೇರ್ಗಡೆ

CA Exam: Sandeep Jaevoor, Sridevi Sarawad pass

ವಿಜಯಪುರ 04: The Institute of Chartered Accountants of India ನಡೆಸುವ 2025ನೇ ಸಾಲಿನ CA Intermediate (Group-1) ಪರೀಕ್ಷೆಯಲ್ಲಿ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂದೀಪ ಜೇವೂರ ಹಾಗೂ CA Foundation ಪರೀಕ್ಷೆಯಲ್ಲಿ ಶ್ರೀದೇವಿ ಸಾರವಾಡ ಈ ಇಬ್ಬರೂ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿರುತ್ತಾರೆ.  

ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ರಾಜೇಶ ಡಿ. ದರಬಾರ, ಗೌರವ ಕಾರ್ಯದರ್ಶಿ ಪ್ರಕಾಶ ಎಸ್‌. ಉಡುಪಿಕರ, ಆಡಳಿತ ಮಂಡಳಿಯ ಸದಸ್ಯರು, ಸಮನ್ವಯಾಧಿಕಾರಿ ಡಾ. ವ್ಹಿ. ಬಿ. ಗ್ರಾಮಪುರೋಹಿತ, ಪ್ರಾಚಾರ್ಯ ಟಿ. ಆರ್‌. ಕುಲಕರ್ಣಿ, ಎಲ್ಲ ಉಪನ್ಯಾಸಕರು ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.