ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ವೈದ್ಯ ಭೂಮಿ ಪೂಜೆ
C.C. MLA Vaidya Bhoomi Pooja for road construction work
ಯರಗಟ್ಟಿ 21: ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ತಾಲೂಕಿನ ಕೆ. ಶಿವಾಪೂರ ಗ್ರಾಮದಲ್ಲಿ 2025-26 ನೇ ಸಾಲಿನ 'ಪ್ರಗತಿ ಕಾಲೋನಿ' ಯೋಜನೆಯಡಿ 50.00 ಲಕ್ಷ ಅನುದಾನದ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಅವರು ಭೂಮಿ ಪೂಜೆ ಮಾಡಿದರು.ನಂತರ ಮಾತನಾಡಿದ ಅವರು? ಗ್ರಾಮದ ಭರಮಪ್ಪ ಭಜಂತ್ರಿ ಅವರ ಮನೆಯಿಂದ ಪರ್ಪ ಭಜಂತ್ರಿ ಅವರ ಮನೆಯವರೆಗಿನ ಈ ಸಿ.ಸಿ. ರಸ್ತೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳ ಹಾಗೂ ಕಾಲೋನಿಯ ಜನರ ಸುಗಮ ಸಂಚಾರಕ್ಕೆ ಇದ್ದ ಬಹುದಿನಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ.ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಿಂದ ಮತ್ತು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.?
ಗ್ರಾ. ಪಂ. ಅಧ್ಯಕ್ಷ ತವನಪ್ಪ ಟೋಪಣ್ಣವರ, ಶಿಂಗಯ್ಯ ಮಠಪತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಎಇಇ ಬಸವರಾಜ ಅಯ್ಯನಗೌಡರ, ಪಿಡಿಓ ಸಂಕಪ್ಪ ಪುಡಿ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಯರಗಟ್ಟಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬನವರ, ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಸತೀಶ ಜಾರಕಿಹೊಳಿ ಆಪ್ತಸಹಾಯಕ ಅರವಿಂದ ಕಾರ್ಚಿ, ಪ್ರಕಾಶ ವಾಲಿ, ಪರಕಾಶ ಸೂಣದೋಳಿ, ಸಿದ್ದಲಿಂಗಯ್ಯ ಕುಂದರಗಿ, ಈಶ್ವರ ಕೌಜಲಗಿ, ಶಿವನಪ್ಪ ದಾಸಯ್ಯನವರ, ಸುರೇಶ ಪೊಲೀಸ್, ಗುಡುಸಾಬ ಮುಗಟಖಾನ, ಮಹಾದೇವ ಕುಂದರಗಿ, ಶಿವನಗೌಡ ಗೌಡರ, ಬಂಗಾರೆಪ್ಪ ಹರಳಿ, ವಿಠ್ಠಲ ಬಂಟನೂರ, ಮಲಿಕಸಾಬ ಬಾಗವಾನ, ಹಿರಿಯರು, ಸ್ಥಳೀಯ ಮುಖಂಡರು, ಪಕ್ಷದ ಮುಖಂಡರು ಹಾಗೂ ಶಿವಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು 