ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಯಂಕಪ್ಪ ಅವಿರೋಧ ಆಯ್ಕೆ
C. Yankappa elected unopposed as new president of Cooperative Society
ಲೋಕದರ್ಶನ ವರದಿ
ಕಂಪ್ಲಿ 28: ತಾಲೂಕಿನ ಸಣಾಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಯಂಕಪ್ಪ ಅವಿರೋಧವಾಗಿ ಆಯ್ಕೆಗೊಂಡರು. ಇಲ್ಲಿನ ಸಹಕಾರ ಸಂಘದ ಕಛೇರಿಯಲ್ಲಿ ಹಿಂದಿನ ಅಧ್ಯಕ್ಷ ವೆಂಕಟರಾಮರಾಜು ಅವರ ರಾಜಿರಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಯಂಕಪ್ಪ ಮತ್ತು ಗೌಡ್ರು ಚಮ್ಮವೀರ ನಾಮಪತ್ರ ಸಲ್ಲಿಸಿದ್ದರು. ಕೊನೆಗಳಿಗೆಯಲ್ಲಿ ಚನ್ನವೀರ ಇವರು ನಾಮಪತ್ರ ವಾಪಸ್ಸು ಪಡೆದ ಹಿನ್ನಲೆ ನೂತನ ಅಧ್ಯಕ್ಷ ಸ್ಥಾನಕ್ಕೆ ಸಿ.ಯಂಕಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ ಘೋಷಿಸಿದರು.
ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಉಪಾಧ್ಯಕ್ಷ ಡಿ.ಹನುಮಯ್ಯ, ಪಿ.ಮೂಕಯ್ಯಸ್ಚಾಮಿ, ಜಿ.ವಿರೇಶಪ್ಪ, ವೆಂಕಟರಾಮರಾಜು, ಪಿ.ಚೊಕ್ಕರಾವ್, ವಿ.ವೆಂಕಟೇಶ, ಶಾಮೀದ್ ಸಾಬ್, ಅಗೆದಾಳ್ ವಿರೇಶ, ಗೌಡ್ರು ಚನ್ನವೀರ, ನಾಮನಿರ್ದೇಶಿತ ಸದಸ್ಯ ಕಂಬಳಿ ಚನ್ನಪ್ಪ, ಕಂಪ್ಲಿ ಬಿಡಿಸಿಸಿ ಕ್ಷೇತ್ರಧಿಕಾರಿ ಕೆ.ಚಂದ್ರರೆಡ್ಡಿ, ಮುಖ್ಯಕಾರ್ಯನಿರ್ವಾಹಕ ಎ.ಶಿವಕುಮಾರ ಇದ್ದರು. ನಂತರ ನೂತನ ಅಧ್ಯಕ್ಷಗೆ ಮಾಲಾರೆ್ಣ ಮೂಲಕ ಗೌರವಿಸಲಾಯಿತು. ಈ ವೇಳೆ ಸ್ಥಳೀಯ ಮುಖಂಡರಾದ ಕೆ.ಭಾಸ್ಕರ್ ರೆಡ್ಡಿ, ವೈ.ರಮಣಯ್ಯ, ಶಾಮ್ ಸುಂದರ್, ಶೇಕಪ್ಪ, ಸಿದ್ ಬಸಪ್ಪ, ವಕೀಲ ಹನುಮಂತಪ್ಪ, ವಕೀಲ ವಿರುಪಾಕ್ಷಪ್ಪ , ಸಿದ್ದಯ್ಯಸ್ವಾಮಿ, ಜಡೆಪ್ಪ, ಸಿಬ್ಬಂದಿಗಳಾದ ಹರೀಶ್, ವಿ.ಬಸವರಾಜ, ಚನ್ನವೀರ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 