ಬ್ಯಾಹಟ್ಟಿ ಗ್ರಾಮದ ರಸ್ತೆ ನಾಳೆಯಿಂದಲೇ ಪ್ರಾರಂಭಮಾಡಲು ಆದೇಶ
Byahatti village road to be started from tomorrow
ಬ್ಯಾಹಟ್ಟಿ ಗ್ರಾಮದ ರಸ್ತೆ ನಾಳೆಯಿಂದಲೇ ಪ್ರಾರಂಭಮಾಡಲು ಆದೇಶ
ಹುಬ್ಬಳ್ಳಿ 10: ಕಳೆದ ಹಲವಾರು ತಿಂಗಳಿನಿಂದ ಸತತವಾಗಿ ಸುರಿದ ಭಾರಿ ಮಳೆಯಿಂದ ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕುಗಳಲ್ಲಿನ ರಸ್ತೆಗಳು ಹಾಳಾಗಿದ್ದು ಎಲ್ಲ ರಸ್ತೆಗಳನ್ನು ದುರಸ್ಥಿಪಡೆಸಲು ಅಂದಾಜು 400 ಕೋಟಿ ಅನುದಾನ ಬೇಕಾಗುತ್ತದೆ. ಸರ್ಕಾರದಿಂದ ಹಂತ ಹಂತವಾಗಿ ಎಲ್ಲ ರಸ್ತೆಗಳನ್ನು ದುರಸ್ಥಿ ಮಾಡಿ ರೈತರಿಗೆ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಸೂಚಿಸಿದರು.
ಅವರು ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ರೈತರು, ಗ್ರಾಮ ಪಂಚಾಯತ ಸದಸ್ಯರ ನಿಯೋಗ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ವೀರನಗೌಡ ಮರಿಗೌಡ್ರ ನೇತೃತ್ವದಲ್ಲಿ ವಿವಿಧ ರಸ್ತೆಗಳನ್ನು ಅಭಿವೃದ್ಧಿಪಡೆಸಲು ಭೇಟಿಯಾಗಿ ಮನವಿ ನೀಡಿದ ನಂತರ ಮಾತನಾಡಿದ ಅವರು ಅತೀಯಾಗಿ ಸುರಿದ ಮಳೆಯಿಂದ ರಸ್ತೆ ಹಾಗೂ ಬೆಳೆಗಳು ಹಾನಿಯಾಗುತ್ತಿವೆ. ಬೆಳೆ ಹಾಗೂ ಬೆಳೆವಿಮೆ ಪರಿಹಾರ ನೀಡಲು ಕೆಂದ್ರ ಹಾಗೂ ರಾಜ್ಯ ಸರ್ಕಾರದ ಮೂಲಕ ಒತ್ತಾಯಿಸಿ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. ಅತೀ ಹೆಚ್ಚು ಮಳೆಯಾಗಿ ಹಾನಿಯಾಗುತ್ತಿರುವದು ಮಳೆ, ಬಿಸಿಲು ಇದು ನಿಸರ್ಗ, ನಮ್ಮ ಕೈಯ್ಯಲ್ಲಿ ಇಲ್ಲ, ಅದನ್ನು ಎದುರಿಸಿ ಒಬ್ಬ ಜನಸೇವಕ ಶಾಸಕರಾಗಿ ಎಲ್ಲ ಜನರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆ ಎಂದರು.
ಈಗಾಗಲೇ ಸೂಪಾ ಅಣ್ಣಿಗೇರಿ ರಾಜ್ಯ ಹೆದ್ದಾರಿ 28 ರ ರಸ್ತೆಯು ಕಳೆದ ಐದು ವರ್ಷದಿಂದ ಬ್ಯಾಹಟ್ಟಿ ಗ್ರಾಮದಿಂದ ನವಲಗುಂದ-ಧಾರವಾಡ, ಸುಳ್ಳ, ಬ್ಯಾಹಟ್ಟಿ, ಹೆಬಸೂರ ಮಾರ್ಗವಾಗಿ ಈ ರಸ್ತೆ ಸಂಚಾರಕ್ಕೆ ಸಂಪೂರ್ಣ ಹಾಳಾಗಿದ್ದರಿಂದ ಸಾರ್ವಜನಿಕರೆಲ್ಲರೂ ವಾಯಾ ಹುಬ್ಬಳ್ಳಿ ಮೂಲಕ ಪ್ರಯಾಣಿಸುತ್ತಿದ್ದರು ನಾನು ಅಧಿಕಾರಕ್ಕೆ ಬಂದ ತಕ್ಷಣ ಸುಳ್ಳದಿಂದ ಬ್ಯಾಹಟ್ಟಿ-ಹೆಬಸೂರ ವರೆಗೆ ರಸ್ತೆ ಡಾಂಬರಿಕರಣ ಮಾಡಿ ಸಂಚಾರಕ್ಕೆ ಮುಕ್ತೊಗೊಳಿಸಿದ್ದೇವೆ. ಎರಡು ಕಡೆ ಡಾಂಬರ ಹಾಕಿದ ಮರುದಿವಸವೇ ಭಾರಿ ಮಳೆಯಾಗಿದ್ದರಿಂದ ಅಲ್ಲಲ್ಲಿ ರಸ್ತೆ ಹಾಳಾಗಿದ್ದು ಗುತ್ತಿಗೆದಾರರಿಗೆ ಕೂಡಲೇ ಸರಿಪಡಿಸಲು ಆದೇಶಿಸಿದ್ದೇನೆ ಎಂದರು.
ಬ್ಯಾಹಟ್ಟಿ ಗ್ರಾಮದ ಬ್ಯಾಹಟ್ಟಿ-ಕಿರೆಸೂರ-ಇಂಗಳಹಳ್ಳಿ ರಸ್ತೆಯಲ್ಲಿರುವ ದೊಡ್ಡಹಳ್ಳಕ್ಕೆ ಸೇತುವೆ ನಿರ್ಮಿಸಿ ರೈತರೆಲ್ಲರೂ ತಮ್ಮ ಜಮೀನುಗಳಿಗೆ ಹೋಗಿ ಬರಲು ಅನುಕೂಲವಾಗಿದೆ. ಮಳೆ ಬಂದಾಗ ಹಳ್ಳ ಕಟ್ಟಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಈ ಸೇತುವೆ ನಿರ್ಮಾಣಕ್ಕಾ ಗಿ ಕಳೆದ 10-15 ವರ್ಷಗಳಿಂದ ಗ್ರಾಮಸ್ಥರು ಅಧಿಕಾರದಲ್ಲಿದ್ದ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದರೂ ಅದು ಕೇವಲ ಭರವಸೆಯಾಗಿತ್ತೇ ಹೊರತು ಸಮಸ್ಯೆಗೆ ಯಾರೂ ಸ್ಪಂಧಿಸಿರಲಿಲ್ಲ. ಸೇತುವೆ ನಿರ್ಮಿಸಿದ್ದು ನನಗೆ ಸಮಾಧಾನ ತಂದಿದೆ ಎಂದರು.
ಇಂದು ಮನವಿ ಸಲ್ಲಿಸಿದ ರೈತರು ಬ್ಯಾಹಟ್ಟಿ-ಹಣಸಿ ರಸ್ತೆ, ಮೊರಬ ರಸ್ತೆ, ಹೆಬ್ಬಳ್ಳಿ ರಸ್ತೆ, ಹೂಗಾರ ಕೆರಿ ರಸ್ತೆ, ಇಂಗಳಹಳ್ಳಿ ರಸ್ತೆ, ಮುಂತಾದ ರಸ್ತೆಗಳನ್ನು ಅಭಿವೃದ್ಧಿ ಪಡೆಸಿ ರೈತರು ಬೆಳೆದ ಮುಂಗಾರು ಹೆಸರು ಬೆಳೆ ಒಕ್ಕಲು ಯಂತ್ರಗಳು ಹೋಗಿ ಬರಲು ಅನುಕೂಲ ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದಾಗ ನಾಳೆಯಿಂದಲೇ ರಸ್ತೆ ದುರಸ್ಥಿ ಮಾಡಲು ಅದೇಶಿಸಿದರು. ರೈತರ ಮನವಿಗೆ ಸ್ಪಂಧಿಸಿದ ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಗೆ ಗ್ರಾಮಸ್ಥರು ಗ್ರಾಮದ ಪರವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ವೀರನಗೌಡ ಮರಿಗೌಡ್ರ, ತಹಶೀಲ್ದಾರ ಜೆ.ಬಿ. ಮಜ್ಜಗಿ, ತಾ.ಪಂ. ಇಓ ರಾಮಚಂದ್ರ ಹೊಸಮನಿ, ತಾಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಿವಾನಂದ ಭೂಮಣ್ಣವರ, ತಾ.ಪಂ. ನಾಮನಿರ್ದೇಶಿತ ಸದಸ್ಯ ಬಸವರಾಜ ಬೀರಣ್ಣವರ, ಮುಖಂಡರುಗಳಾದ ಅಶೋಕ ಸ್ವಾದಿ, ರಾಜೇಸಾಬ ನದಾಪ, ಸೋಮು ಬೇಂಗೇರಿ, ಮಹಾದೇವಪ್ಪ ಹಡಗಲಿ, ಪ್ರಕಾಶಗೌಡ ಹನಮರಡ್ಡಿ, ಕೋಳಿವಾಡ ಗ್ರಾ.ಪಂ. ಅಧ್ಯಕ್ಷ ಬಸವರಾಜ ಜಂತ್ಲಿ, ಬಸಣ್ಣ ಶಾನವಾಡ, ಸಮೀರ ಪೀರಖಾನ, ನಿಂಗಪ್ಪ ಗುಡಿ, ಹನುಮಂತ ಆರೆಣ್ಣವರ, ಕಲ್ಲಪ್ಪ ನಾಯ್ಕನೂರ, ಮಹಾದೇವಪ್ಪ ರೂಗಿ, ದಾವಲಸಾಬ ಅಣ್ಣಿಗೇರಿ, ರಾಜು ಕಪಲಿ, ಅಶೋಕ ಕಾಳಿ, ರಾಜು ದ್ಯಾವನಗೌಡರ, ದ್ಯಾಮಣ್ಣ ಹಲಗತ್ತಿ, ಶಿವಾನಂದ ಬಂಡಿವಾಡ, ಅಣ್ಣಪ್ಪ ಕುಲಕರ್ಣಿ, ಸೈಯ್ಯದ ಬಾವಾಖಾನವರ, ಶಿವರಾಜ ಮಂಟೂರ, ರಾಜು ಬಿಕ್ಕಣ್ಣವರ, ಗಂಗಪ್ಪ ಬಡಿಗೇರ, ದ್ಯಾಮಣ್ಣ ಗಾಳಿ, ರಾಜು ಬೆಂತೂರ, ಗೀರೀಶ ಹಂಗರಕಿ, ಸಮೀರ ನಲವಡಿ, ರಾಜೇಸಾಬ ಅಣ್ಣಿಗೇರಿ, ರಮೇಶ ಶಾನವಾಡ, ಮಲ್ಲಿಕಾರ್ಜುನ ಕಂಬಳಿ, ದೇವಪ್ಪ ನಾಯಕನೂರ, ದೀಪು ಕಿರೆಸೂರ, ಬಸನಗೌಡ ಪಾಟೀಲ, ಬಸು ದ್ಯಾವನಗೌಡ್ರ, ಮಲ್ಲಪ್ಪ ಕಾಳಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 