ಬ್ಯಾಡಗಿ: ಸೋಯಾಬೀನ್ ಬಿತ್ತನೆಗೆ ರೈತರಿಗೆ ಹವಾಮಾನ ಸೂಚನೆ
Byadagi: Weather advisory for farmers for soybean sowing
ಲೋಕದರ್ಶನ ವರದಿ
ಬ್ಯಾಡಗಿ 28: ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ ಇಲ್ಲಿಯವರೆಗೆ 117.7 ಮೀ ಮೀ ಮಳೆಯಾಗಿದ್ದು ವಾಡಿಕೆ ಮಳೆ (56.9 ಮೀ ಮೀ )ಗಿಂತ ಶೇ 107 ಹೆಚ್ಚಾಗಿದೆ.ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೂ, ಮುಂಗಾರು ಇನ್ನೂ ಸ್ಥಿರವಾಗಿಲ್ಲ. ಮೇ 31ರ ವರೆಗೂ ಮಳೆಯ ಅವಕಾಶ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಪೂರ್ವ ಉತ್ತಮ ಮಳೆಯಾದಕಡೆಗಳಲ್ಲಿ ರೈತರು ಬಿತ್ತನೆಗೆ ಮುನ್ನ ಭೂಮಿಯನ್ನು ಸಿದ್ಧಪಡಿಸಿಕೊಳ್ಳಬೇಕು. ತಾಲೂಕಿನಲ್ಲಿ ಕಳೆದ ವರ್ಷ ಸೋಯಾಬೀನ್ ಕೃಷಿ ಇಲಾಖೆಯಿಂದ 240 ಕ್ವಿಂಟಾಲ್ ವಿತರಣೆಯಾಗಿ, 101 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿತ್ತು.
ಈ ಬಾರಿ 480 ಕ್ವಿಂಟಾಲ್ ವಿತರಣೆಯಾಗಿದೆ ಹಾಗೂ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಸಾಧ್ಯತೆ ಇದೆ. ರೈತರು ಮೊದಲ ಮಳೆಯನ್ನೇ ಆಧರಿಸಿ ಬಿತ್ತನೆ ಮಾಡಬಾರದು. ಒಂದು ಅಥವಾ ಎರಡು ಮಳೆಯ ಬಳಿಕ ಮಳೆ ಬಾರದೆ ಇದ್ದರೆ ಬೀಜ ಮೊಳಕೆಯೊಡೆಯುವಿಕೆಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಸೋಯಾಬೀನ್ ಬಿತ್ತನೆಗೆ ಮಣ್ಣಿನಲ್ಲಿ 3-5 ಸೆಂ.ಮೀ ಆಳದವರೆಗೆ ಸಮರ್ಕ ತೇವಾಂಶ ಮತ್ತು ತಂಪಾದ ವಾತಾವರಣ ಇರುವುದು ಅತ್ಯಗತ್ಯ. ಆದ್ದರಿಂದ ಸಾಕಷ್ಟು ಮಳೆಯಾದ ನಂತರವಷ್ಟೇ ಬಿತ್ತನೆ ಕೈಗೊಳ್ಳಬೇಕು. ಪ್ರಸ್ತುತ ತಾಲೂಕಿನಲ್ಲಿ ಚದುರಿದ ಮಳೆ ಹಾಗೂ ಗುಡುಗು ಮಿಂಚಿನ ಸಾದ್ಯತೆ ಕಂಡುಬರುತ್ತಿದ್ದು,
ಮುಂಗಾರು ಇನ್ನೂ ಸ್ಥಿರವಾಗದ ಹಿನ್ನೆಲೆ ರೈತರು ಆತುರದಲ್ಲಿ ಸೋಯಾಬೀನ್ ಬಿತ್ತನೆ ಮಾಡದೆ, ಸುಮಾರು 50-75 ಮೀ.ಮೀ ಪ್ರಮಾಣದ ಪರಿಣಾಮಕಾರಿ ಮಳೆ ಹಾಗೂ ಸಮರ್ಕ ಮಣ್ಣಿನ ತೇವಾಂಶ ಲಭ್ಯವಾದ ನಂತರ ಬಿತ್ತನೆ ಕೈಗೊಳ್ಳುವುದು ಸೂಕ್ತ. ರೈತರು ರಸಗೊಬ್ಬರ ಖರೀದಿಸುವಾಗ ಒಂದೇ ಸಂಸ್ಥೆ ಅಥವಾ ಒಂದೇ ರಸಗೊಬ್ಬರಕ್ಕೆ ಆಧ್ಯತೆ ನೀಡದೇ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಹಾಗೂ ಪೋಟ್ಯಾಸಿಯಂ ಒದಗಿಸುವ ಇತರೆ ಸಂಯುಕ್ತ ರಸಗೊಬ್ಬರಗಳನ್ನು ಬಳಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಸಲಹೆ ನೀಡಿದ್ದಾರೆ.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 