ಜುಲ್ವಾ 23: 2022ಕ್ಕೆ ದೇಶ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಿದ್ದು, ಅಷ್ಟರೊಳಗೆ ದೇಶದ ಪ್ರತಿಯೊಂದು ಕುಟುಂಬಗಳು ಸ್ವಂತ ಮನೆ ಹೊಂದುವುದು ನನ್ನ ಕನಸು ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತಿನ ವಾಲ್ಸಾಡದ ಜುಜ್ವಾದಲ್ಲಿಂದು ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು ,ಈ ಯೋಜನೆಯಡಿ ಅತ್ಯುತ್ತಮ ಗುಣಮಟ್ಟದ ಮನೆಗಳನ್ನು ಕಟ್ಟಬಹುದಾಗಿದೆ. ಯಾರೂಬ್ಬರು ನಯಾಪೈಸೆ ಲಂಚವನ್ನು ನೀಡಬಾರದು ಎಂದರು.
ಕಾನೂನು ಬದ್ದವಾಗಿ ಮನೆ ಪಡೆಯುತ್ತಿರುವ ಬಗ್ಗೆ ತಾಯಂದಿರು ಹಾಗೂ ಸಹೋದರಿಯರು ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರು ನಯಾಪೈಸೆ ಲಂಚವನ್ನು ನೀಡಿಲ್ಲ ಎಂದು ಮೋದಿ ಹೇಳಿದರು
ಪ್ರಧಾನಿ ಆವಾಸ್ ಯೋಜನೆಯಡಿ ನಿಮರ್ಿಸಲಾದ ಮನೆಗಳ ಗುಣಮಟ್ಟವನ್ನು ನೋಡಿ ಸಕರ್ಾರವು ಹಣವನ್ನು ನೀಡಿದೆ ಎಂದು ಭಾವಿಸಿದ್ದೆ, ಆದರೆ ಅದರೊಂದಿಗೆ ಈ ಕುಟುಂಬಗಳ ಬೆವರು ಸೇರಿದೆ ಎಂದರು.
ಮನೆ ಹೇಗೆ ಕಟ್ಟಬಹುದು, ಏನೆಲ್ಲಾ ಸಾಮಾಗ್ರಿಗಳು ಬೇಕಾಗುತ್ತದೆ. ಇದೆಲ್ಲಾವನ್ನು ಕುಟುಂಬಗಳೇ ನಿರ್ಧರಿಸುತ್ತಿದ್ದಾರೆ. ಗುತ್ತಿಗೆದಾರರಲ್ಲಿ ನಮ್ಮಗೆ ನಂಬಿಕೆ ಇಲ್ಲ. ಆದರೆ, ಕುಟುಂಬಗಳು ಸ್ವಂತವಾಗಿ ಮನೆ ನಿಮರ್ಾಣ ಕೆಲಸ ಮಾಡಿದ್ದಾಗ ಅದು ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ಎಲ್ಲರಿಗೂ ಮನೆ ಒದಗಿಸುವ ಗುರಿಯೊಂದಿಗೆ ಕೇಂದ್ರಸಕರ್ಾರದ ಪ್ರಮುಖ ಯೋಜನೆಯಡಿ ಗುಜರಾತ್ ರಾಜ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿಮರ್ಿಸಲಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು.
ಇಂದು ಬೆಳಗ್ಗೆ ಗುಜರಾತಿಗೆ ಭೇಟಿ ನೀಡಿದ ಪ್ರಧಾನಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಗುಜರಾತಿನ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ ಹಾಗೂ ಮೋದಿ ರಾಜಭವನದಲ್ಲಿ ಸೋಮನಾಥ ದೇವಾಲಯ ಟ್ರಸ್ಟ್ ಸಭೆಯಲ್ಲಿ ಪಾಲ್ಗೊಂಡಿದ್ದರು.