ನವದೆಹಲಿ/ಪ್ಯಾರಿಸ್, ಅ.12- ಭಾರತ ಮತ್ತು ಫ್ರಾನ್ಸ್ ನಡುವಣ ಬಹುಕೋಟಿ ರೂ.ಗಳ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಆರೋಪಗಳನ್ನು ಫ್ರೆಂಚ್ ವಿಮಾನ ತಯಾರಿಕಾ ಸಂಸ್ಥೆ ಡಸ್ಸೌಲ್ಟ್ ಏವಿಯೇಷನ್ ಮತ್ತೊಮ್ಮೆ ತಳ್ಳಿ ಹಾಕಿದೆ.
ಈ ಕುರಿತು ಮಾಡಲಾಗಿರುವ ಆರೋಪಗಳು ಮತ್ತು ತಪ್ಪು ಮಾಹಿತಿಗಳು ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತವಾದುದು ಎಂದು ಸ್ಪಷ್ಟಪಡಿಸಿರುವ ಡಸ್ಸೌಲ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಒಒ) ಎರಿಕ್ ಟ್ರಾಪೀಯರ್, ಈ ಒಪ್ಪಂದದಲ್ಲಿ ಭಾರತದ ರಿಲಯನ್ಸ್ ಗ್ರೂಪ್ನನ್ನು ಸಹಭಾಗಿತ್ವ ಸಂಸ್ಥೆಯನ್ನಾಗಿ ಆಯ್ಕೆ ಮಾಡಿಕೊಳ್ಳಲು ತಮ್ಮ ಸಂಸ್ಥೆಗೆ ಮುಕ್ತ ಅವಕಾಶ ನೀಡಲಾಗಿತ್ತು. ಇದರಲ್ಲಿ ಯಾವುದೇ ಒತ್ತಡ ಅಥವಾ ಬಲವಂತ ಇರಲಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮವೊಂದಕ್ಕಿ ನೀಡಿದ ವಿಶೇಷ ಸಂದರ್ಶನಲ್ಲಿ ಈ ಎಲ್ಲ ಅಂಶಗಳ ಬಗ್ಗೆ ಸ್ಪಷ್ಟೀಕರಣ ನೀಡಿರುವ ಎರಿಕ್, ಇದೊಂದು ಸಂಪೂರ್ಣ ಪಾರದರ್ಶಕ ಜಂಟಿ ಸಹಭಾಗಿತ್ವ ಯೋಜನೆ. ಇದಕ್ಕಾಗಿಯೇ 2017ರ ಫೆಬ್ರವರಿ 10ರಂದು ಡಸ್ಸೌಲ್ಟ್ ರಿಲಯನ್ಸ್ ಏರೋಸ್ಪೆಸ್ ಲಿಮಿಟೆಡ್(ಡ್ರಾಲ್ ಅಥವಾ ಡಿಆರ್ಎಎಲ್) ಎಂಬ ಜಾಯಿಂಟ್ ವೆಂಚರ್ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ನಂತರ 27ನೇ ಅಕ್ಟೋಬರ್ 2017ರಂದು ಇದನ್ನು ಅಧಿಕೃತವಾಗಿ ಘೋಷಿಸಲಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರಫೇಲ್ ಒಪ್ಪಂದದಲ್ಲಿ ರಿಲಯನ್ಸ್ ಸಹಭಾಗಿತ್ವ ಕೇವಲ ಶೇ.10ರಷ್ಟು ಮಾತ್ರ. ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಸಾಕಾರಗೊಳಿಸಲು ನಾವು ಬಿಟಿಎಸ್ಎಲ್, ಡೆಫ್ಸಿಸ್, ಕೈನೆಟಿಕ್, ಮಹೀಂದ್ರಾ, ಮೈನಿ, ಸ್ಯಾಮ್ಟೆಲ್ನಂಥ ಇತರ ಸಂಸ್ಥೆಗಳೊಂದಿಗೆ ಪಾಲುದಾರಿಕೆಗಾಗಿ ಸಹಿ ಮಾಡಿದ್ದೇವೆ. ಅಲ್ಲದೇ ಇತರ 100 ಸಂಸ್ಥೆಗಳ ಸಹಭಾಗಿತ್ವ/ಪಾಲುದಾರಿಕೆಗಾಗಿಯೂ ಮಾತುಕತೆ ಮುಂದುವರಿದಿದೆ. ವಾಸ್ತವ ಸಂಗತಿ ಹೀಗಿರುವಾಗ ರಿಲಯನ್ಸ್ನನ್ನೇ ಕಡ್ಡಾಯವಾಗಿ ಮತ್ತು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಹಾಗೂ ಇದರಲ್ಲಿ ಭಾರೀ ಅವ್ಯವಹಾರ-ಅಕ್ರಮ ನಡೆದಿದೆ ಎಂಬ ಆರೋಪಗಳೇ ಉದ್ಭವಿಸುವುದಿಲ್ಲ ಎಂದು ಎರಿಕ್ ವಿವರಿಸಿದ್ದಾರೆ.
ಎರಡು ಸಂಸ್ಥೆಗಳ ನಡುವಣ ಒಪ್ಪಂದವು ಉಭಯ ದೇಶಗಳ ಕಾನೂನುಗಳ ಪ್ರಕಾರವೇ ನಡೆದಿದೆ. ಇದು ಅತ್ಯಂತ ಪಾರದರ್ಶಕ ಮತ್ತು ನ್ಯಾಯಸಮ್ಮತವಾಗಿದೆ. ಇದರಲ್ಲಿ ಅವ್ಯವಹಾರದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿ ಆರೋಪಗಳ ಬೆಲೂನ್ನ ಗಾಳಿಯನ್ನು ತೆಗೆದಿದ್ದಾರೆ
ಎಚ್ಎಎಲ್ ಬದಲಿಗೆ ರಿಲಯನ್ಸ್ ಸಂಸ್ಥೆಯನ್ನೇ ಸಹಭಾಗಿತ್ವ ಸಂಸ್ಥೆಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಅವರು, ಇದೊಂದು ಜಂಟಿ ಸಹಭಾಗಿತ್ವ ಒಪ್ಪಂದ. ಇದು ತಾಂತ್ರಿಕ ಮತ್ತು ಕೈಗಾರಿಕೆ ಸಹಕಾರ ಸಂಬಂಧ ಹಿಂದೆಯೇ ಆದ ಒಡಂಬಡಿಕೆ. ಇದರ ಅನ್ವಯ ಫಾಲ್ಕನ್ 2000 ಮತ್ತು ರಫೇಲ್ ಯುದ್ಧ ವಿಮಾನಗಳಿಗೆ ಬಿಡಿಭಾಗಗಳ ಪೂರೈಕೆ ಒಪ್ಪಂದ ಏರ್ಪಟ್ಟಿದೆ.
ರಿಲಯನ್ಸ್ ಡಿಫೆನ್ಸ್ನನ್ನು ಆಯ್ಕೆ ಮಾಡಿಕೊಳ್ಳಲು ನಿದರ್ಿಷ್ಟ ಕಾರಣವೂ ಇದೆ. ಈ ಸಂಸ್ಥೆಯ ಕೇಂದ್ರ ಕಚೇರಿ ಮಹಾರಾಷ್ಟ್ರದ ನಾಗ್ಪುರ್ನಲ್ಲಿದೆ. ಅಲ್ಲಿ ಭೂಮಿ, ವಿಮಾನ ರನ್ವೇ ನೇರ ಸೌಲಭ್ಯ ಸೇರಿದಂತೆ ಮತ್ತಿತರ ಅಗತ್ಯ ಸೌಕರ್ಯಗಳಿವೆ. ಹೀಗಾಗಿ ಇದಕ್ಕೆ ರಿಲಯನ್ಸ್ನನ್ನೇ ಆರಿಸಿಕೊಳ್ಳಲಾಯಿತು. ಇದನ್ನು ಆಯ್ಕೆ ಮಾಡಲು ನಮಗೆ ಮುಕ್ತ ಅವಕಾಶವೂ ಇತ್ತು ಎಂದು ತಿಳಿಸಿದ್ದಾರೆ.
ವಿವಾದಗಳು ಯಾವಾಗಲೂ ದುರದೃಷ್ಟಕರ. ನಾನು ಅತ್ಯಂತ ತಾಳ್ಮೆಯಿಂದ ಇದ್ದೇನೆ. ಡಸ್ಸೌಲ್ಟ್ ಮತ್ತು ಭಾರತದ ನಡುವಣ ಸಹಕಾರ ಸಂಬಂಧ ಇಂದು ನಿನ್ನೆಯದ್ದಲ್ಲ. 65 ವರ್ಷಗಳ ಹಳೆ ಸಂಬಂಧವಿದೆ. ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ನಾವೀಗ ಹೊಸ ಸಹಕಾರ ನೀಡುತ್ತಿದ್ದೇವೆ. ಇದನ್ನು ಮುಂದುವರಿಸಲು ನಮಗೆ ಹೆಮ್ಮೆ ಮತ್ತು ಸಂತೋಷವಾಗುತ್ತದೆ ಎಂದು ಅವರು