ಮಹಾನಗರ ಪಾಲಿಕೆಯಿಂದ ಉದ್ಯಮಿ ರಾಜೇಂದ್ರ ಶೆಟ್ಟಿ ಅವರಿಗೆ ಧೀಮಂತ ಪ್ರಶಸ್ತಿ

ಮಹಾನಗರ ಪಾಲಿಕೆಯಿಂದ ಉದ್ಯಮಿ ರಾಜೇಂದ್ರ ಶೆಟ್ಟಿ ಅವರಿಗೆ ಧೀಮಂತ ಪ್ರಶಸ್ತಿ    Businessman Rajendra Shetty receives Dhimantha Award from the Municipal Corporation

ಹುಬ್ಬಳ್ಳಿ 11: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ  ಹೋಟೆಲ್ ಲೀಲಾವತಿ ಪ್ಯಾಲೇಸ್ನಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಖ್ಯಾತ ಹೋಟೆಲ್ ಉದ್ಯಮಿ ರಾಜೇಂದ್ರ ಶೆಟ್ಟಿ ಅವರಿಗೆ  ಕನ್ನಡ ರಾಜ್ಯೋತ್ಸವ  ಶುಭ ಸಂದರ್ಭದಲ್ಲಿ    ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಧೀಮಂತ ಪ್ರಶಸ್ತಿ ನೀಡಿ   ಗೌರವಿಸಿದ್ದಕ್ಕೆ  ಪಂಜುರ್ಲಿ ಗ್ರುಪ್ ಆಫ್ ಹೋಟೆಲ್ ಇಂಡಸ್ಟ್ರೀಸ್ನ ಸಂಸ್ಥಾಪಕರು, ಪುಣೆ, ಹುಬ್ಬಳ್ಳಿ ಧಾರವಾಡ, ದಾವಣಗೆರೆ, ಬೆಳಗಾವಿ ನಗರಗಳಲ್ಲಿ ಹತ್ತಾರು ಹೋಟೆಲ್ ಗಳನ್ನು ಪ್ರಾರಂಭ ಮಾಡಿ   ಸಾವಿರಾರು ಜನರಿಗೆ ಉದ್ಯೋಗದ ಅವಕಾಶ ಕಲ್ಪಿಸಿರುವ ಹೋಟೆಲ್ ಕಾರ್ಮಿಕರ ಒಡೆಯನಾಗಿರುವ, ಆತ್ಮೀಯರು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿಶಿಷ್ಟ ಶುಚಿ, ರುಚಿಯಾದ  ಆಹಾರ ತಿನಿಸುಗಳನ್ನು ತಯಾರಿಸಿ ಊಣ ಬಡಿಸಲು ಪಣ ತೊಟ್ಟಿರುವ ರಾಜೇಂದ್ರ ಶೆಟ್ಟಿ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ  ಮಾಲಾರೆ​‍್ಣ ಮಾಡಿ ಗ್ರಂಥ ನೀಡಿ ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಹುತ್ಪೂರ್ವಕವಾಗಿ ಶುಭಾಶಯ ಕೋರಿದರು. ಸುಜಯ ಸುರೇಶ ಹೊರಕೇರಿ,  ಸೋಹನ್ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊ ಎಸ್‌.ಎಂ.ಸಾತ್ಮಾರ, ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಹೋಟೆಲ್ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.ರಾಜೇಂದ್ರ ಶೆಟ್ಟಿ ಅವರು ಹೋಟೆಲ್ ಉದ್ಯಮದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ, ದೇಶಕ್ಕೆ ಏನಾದರೂ ಸೇವೆ ನೀಡಬೇಕೆಂಬ ಆಶೆಗಳನ್ನು ತಮ್ಮ ಹೋಟೆಲ್ ಗಳಲ್ಲಿ ಈಡೆಸಿದ್ದಾರೆ. ಹೋಟೆಲ್ ಒಳಗಡೆ ಹೆಜ್ಜೆ ಇಟ್ಟಾಗ ಪ್ರತಿ ಹೆಜ್ಜೆಗೂ ಇಲ್ಲಿನ ಗೋಡೆಗಳ ಮೇಲಿನ ಭಿತ್ತಿ ಚಿತ್ರಗಳು ಮೈರೋಮಾಂಚನಗೊಳಿಸುತ್ತದೆ. ಭಿತ್ತಿ ಚಿತ್ರಗಳು ಸಾಮಾನ್ಯ ಭಿತ್ತ ಚಿತ್ರಗಳಲ್ಲ ಬದಲಾಗಿ ಈ ದೇಶ ಪ್ರೇಮಿಗಳಾದ ಮಹಾನ್ ಸಾಧಕರ ಪೋಟೂಗಳು, ಸ್ವಾತಂತ್ರ್ಯ ಹೋರಾಟಗಾರರು, ಆಧ್ಯಾತ್ಮ, ಸಾಹಿತ್ಯ, ಸಂಗೀತ, ಜನಸೇವೆ, ರಾಜಕೀಯ, ಸಾಮಾಜಿಕ, ವೈದ್ಯಕೀಯ, ಸಿನೇಮಾ ರಂಗಗಳಲ್ಲಿ ಮಹೋನ್ನತ ಸಾಧನೆ ಮಾಡಿದವರ ಪೋಟೊಗಳನ್ನು ಬಹಳ ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಲಾಗಿದೆ.  ಪಂಜುರ್ಲಿ ಹೋಟೆಲ್ ಸುಂದರ ಹಾಗೂ ಪ್ರೇರಣಾದಾಯಕ ಒಳಾಂಗಣ ವಿನ್ಯಾಸಕ್ಕಾಗಿ ಹೆಸರುವಾಸಿಯಾಗಿದೆ.ರಾಜೇಂದ್ರ ಶೆಟ್ಟಿ ಅವರ ಹೋಟೆಲ್ ಲೀಲಾವತಿ ಪ್ಯಾಲೇಸ ವಾತಾವರಣ ಹಾಗೂ ಕನ್ನಡ ಭಾಷೆಯ ಮೇಲಿನ ಪ್ರೀತಿ, ಅಭಿಮಾನವನ್ನು ಕಂಡು ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.