ಕ್ಷೇತ್ರದ ಪ್ರತಿ ಗ್ರಾಮಕ್ಕೂ ಬಸ್ ಸಂಚಾರ : ಶಾಸಕ ಪಠಾಣ
Bus traffic to every village of the constituency: MLA Pathan
ಶಿಗ್ಗಾವಿ 25 : ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂಬಸ್ ಸಂಚಾರವಾಗಬೇಕು. ಬರುವ ದಿನದಲ್ಲಿ ಸಾರಿಗೆ ಸಮಸ್ಯೆ ಮುಕ್ತ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದೇನೆ. ಇಂದಿನಿಂದಲೇ 10 ನೂತನ ಬಸ್‌ಗಳು ಸಂಚಾರ ಆರಂಭವಾಗಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು. ಪಟ್ಟಣದಲ್ಲಿ ನೂತನ ಬಸ್‌ಗಳ ಕಾರ್ಯಾರಂಭಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 15 ದಿನದಲ್ಲಿ ಇನ್ನೂ 10 ಹೊಸ ಬಸ್‌ಗಳು ಬರಲಿವೆ. ಸಾರಿಗೆ ಸಂಸ್ಥೆ ಲಾಭಕ್ಕಿಂತಲೂ ಕ್ಷೇತ್ರದ ಜನರ ಸಾರಿಗೆ ಸೇವೆ ನೀಡುವುದು ಉದ್ದೇಶ. ಈ ಕ್ಷೇತ್ರ ಸಾರಿಗೆ ಸಮಸ್ಯೆ ಮುಕ್ತಗೊಂಡ ಬಳಿಕ, ಲಾಂಗ್ ರೂಟ್ ಸಂಚಾರದ ಬಗ್ಗೆ ಚಿಂತಿಸುತ್ತೇವೆ. ಅಲ್ಲಿವರೆಗೆ ಕ್ಷೇತ್ರದ ಜನರ ಅನುಕೂಲ ಸ್ಥಳಗಳಿಗೆ ಮಾತ್ರ ಸಂಚಾರದ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.
ಶಿಗ್ಗಾವಿಯಿಂದ ಧರ್ಮಸ್ಥಳಕ್ಕೆ ಹೋಗಿ, ಬರಲು ನೂತನ ಕಾರ್ಯಾರಂಭವಾಗಿದೆ. ವಿದ್ಯಾರ್ಥಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ ಅವರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದ್ದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಗ್ಗಾವಿ ಡಿಪೋಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಿ, ಸಿಬ್ಬಂದಿ ನೇಮಕವಾಗಿದೆ ಎಂದು ಪಠಾಣ ತಿಳಿಸಿದರು. ನಿಲ್ದಾಣದಲ್ಲಿದ್ದ ಗ್ರಾಮೀಣ ಭಾಗದ ಪ್ರಯಾಣಿಕರ ಸಮಸ್ಯೆಯನ್ನು ಶಾಸಕ ಪಠಾಣ ಆಲಿಸಿದರು. ಸಾರಿಗೆ ವ್ಯವಸ್ಥೆ ಇಲ್ಲದ ಗ್ರಾಮಗಳಿಗೆ ತ್ವರಿತವಾಗಿ ಬಸ್ ಸಂಚಾರ ಆರಂಭಿಸಬೇಕು ಎಂದು ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು.
ಹಾವೇರಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ, ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ಘಟಕ ವ್ಯವಸ್ಥಾಪಕ ಕೃಷ್ಣ ರಾಹುತನಕಟ್ಟಿ ಸವಣೂರ ಘಟಕ ವ್ಯವಸ್ಥಾಪಕ ಮುನ್ನಾಸಾಬ ಟಿ.ಎಸ್. ಸಾರಿಗೆ ನಿಯಂತ್ರಕರಾದ ಆರ್.ಸಿ.ನದಾಫ್, ಬಿ.ಡಿ.ಕುಂಬಾರ, ಎಸ್.ಸಿ ಹಂಚಿನಮನಿ, ಸುರೇಶ ಕಲಾಲ, ಎಫ್.ಡಿ. ಭರಮಣ್ಣವರ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಜಿಲ್ಲಾ ಕೆ.ಡಿ.ಪಿ ಸದಸ್ಯ ಶಂಭು ಆಜೂರ, ತಾಲೂಕು ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಮಾಲತೇಶ ಸಾಲಿ, ಅಣ್ಣಪ್ಪ ಲಮಾಣಿ, ಗೌಸಖಾನ್ ಮುನಸಿ, ಮುನ್ನಾ ಲಕ್ಷ್ಮೇಶ್ವರ, ಬಾಬಾರ ಬೊವಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ 