ಇಡೇರಿದ 3 ದಶಕದ ಬೇಡಿಕೆ, ಜಿಲ್ಲಾ ಕೇಂದ್ರಕ್ಕೆ ಬಸ್ ಸಂಚಾರ.
Bus service to the district center, a demand that has been growing for 3 decades.
ಇಡೇರಿದ 3 ದಶಕದ ಬೇಡಿಕೆ, ಜಿಲ್ಲಾ ಕೇಂದ್ರಕ್ಕೆ ಬಸ್ ಸಂಚಾರ.
ಆಲಮೇಲ 05: ತಾಲ್ಲೂಕಿನ ಕೊನೆಯ ಹಳ್ಳಿಯಾದ ಕಡಣಿ ಗ್ರಾಮದಿಂದ ಜಿಲ್ಲಾ ಕೇಂದ್ರ ವಿಜಯಪುರಕ್ಕೆ ಬಸ್ ಸಂಚಾರ ಗುರುವಾರ ಪ್ರಾರಂಭವಾಯಿತು. ಗ್ರಾಮಸ್ಥರಲ್ಲಿ ಸಂತೋಷದಿಂದ ಬಸ್ ಬರಮಾಡಿಕೊಂಡು, ಬಸ್ ಅಲಂಕರಿಸಿ ಸಿಹಿಹಂಚಿ ಖುಷಿಪಟ್ಟರು.ಚಾಲಕ ಮತ್ತು ನಿರ್ವಾಹಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇತ್ತೀಚೆಗೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಡಣಿ ಗ್ರಾಮದ ನೂತನ ಪಂಚಾಯತಿ ಕಟ್ಟಡ ಉದ್ಘಾಟನೆಗೆ ಬಂದಾಗ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಬಸಲಿಂಗಪ್ಪ ಕತ್ತಿ ’ಬಹಳ ದಿನಗಳ ಬೇಡಿಕೆ ಇತ್ತು, ಆರೋಗ್ಯ, ಶಿಕ್ಷಣಕ್ಕಾಗಿ ಈ ಸೇವೆ ಬಹಳ ಮುಖ್ಯವಾಗಿತ್ತು , ಶಾಸಕರು ಹಾಗೂ ಸಚಿವರಿಗೆ ಆಭಾರಿಯಾಗಿದ್ದೇವೆ ಎಂದರು.ಸದಸ್ಯರಾದ ಬಸವರಾಜ ತಾವರಗೇರಿ, ಮುಖಂಡರಾದ ವೀರಭದ್ರ ಕತ್ತಿ , ಸಂತೋಷ ಕ್ಷತ್ರಿ, ಈರಣ್ಣ ಸುತಾರ, ಕಲ್ಲಪ್ಪ ದಳಪತಿ ಮೊದಲಾದವರು ಇದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 