ವೈದ್ಯರ ನಿತ್ಯ ಪ್ರಾಮಾಣಿಕ ಸೇವೆಯಿಂದ ಆರೋಗ್ಯಯುತ ಸಮಾಜ ನಿರ್ಮಾಣ

ವೈದ್ಯರ ನಿತ್ಯ ಪ್ರಾಮಾಣಿಕ ಸೇವೆಯಿಂದ ಆರೋಗ್ಯಯುತ ಸಮಾಜ ನಿರ್ಮಾಣ  Building a healthy society through the constant and sincere service of doctors

ಶಿಗ್ಗಾವಿ 06 : ವೈದ್ಯರು ನಿತ್ಯದ ಜನ ಸೇವೆ ಮಾಡುವ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ಅದರಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯವಾಗಿದೆ ಎಂದು ಪಿನಿಕ್ಸ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ. ಎಂ.ತಿರ್ಲಾಪುರ ಹೇಳಿದರು. 

ಫಿನಿಕ್ಸ್‌ ಇಂಟರನ್ಯಾಷನಲ್ ಶಾಲೆಯ ಆವರಣದಲ್ಲಿ ನಡೆದ ವಿಶ್ವ ವೈದ್ಯರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಾಯಕದ ಮೌಲ್ಯ ಹೆಚ್ಚಳವಾಗಲು ಅದರಲ್ಲಿ ಸೇವಾ ಮನೋಭಾವನೆ ಮುಖ್ಯವಾಗಿದೆ. ಕಾಯಕದ ಮೇಲೆ ನಂಬಿಕೆ, ವಿಶ್ವಾಸವಿಟ್ಟು ಕಾರ್ಯ ನಿರ್ವಹಿಸಿದಾಗ ಯಶಸ್ವಿ ಬೆನ್ನಟ್ಟಿ ಬರಲು ಸಾಧ್ಯವಿದೆ. ಅಂತಹ ಕಾಯಕ ನಿಷ್ಠೆ ನಮ್ಮದಾಗಬೇಕು. ಸಮಾಜಕ್ಕೆ ಉತ್ತಮ ಸಂದೇಶ ನೀಡುವುದು ಅವಶ್ಯವಾಗಿದೆ. ಅದಕ್ಕೆ ಸಮಾಜವು ಸಹ ಬೆಂಬಲವಾಗಿ ನಿಲ್ಲಬೇಕು ಎಂದರು. 

ಮಕ್ಕಳ ತಜ್ಞ ಡಾ.ಅವಿನಾಶ ರಾಜಮಾನೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಫಿನಿಕ್ಸ್‌ ಇಂಟರನ್ಯಾಷನಲ್ ಶಾಲೆ ಉಪಾಧ್ಯಕ್ಷ ನರಹರಿ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿನಿಕ್ಸ ಸಂಸ್ಥೆ ಕಾರ್ಯದರ್ಶಿ ಡಾ.ರಾಣಿ ತಿರ್ಲಾಪುರ, ಪ್ರಾಚಾರ್ಯ ಗಂಗಾಧರ, ಶಶಾಂಕ ದೇಶಪಾಂಡೆ ಸೇರಿದಂತೆ ಶಿಕ್ಷಕರು, ಸಿಬ್ಬಂದಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.