ಪ್ರಜೆಗಳ ಅನಕೂಲಕ್ಕಾಗಿ ಪ್ರಜಾಸೌಧ ನಿರ್ಮಿಸಿ-ಶೈಲಪ್ಪ. ಎಸ್‌. ಸಜ್ಜನ

ಪ್ರಜೆಗಳ ಅನಕೂಲಕ್ಕಾಗಿ ಪ್ರಜಾಸೌಧ ನಿರ್ಮಿಸಿ-ಶೈಲಪ್ಪ. ಎಸ್‌. ಸಜ್ಜನ Build a Praja Soudha for the convenience of the citizens - Shailappa. S. Sajjana

ತಾಳಿಕೋಟೆ 21 : ಪ್ರಜಾಸೌದ ಪಟ್ಟಣದಲ್ಲಿ ನಿರ್ಮಾಣ ಮಾಡಿ ಜನರು ದಿನಾಲು ಅಲೆದಾಡಲು ಅನುಕೂಲ ಮಾಡಿಕೊಡಬೇಕು. ಕೆಲವು ಜನ ಸ್ವಹಹಿತಾಶಕ್ತಿಗಾಗಿ 2 ಎಕರೆ ಜಾಗ ನೀಡಿರಬಹುದು. ಸತತ 55 ದಿನಗಳಿಂದ ಬಿಸಿಲಿನಲ್ಲಿ ಹೋರಾಟ ಮಾಡಿದರೂ ಸಹ ಜಿಲ್ಲಾಡಳಿತ ಕಣ್ತೆರೆದು ನೋಡಿಯೂ ನೋಡದ ಹಾಗೆ ಮಲಗಿದಿಯೇ? ಎಂದು ಶ್ರೀ ಶೈಲಪ್ಪ ಎಸ ಸಜ್ಜನ ವಕೀಲರು ಹಾಗೂ ಸಂಸ್ಥಾಪಕರು ವಿಶ್ವಕಲ್ಯಾಣ ಪ್ರಕೃತಿ ಆರೋಗ್ಯ ಆಶ್ರಮ ವಿಜಯಪುರ ತಿಳಿಸಿದರು. ಪಟ್ಟಣದಲ್ಲಿ ಪ್ರಜಾಸೌದ  ಸ್ಥಳ ವಿರೋಧಿಸಿ ಬಸವೇಶ್ವರ ವೃತ್ತದಲ್ಲಿ  55ನೇ ದಿನದ ಅನರ್ದಿಷ್ಟಾವದಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ ಮಾತನಾಡಿದ ಅವರು ಪ್ರಜಾಪ್ರತಿನಿಧಿಗಳು ಪ್ರಜೆಗಳ ಅನುಕೂಲಕ್ಕಾಗಿ ಸಾರ್ವಜನಿಕರು  ಗುರುತಿಸಿದ ಸ್ಥಳದಲ್ಲಿ ಪ್ರಜಾಸೌದ  ನಿರ್ಮಿಸಬೇಕು. 

 ಸರ್ಕಾರ ಈ ಹೋರಾಟ ಮುಂದುವರೆಯಲು ಬಿಡಬೇಡಿ ಈ ಕೂಡಲೇ ನಿಗದಿಪಡಿಸಿದ ಸ್ಥಳ ರದ್ದು ಮಾಡಿ ಪಟ್ಟಣದಲ್ಲಿಯ  ಪ್ರವಾಸಿ ಮಂದಿರ ಜಾಗ ಸೂಕ್ತ, 5 ಕಿ.ಮೀ ದೂರದಲ್ಲಿ ಪ್ರವಾಸಿ ಮಂದಿರ ಮಾಡಿದರೂ ಸಹ ವಾಹನ ಸೌಕರ್ಯ ಹೊಂದಿರುವ  ಜನರ ಹೋಗುತ್ತಾರೆ ಎಂದು ತಿಳಿಸಿದರು. ಪರಮಪೂಜ್ಯ ಸಿದ್ದೇಶ್ವರ ಅಪ್ಪರ ಶಿಷ್ಯರಾದ ಶಿವಲಿಂಗ ಸ್ವಾಮಿಗಳು ಮಾತನಾಡಿ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಹತ್ತು ಜನರಿಗೋಸ್ಕರ ಮಾಡುವುದು ಒಳ್ಳೆಯದಲ್ಲ, ಸಾವಿರಾರು ಜನರು ನೆನೆಪಿಸಿ ಕೊಳ್ಳುವ  ಹಾಗೆ  ಅನುಕೂಲ ಮಾಡಿಕೊಡಬೇಕು. ಸರ್ಕಾರ ಪ್ರತಿನಿಧಿಗಳು ಜನರ ಹಣದಲ್ಲಿ ಪ್ರತಿ ತಿಂಗಳು ಸಂಬಳ ಪಡೆಯುತ್ತಾರೆ ಅದನ್ನು ಅರಿತುಕೊಂಡು ಕೆಲಸ ಮಾಡುವುದು ಒಳ್ಳೆಯದು ಎಂದು ತಿಳಿಸಿದರು.

ತಾಲೂಕ ಹೋರಾಟ ಸಮಿತಿ ಅಧ್ಯಕ್ಷ ಧಶರತಸಿಂಗ ಮನಗೂಳಿ, ಮುತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ,ಎಂ.ಎಸ.ಸರಶೆಟ್ಟಿ, ಆರ.ಎಸ.ಪಾಟೀಲ ಕೂಚಬಾಳ, ಮಸೂಮಸಾಬ ಕೆಂಭಾವಿ,ಮಡು ಸಾಹುಕಾರ ಬಿರಾದಾರ, ಪರಶುರಾಮ ತಂಗಡಗಿ, ಪ್ರಕಾಶ ಹಜೇರಿ, ಮಯೂರ ಪಾಟೀಲ, ರಾಮಣ್ಣ ಕಟ್ಟಿಮನಿ, ಸಂಜು ಬರದೇನಾಳ, ಸದ್ದಾಂ ಬೀಳಗಿ, ರವಿ ಕಟ್ಟಿಮನಿ, ಸುರೇಶ ಹಜೇರಿ, ಸಿರಸ ಕುಮಾರ ಹಜೇರಿ, ಮಹೇಶ ಛಲವಾದಿ, ಅಮಿತಸಿಂಗ ಮನಗೂಳಿ, ನಾಗೇಶ ಕಟ್ಟಿಮನಿ,ಮುದಕಪ್ಪ ಬಡಿಗೇರ, ನೀತಿನ ವಿಜಾಪುರ, ಹಲವರು ಪಾಲಗೊಂಡಿದ್ದರು.