ಸಿಡಿಲ ಬಡಿದು ಎಮ್ಮೆಗಳ ಸಾವು

ಸಿಡಿಲ ಬಡಿದು ಎಮ್ಮೆಗಳ ಸಾವು  Buffaloes killed by lightning

ತಾಳಿಕೋಟಿ  27:  ತಾಲೂಕಿನ ಹಿರೂರ ಗ್ರಾಮದ ರೈತ ಮುದಕಪ್ಪ ನಿಂಗಪ್ಪ ಬಾಚಾಳಿ ಇವರ ಜಮೀನಿನಲ್ಲಿ ರವಿವಾರ ಮಧ್ಯಾಹ್ನ 4 ಘಂಟೆ ಸಮೀಪದಲ್ಲಿ ಅಪ್ಪಳಿಸಿದ ಸಿಡಿಲಿನಿಂದಾಗಿ ಮರದ ಕೆಳಗೆ ಕಟ್ಟಿದ ಮೂರು ಎಮ್ಮೆಗಳು ಸಾವನ್ನಪ್ಪಿವೆ. ಬಡ ರೈತ ಮುದಕಪ್ಪ ಬಚಾಳಿ ತನಗಿರುವ ಅಲ್ಪ ಜಮೀನುನೊಂದಿಗೆ ಜೀವನೋಪಾಯಕ್ಕೆ ಎಮ್ಮೆಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದರು ಇದೀಗ ಅಪ್ಪಳಿಸಿದ ಸಿಡಿಲಿನಿಂದಾಗಿ ಎಮ್ಮೆಗಳು ಸಾವನ್ನಪ್ಪಿರುವುದರಿಂದ ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ.