ಹಾವೇರಿಯಲ್ಲಿ ಜರುಗಿದ ಬುದ್ಧ ಪೂರ್ಣಿಮಾ ಆಚರಣೆ ಹಾಗೂ ವಿಚಾರ ಸಂಕಿರಣ

ಹಾವೇರಿಯಲ್ಲಿ ಜರುಗಿದ ಬುದ್ಧ ಪೂರ್ಣಿಮಾ ಆಚರಣೆ ಹಾಗೂ ವಿಚಾರ ಸಂಕಿರಣ Buddha Purnima celebration and symposium held in Haveri

ಲೋಕದರ್ಶನ ವರದಿ 

ಹಾವೇರಿ 17: ಇಲ್ಲಿನ ರಾಜೇಂದ್ರ ನಗರದಲ್ಲಿನ ಸಾಮ್ರಾಟ್ ಅಶೋಕ ಮೌರ್ಯ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಮೌರ್ಯ ಮಹಾಸಂಸ್ಥಾನ(ರಿ)ಹಾವೇರಿ ಹಾಗೂ ಸಮತಾ ಸೈನಿಕದಳ (ಡಾ. ಅಂಬೇಡ್ಕರ್ ವಾದ) ಸಂಯುಕ್ತ ಆಶ್ರಯದಲ್ಲಿ 2570ನೇ ಭಗವಾನ್ ಬುದ್ಧ ಪೂರ್ಣಿಮಾ ಆಚರಣೆ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣ, ನಾಡಿನ ಕಲೆ,ಸಂಸ್ಕೃತಿಗೆ ಮೌರ್ಯರ ಮತ್ತುರಾಷ್ಟ್ರಕೂಟರಕೊಡುಗೆ ಕಲಾ ಸಂಭ್ರಮಕಾರ್ಯಕ್ರಮಜರುಗಿತು. 

ಧಾರವಾಡದ ಬೌದ್ಧ ಪಾಲಿ ವಿದ್ವಾಂಸರಾದಪಬ್ಬಜೋರವಿತಿಪಾಲಿವಿಜ್ಜಾಮುನಿಯೋಅವರು ದಿವ್ಯ ಸಾನಿಧ್ಯವಹಿಸಿ ಮಾತನಾಡಿ ಅಶೋಕ  ಚಕ್ರಚರ್ತಿಅಖಂಡ ಭಾರತವನ್ನು ಪ್ರೀತಿ, ಕರುಣೆ, ಶಾಂತಿ, ಸಹೋದರತ್ವದ ಸಂಬಂಧಗಳನ್ನು ತನ್ನ ಆಡಳಿತದಲ್ಲಿ ಪ್ರಜೆಗಳನ್ನು ಮಕ್ಕಳಂತೆ ನೋಡುವ ವಾತಾವರಣ ನಿರ್ಮಿಸಿದರು.ಇಂದಿಗೂ ದೇಶ-ವಿದೇಶದಲ್ಲಿ ಶಾಂತಿ ನೆಮ್ಮದಿಗೆ ಮುನ್ನುಡಿಯನ್ನು ಬರೆದವರೇ ಸಾಮ್ರಾಟ್ ಅಶೋಕ ಚಕ್ರವರ್ತಿಯಾಗಿದ್ದಾರೆ. ಅದಕ್ಕೆ ಕೀರ್ತಿ ಗೌರವ ಅವರಿಗೆ ಸಲ್ಲುತ್ತದೆ. ಮೌರ್ಯರು ಕಲೆ, ಸಾಹಿತ್ಯ, ಸಂಸ್ಕೃತಿಗೆ ತಮ್ಮದೆಯಾದ ಕೊಡುಗೆಯನ್ನು ನೀಡಿದ್ದಾರೆ.ಭಗವಾನ ಬುದ್ಧ ಮೌಲ್ಯಗಳು ಸರ್ವಕಾಲಿಕವಾಗಿವೆ. ನೆಮ್ಮದಿಯ ಬದುಕಿಗೆ ಬುದ್ಧ ಸಂದೇಶ ದಾರಿ  ದೀಪವಾಗಿವೆ ಎಂದರು. 

ಪ್ರೋ.ಕವಿತಾ ಬೇವಿನ ಗಿಡದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ ಭಗವಾನ ಬುದ್ಧರ ಉಪದೇಶಗಳು ಎಲ್ಲರ ಬದುಕನ್ನು ಉಜ್ವಲಗೊಳಿಸುತ್ತೇವೆ. ಬುದ್ಧರ ಕಾಲದಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳು ಇದ್ದವು.ನಂತರ ಮಹಿಳೆಯರನ್ನು ವರ್ಗೀಕರಣ ಮಾಡುತ್ತಾ ಬಾಲ್ಯ ವಿವಾಹ,ಸತಿ ಸಹಗಮನ ಪದ್ಧತಿ,ದೇವದಾಸಿ ಪದ್ಧತಿ ಅನೇಕ ಅನಿಷ್ಠ ಪದ್ದತಿಗಳಿಂದ ಶೋಷಣೆಗೆ ಒಳಪಡಿಸಲಾಯಿತು.2000 ವರ್ಷಗಳ ನಂತರ ಪುನಃ ಡಾ.ಬಿ.ಆರ್‌.ಅಂಬೇಡ್ಕರ್ ಬರೆದ ಸಂವಿಧಾನದಿಂದ ಮಹಿಳೆಯರಿಗೆ ಸಮಾನತೆಯ ಹಕ್ಕುಗಳು ಲಭಿಸಿವೆ ಎಂದರು.     

ರಾಜ್ಯ ಡಿಎಸ್‌ಎಸ್ ಮುಖಂಡರಾದ ಉಡಚಪ್ಪ ಮಾಳಗಿ ಮಾತನಾಡಿ ಭಾರತ ಸಂವಿಧಾನ ನೀಡಿರುವ ಮತದಾನ ಹಕ್ಕಿನಿಂದ ಒಳ್ಳೆಯ ನಾಯಕರನ್ನುಆಯ್ಕೆ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.ಬದುಕಿನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಎನ್‌.ಎನ್ ಗಾಳೆಮ್ಮನವರ ನಿರಂತರವಾಗಿ ಮಾಡುತ್ತಾ ಬರುತ್ತಿದ್ದಾರೆ. ಒಳ್ಳೆಯ ಕೆಲಸಕ್ಕೆ ಸಹಕಾರ ನೀಡೋಣ ಎಂದರು. ಗೌತಮಿ ಮೌರ್ಯ ಬುದ್ಧ ವಿಹಾರಟ್ರಸ್ಟ್‌(ರಿ)ಅಧ್ಯಕ್ಷರಾದ ಚೆನ್ನಮ್ಮ ಕೆ.ವಿ ಅವರು ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಮುಖಂಡರರಾದ ಶಿವಕುಮಾರ ತಳವಾರ,ವಿರಭದ್ರ​‍್ಪ ಮಡ್ಲೂರ, ಸಿದ್ದಪ್ಪ ಹರವಿ,ಬಾಪೂಗೌಡ ಪಾಟೀಲ,ರೇಣುಕಾ ಗೊರೆಮಟ್ಟಿ, ನಿರ್ಮಲಾ ಅಡಗಂಟಿ, ಉಳವಪ್ಪ ಕಲಾದಗಿ,ರಾಧಾ ಈಳಿಗೇರ, ಕಾಂತೇಶ ಹೊಳೆಪ್ಪನವರ, ಗೌತಮಿ ಮೌರ್ಯ,ಪಲ್ಲವಿ ಚಾಲುಕ್ಯ ಸೇರಿದಂತೆ ಅನೇಕರಿದ್ದರು.