ಜಗತ್ತಿಗೆ ಪ್ರೀತಿ-ಕಾಳಜಿ ಹಂಚಿದ ಬುದ್ಧ, ಬಸವ, ಡಾ. ಬಿ.ಆರ್. ಅಂಬೇಡ್ಕರ್ : ಡಾ. ಸೂರ್ಯಕಾಂತ್ ಸುಜ್ಯಾತ
Buddha, Basava, who shared love and concern to the world. B.R. Ambedkar: Dr. Suryakant Sujyat
ಕಲಬುರಗಿ 07: ಜಗತ್ತಿನಲ್ಲಿ ಬುದ್ಧ, ಬಸವ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಗಂಭೀರ ಅಧ್ಯಯನಗಳು ನಡೆಯುತ್ತಿವೆ. ಮನುಷ್ಯ ಪ್ರೀತಿ ಮತ್ತು ಜೀವ ಕಾಳಜಿಯಿಂದ ಬುದ್ಧ, ಬಸವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ಚಿತ್ರಗಳ ಮೂಲಕ ಬಿಡಿಸಿ ಸಮಾಜಕ್ಕೆ ತಲುಪಿಸುವುದು ಸೃಜನಶೀಲ ಕಲಾವಿದರಿಂದ ಸಾಧ್ಯ ಎಂದು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಸೂರ್ಯಕಾಂತ ಸುಜ್ಯಾತ ಹೇಳಿದರು.
ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಕಲಬುರಗಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ರಾಮ ಮಂದಿರ ರಸ್ತೆ ಮಾನಕರ್ ಬಡಾವಣೆಯಲ್ಲಿರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ಬುದ್ಧ, ಬಸವ ಮತ್ತು ಅಂಬೇಡ್ಕರ ರವರ ಸಂದೇಶಾಧರಿತ ಚಿತ್ರಕಲಾ ಶಿಬಿರವನ್ನು ಬುದ್ಧ, ಬಸವ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಸಮರ್ಿಸಿ ಉದ್ಘಾಟಿಸಿ ಮಾತನಾಡಿ ಕಳೆದ 2500 ವರ್ಷಗಳ ಹಿಂದೆ ಆಸೆಯೇ ದುಖಃಕ್ಕೆ ಮೂಲ ಎಂಬ ಬುದ್ಧನ ತತ್ವಗಳನ್ನು ಬಸವಣ್ಣ ವಚನ ರೂಪದಲ್ಲಿ ನೀಡಿದರೆ ಡಾ. ಬಿ. ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಒದಗಿಸಿ ಶೋಷಿತರಿಗೆ ಮತ್ತು ಮಹಿಳೆಯರಿಗೆ ಗೌರವ ತಂದುಕೊಟ್ಟರು ಎಂದರು.
ಸಾಹಿತ್ಯದ ಪ್ರಭಾವಕ್ಕಿಂತ ಚಿತ್ರಕಲೆ ಹೆಚ್ಚು ಪರಿಣಾಮಕಾರಿ ಮಾಧ್ಯಮ. ಸಾಹಿತ್ಯ ಮತ್ತು ಕಲೆಗಳು ಜಾತಿಗೆ ಸೀಮಿತವಾಗಬಾರದು. ಸಾಹಿತ್ಯ ಮತ್ತು ಕಲಾ ಮಾಧ್ಯಮ ಸಂವಹನದಿಂದ ಸಮಾಜದಲ್ಲಿನ ಕಂದಾಚಾರ, ಮೂಢ ನಂಬಿಕೆ, ದ್ವೇಷ, ಜಾತೀಯತೆ ಮತ್ತು ಸಂಘರ್ಷ ತೊಡೆದು ಹಾಕಬಹುದು. ಯುವ ಕಲಾವಿದರು ಚಿತ್ರಗಳ ಮೂಲಕ ಹೊಸದನ್ನು ಅಭಿವ್ಯಕ್ತಿಸಬೇಕು. ಸೃಜನಶೀಲ ಚಿತ್ರಕಲೆಗೆ ಅಭ್ಯಾಸ, ಅಧ್ಯಯನಶೀಲತೆ, ಕಲ್ಪನೆ ಮತ್ತು ನವೀನ ಆಲೋಚನೆಗಳಿಂದ ಸೃಜನಶೀಲ ಚಿತ್ರಗಳ ರಚನೆ ಮಾಡಬಹುದು. ಡಾ. ಬಿ. ಆರ್. ಅಂಬೇಡ್ಕರ್ ಅವರ ಬುದ್ಧ ಮತ್ತು ಧಮ್ಮ ಕೃತಿಯಲ್ಲಿ ರೋಹಿಣಿ ನದಿ ನೀರು ಹಂಚಿಕೆ ವಿವಾದ, ಅಂಗುಲಿಮಾಲನ ಮನಪರಿವರ್ತನೆ, ಬುದ್ಧ ತಪಸ್ಸಿಗೆ ಹೋಗಲು ಕಾರಣಗಳ ಬಗ್ಗೆ ವಿವರಗಳಿವೆ. ಸ್ವತಃ ಡಾ. ಬಿ. ಆರ್. ಅಂಬೇಡ್ಕರ್ ಅವರು ಚಿತ್ರಕಲಾವಿದರಾಗಿ ಕಣ್ಣು ತೆರೆದ ಬುದ್ಧನ ಚಿತ್ರ ಬಿಡಿಸಿದ್ದಾರೆ. ಆ ಚಿತ್ರ ಜಗತ್ತಿಗೆ ಬೆಳಕು ನೀಡುವ ಸಂಕೇತವಾಗಿದೆ ಎಂದು ವಿವರಿಸಿದರು.
ಚಿತ್ರಕಲಾ ಶಿಬಿರದ ಸಂಚಾಲಕ ಹಾಗೂ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಡಾ. ಪರಶುರಾಮ ಪಿ. ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 14 ವರ್ಷಗಳಿಂದ ಯುವ ಕಲಾವಿದರನ್ನು ಬೆಳೆಸಲು ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಕಲಾ ಶಿಬಿರಿ ನಡೆಸುತ್ತಿದೆ. ವರ್ತಮಾನ ಸಂಗತಿ, ವ್ಯಕ್ತಿಯಾಧಾರಿತ ವಸ್ತು ವಿಷಯಗಳ ಬಗ್ಗೆ ಕಲಾವಿದರಲ್ಲಿ ಆಸಕ್ತಿ ಮೂಡಿಸಿ ಕಲೆಯ ವಿವಿಧ ಆಯಾಮಗಳ ಪರಿಚಯ, ಅನುಭವ, ಸೃಜನಶೀಲ ಕಲೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಲಾವಿದರನ್ನು ಜನಮುಖಿಗೊಳಿಸುವುದು ಅಗತ್ಯವಿದೆ. ಕಲಾವಿದರ ಕಲ್ಪನೆ, ಚಂತನೆ, ಅಭಿವ್ಯಕ್ತಿಗೆ ಈ ಶಿಬಿರ ಸವಾಲಾಗಿದೆ. ಪ್ರೇಕ್ಷಕರನ್ನು ಕಲಾವಿದರತ್ತಾ ಸೆಳೆಯಲು ಶಿಬಿರ ಸಾಕ್ಷಿಯಾಗಿದೆ. ಕಲಾವಿದರಿಗೆ ಇದೊಂದು ಸುವರ್ಣಾವಕಾಶ ಮತ್ತು ಪ್ರೇರಣೆಯಾಗಲಿದೆ ಎಂದರು.
ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಮತ್ತು ಹಿರಿಯ ಚಿತ್ರಕಲಾವಿದ ಬಸವರಾಜ ಎಲ್. ಜಾನೆ ಬುದ್ಧ, ಬಸವ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಚಿತ್ರ ಬಿಡಿಸುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದರು. ಶಿಬಿರದ ನಿರ್ದೇಶಕ ವಿ.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಾವಿದರ ಕಲೆಗಳನ್ನು ಪ್ರೋತ್ಸಾಹಿಸಲು ವೀಕ್ಷಕರು ಬಹಳ ಮುಖ್ಯ. ಸಮಾಜದ ಪ್ರೋತ್ಸಾಹ, ಪ್ರೇಕ್ಷಕರ ವೀಕ್ಷಣೆಯಿಂದ ಕಲಾ ಕ್ಷೇತ್ರ ಮತ್ತು ಕಲಾವಿದರು ಬೆಳೆಯುತ್ತಾರೆ. ಇಂದಿನ ಶಿಬಿರ ವಿಶೇಷವಾಗಿ ಮಹಾನ್ ವ್ಯಕ್ತಿಗಳ ಕುರಿತದ್ದಾಗಿದೆ. ಕಲಾವಿದರ ಕಲ್ಪನೆ ಮತ್ತು ವ್ಯಕ್ತಿಗಳ ಸಾಧನೆ ಗ್ರಹಿಕೆಯಿಂದ ಅತ್ಯುತ್ತಮ ಚಿತ್ರಗಳು ಮೂಡುತ್ತವೆ. ಪ್ರೇಕ್ಷಕರಿಗೆ ಹೊಸ ವಿಷಯಗಳನ್ನು ತಲುಪಿಸು ಸಾರ್ಥಕತೆ ಶಿಬಿರದಿಂದ ಸಾಧ್ಯವಾಗಲಿದೆ ಎಂದು ಆಶಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ಚಿತ್ರಕಲಾವಿದರು ಬಾಗವಹಿಸಿದ್ದರು. ವಿ.ಬಿ. ಬಿರಾದಾರ (ಕಲಬುರಗಿ), ಬಾಬುರಾವ್ ಎಚ್. (ಕಲಬುರಗಿ), ಶಿವಾನಂದ ಬಸವಂತಪ್ಪ (ಬೆಂಗಳೂರು), ಮಲ್ಲಿಕಾರ್ಜುನ ಕೊರಳ್ಳಿ (ಕಲಬುರಗಿ), ಶ್ರೀಮತಿ ಸವಿತಾ ಕುಂಬಾರ (ಸೇಡಂ), ಸೂರ್ಯಕಾಂತ ನಂದೂರ (ಕಲಬುರಗಿ), ಜಗದೀಶ ಕಾಂಬಳೆ (ಕಲಬುರಗಿ), ಅಮಿತ ಕಮ್ಮಾರ (ವಿಜಯಪುರ), ಯಲ್ಲಪ್ಪ ಕಾಂಬಳೆ (ಶಾಹಬಾದ), ಗೌತಮ್ ಈರಣ್ಣ (ಆಳಂದ) ಸೇರಿದಂತೆ ಕಲಬುರಗಿ ಜಿಲ್ಲೆಯ ಕಲಾವಿದರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಲಬುರಗಿ ದೂರದರ್ಶನ ಕೇಂದ್ರದ ವಿಶ್ರಾಂತ ನಿರ್ದೇಶಕ ಎಂ.ಬಿ. ಪಾಟಿಲ, ಉಪನ್ಯಾಸಕ ಡಾ. ಕೆ. ಎಂ. ಕುಮಾರಸ್ವಾಮಿ, ಅಂಬಾರಾಯ ಚಿನಮಳ್ಳಿ, ರಾಮಗಿರಿ ಪೊಲೀಸ್ ಪಾಟೀಲ, ಸಿದ್ದು ಮರಗೋಳ, ಗುರುಲಿಂಗ ಅರಳಿ, ಅಣ್ಣಾರಾಯ ಹಂಗರಗಿ, ಚಿದಾನಂದ ಸುತಾರ, ರವಿಚಂದ್ರ ಬಿರಾದಾರ, ಉದಯಕುಮಾರ ಬಗಲಿ, ಶೈಲಜಾ ಬಿರಾದಾರ, ದಾನಯ್ಯ ಚೌಕಿಮ, ಕುಪೇಂದ್ರ ಸೇರಿದಂತೆ ಮುಂತಾದವರಿದ್ದರು. ಮಲ್ಲಿಕಾರ್ಜುನ ಕೊರಳ್ಳಿ ವಂದಿಸಿದರು. ಕಲಾವಿದ ಸೂರ್ಯಕಾಂತ ನಂದೂರ ಕಾರ್ಯಕ್ರಮ ನಿರೂಪಿಸಿದರು.
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ
ಖಾತೆ ಮುಟ್ಟುಗೋಲಾದರೂ ಶಿವಂ ಸಂಸ್ಥೆಗೆ ಜನರಿಂದ ಇನ್ನೂ ದುಡ್ಡು ಠೇವಣಿ : ವಂಚನೆ ಜಾಲದಿಂದ ದೂರ ಇರಿ, ಜನರಿಗೆ ಸಿಐಡಿ ಡಿಐಜಿಪಿ ಗುಳೇದ್ ಮನವಿ
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ 