ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ

ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ  ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ Buddha, Basava, Babasaheb Ambedkar Book Fair for 5 days from April 10th to 14th

ವಿಜಯಪುರ 10 : ವಿಜಯಪುರ ಸೇರಿ ಕಲ್ಯಾಣ ಕರ್ನಾಟಕದ ಮನೆ ಮನೆಯ ದೀಪ ಎಂದರೆ ಕಡಕೋಳ ಮಡಿವಾಳಪ್ಪ ಅವರು ಎಂದು ಹಿರಿಯ ಸಾಹಿತಿ ನಟರಾಜ ಬೂದಾಳು ಹೇಳಿದರು. ಅವರು ವಿಜಯಪುರ ನಗರದ ದರಾಬಾರ್ ಪ್ರೌಢ ಶಾಲೆ ಮೈದಾನದಲ್ಲಿ ಮೇ ಸಾಹಿತ್ಯ ಮೇಳ ವಿಜಯಪುರ ಬಳಗ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಏಪ್ರಿಲ್ 10ರಿಂದ 14ರ ವರೆಗೆ 5ದಿನಗಳ ಕಾಲ ಹಮ್ಮಿಕೊಂಡಿರುವ ಬಿಜಾಪುರ ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳದಲ್ಲಿ ಮೊದಲ ದಿನದ ಎರಡನೇ ಗೋಷ್ಠಿ ಲೇಖಕರೊಂದಿಗೆ ಸಂವಾದದಲ್ಲಿ ಮಾತನಾಡಿದರು.

ಬುದ್ದ ಬಸವ ಅಂಬೇಡ್ಕರ್ ಹೆಸರನ್ನು ಒಂದೇ ಸಾಲಿನಲ್ಲಿ ಹೇಳಲಿಕ್ಕೆ ಕಾರಣ ಎಂದರೆ ಮೂವರು ಪ್ರಜಾಪ್ರಭುತ್ವವಾದಿಗಳು ಎಂದು ಹೇಳಿದರು.ಹಿರಿಯ ಲೇಖಕ ಸಿ ಚೆನ್ನಬಸವಣ್ಣ ಅವರು ಮಾತನಾಡಿ ಓದುಗ, ಮುದ್ರಕ, ಪ್ರಕಾಶಕ ಲೇಖಕ ಪುಸ್ತಕ ಸಂಸ್ಕೃತಿಯ ನಾಲ್ಕು ಆಧಾರ ಸ್ಥಂಬಗಳು ಎಂದು ಹೇಳಿದರು.ಪುಸ್ತಕವು ಉಧ್ಯಮವಲ್ಲ ಅದು ನಮ್ಮ ಸಂಸ್ಕೃತಿ, ಪ್ರತಿವರ್ಷ 8-10 ಸಾವಿರ ಪುಸ್ತಕ ಪ್ರಕಟವಾಗುತ್ತಿವೆ ಓದುಗರ ಕೊರತೆ ಹೆಚ್ಚಾಗಿದೆ ಎಂದು ಹೇಳಿದರುಕಲ್ಯಾಣ ಕರ್ನಾಟಕದ ಜನಗಳಿಗೆ ಶಿಕ್ಷಣ ಕಳಿಸಿದವರು ವಿಜಯಪುರದ ಮುಲ್ಕಿ ಶಿಕ್ಷಕರು ಸ್ವಾತಂತ್ರ್ಯ ಪೂರ್ವದಲ್ಲಿ ವಿಜಯಪುರದಲ್ಲಿ ಶಿಕ್ಷಣಕ್ಕೆ ಬಹಳಷ್ಟು ಮಹತ್ವ ಕೊಟ್ಟಿದ್ದರು ಎಂದರು.ಪ್ರತಿಕ್ರಿಯೆ ನೀಡಿ ಲೇಖಕಿ ಸುನಂದಾ ಕಡಮೆ ಅವರು ಮಾತನಾಡಿದರು.