ಅಂತರರಾಷ್ಟ್ರೀಯ ತೈಕ್ವಾಂಡೋ ಸ್ಪರ್ಧೆಯಲ್ಲಿ ಶಿವಾಜಿ ಪಿಯು ಕಾಲೇಜು ವಿದ್ಯಾರ್ಥಿನಿಗೆ ಕಂಚಿನ ಪದಕ
Bronze medal for Shivaji PU College student at international Taekwondo competition
ಧಾರವಾಡ, ಆ. 3: ಧಾರವಾಡದ ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ಛತ್ರಪತಿ ಶಿವಾಜಿ ಮಹಾರಾಜ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕು. ನಫೀಸಾ ಅವರು ಥೈಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ತೈಕ್ವಾಂಡೋ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಕಾಲೇಜು ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ಅಧ್ಯಕ್ಷ ಮನೋಹರ ಎನ್. ಮೋರೆ, ಉಪಾಧ್ಯಕ್ಷ ಪ್ರಕಾಶ ಘಾಟಗೆ, ಕಾರ್ಯಾಧ್ಯಕ್ಷ ಮಹೇಶ್ ಶಿಂಧೆ, ಗೌರವ ಕಾರ್ಯದರ್ಶಿ ವಿಠಲ್ ಪಾಟೀಲ, ಸಹಕಾರ್ಯದರ್ಶಿ ಈಶ್ವರ ಪಾಟೀಲ, ನಿರ್ದೇಶಕರಾದ ವಿಜಯ ಭೋಸಲೆ, ಆನಂದ ಜಾಧವ, ರಾಜು ಬಿರಜೆ, ಶಂಕರ ಶೇಳಕೆ, ನವೀನ್ ಕದಂ, ಬಸವರಾಜ ಘಾಟಗೆ, ವಿನಯ ಬಾಬರ್, ವಿನಾಯಕ ಸಾವಂತ್, ಮಂಜುನಾಥ ಜಾಧವ, ಸುನೀಲ ಮೋರೆ, ಪ್ರಾಚಾರ್ಯೆ ಶೈಲಶ್ರೀ ಎಂ. ಸಂಕೋಜಿ, ದೈಹಿಕ ಶಿಕ್ಷಣ ಶಿಕ್ಷಕ ವಿನಾಯಕ ದವಣೆ ಹಾಗೂ ಕಾಲೇಜಿನ ಸಿಬ್ಬಂದಿ ಅಭಿನಂದಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 