ಮೆದುಳು ನಿಷ್ಕ್ರಿಯೆಗೊಂಡಿದ್ದ ಯುವಕನ ಮೆದುಳು ತಂದು 13ರ ಬಾಲಕನಿಗೆ ಜೋಡಣೆ


ಬೆಂಗಳೂರು,ಆ.08 (ಹಿ.ಗರದ ಬನ್ನೇರುಘಟ್ಟ ವ್ಯವಸ್ಥೆಯ ಪೋಟರ್ಿಸ್ ಆಸ್ಪತ್ರೆಯಲ್ಲಿ ಹದಿಮೂರು ವರ್ಷ ಹೃದ್ರೋಗಿಗೆ ಬದಲಿ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಹೃದಯವನ್ನು ತಂದು ಈ ಚಿಕಿತ್ಸೆ ಯಶಸ್ವಿಗೊಳಿಸಲಾಗಿದೆ. 

13 ವರ್ಷದ ರೋಗಿಗೆ ವಿಶಾಖಪಟ್ಟಂನಲ್ಲಿ ಮೆದುಳು ನಿಷ್ಕ್ರೀಯಗೊಂಡಿದ್ದ 20 ವರ್ಷದ ಯುವಕನ ಹೃದಯವನ್ನು ಆತನ ಕುಟುಂಬದ ಸಮ್ಮತಿ ಮೇರೆಗೆ ಪಡೆದು ಅಲ್ಲಿಂದ ವಿಶೇಷ ವಿಮಾನದಲ್ಲಿ ತಂದು ವಿಮಾನ ನಿಲ್ದಾಣದಿಂದ ಬನ್ನೇರುಘಟ್ಟ ರಸ್ತೆಯ ಪೋಟರ್ಿಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಪೋಟರ್ಿಸ್ ಆಸ್ಪತ್ರೆ ವಿಮಾನ ನಿಲ್ದಾಣದಿಂದ 45 ಕಿ.ಮೀ ದೂರವಿದ್ದು, ಸಕಾಲದಲ್ಲಿ ಹೃದಯ ತಲುಪಿಸುವ ಸಲುವಾಗಿ ನಗರದ ಸಂಚಾರ ಪೊಲೀಸರು ರಸ್ತೆಯುದ್ದಕ್ಕೂ ಸಂಚಾರ ಮುಕ್ತ ವ್ಯವಸ್ಥೆಯನ್ನು ಅಳವಡಿಸಿದ್ದರಿಂದ ಕೇವಲ 45 ನಿಮಿಷಗಳಲ್ಲಿ ಹೃದಯವನ್ನು ಆಸ್ಪತ್ರೆಗೆ ತರಲಾಯಿತು ಎಂದು ವೈದ್ಯಾಧಿಕಾರಿಗಳು 

ತಿಳಿಸಿದ್ದಾರೆ.