ಲಂಚ: ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಲಂಚ: ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ Bribe: Two officials caught in Lokayukta trap

ಲೋಕದರ್ಶನ ವರದಿ, 

ಜಮಖಂಡಿ 28: ನಗರದ ತಾಲೂಕಡಳಿತ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪಖಜಾನೆ ಅಧಿಕಾರಿ ಎಸ್‌.ಎಸ್‌. ಬಿರಾದರ ಹಾಗೂ ಪ್ರಥಮ ದರ್ಜೆಯ ಸಹಾಯಕ ವಿನಾಯಕ ಹೊನವಾಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 

ತಾಲೂಕಾಡಳಿತ ಸೌಧದ ಉಪಖಜಾನೆ ಅಧಿಕಾರಿ ಎಸ್‌.ಎಸ್‌.ಬಿರಾದರ ಹಾಗೂ ಪ್ರಥಮ ದರ್ಜೆಯ ಸಹಾಯಕ ವಿನಾಯಕ ಹೊನವಾಡ ಇಬ್ಬರು ಸೇರಿಕೊಂಡು 40 ಸಾವಿರ ರೂ.ಗಳ ಲಂಚದ ಹಣಕ್ಕೆ ಬೇಡಿಕೆಯನ್ನು ಹಣವನ್ನು ಪಡೆಯುವ ಸಮಯದಲ್ಲಿ ಇಬ್ಬರು ಭ್ರಷ್ಟ್ರ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದ ತಿಮಿಂಗಿಲುಗಳು. 

ನಗರದ ರುದ್ರಸ್ವಾಮಿ ಪೇಠ ಗಲ್ಲಿಯ ಚೇತನ ತರತರಿ ಅವರ ಮಾವನವರಾದ ರವಿ ರಾಮಚಂದ್ರ ತರತರಿ ಅವರು ನಗರಸಭೆಯಲ್ಲಿ ಪೌರಕಾರ್ಮಿಕನಾಗಿ ನಿವೃತ್ತಿ ಹೊಂದಿದ ಬಳಿಕ ಬರುವ ಪಿಂಚಣಿ ಮತ್ತು ಆರ್ಥಿಕ ಸೌಲಭ್ಯಗಳನ್ನು ಜಮೆ ಮಾಡಲು 1, 42, 900 ರೂ.ಗಳ ಹಣದಲ್ಲಿ ಅದರ ಅರ್ಧದಷ್ಟು 70 ಸಾವಿರ ರೂ,ಗಳ ಲಂಚದ ಹಣದ ಬೇಡಿಕೆಯನ್ನು ಇಟ್ಟು. ಅದರಲ್ಲಿ 40 ಸಾವಿರ ರೂ,ಗಳ ಹಣವನ್ನು ನೀಡಲು ಬೇಡಿಕೆ ಇಟ್ಟಿದರು.

40 ಸಾವಿರ ರೂ.ಗಳ ಹಣವನ್ನು ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ತಿಮಿಂಗಿಲಗಳಾದ ಉಪಖಜಾನೆ ಅಧಿಕಾರಿ ಎಸ್‌.ಎಸ್‌.ಬಿರಾದರ ಹಾಗೂ ಪ್ರಥಮ ದರ್ಜೆಯ ಸಹಾಯಕ ವಿನಾಯಕ ಹೊನವಾಡ ಸಿಕ್ಕಿಬಿದ್ದಾರೆ.

ವಿಚಾರಣೆ ಮುಗಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ ಎಂದು ಲೋಕಾಯುಕ್ತ ಎಸ್‌ಪಿ, ಮಾನಿಂಗ ನಂದಗಾಂವಿ ಅವರು ತಿಳಿಸಿದ್ದಾರೆ. ದಾಳಿ ಸಮಯದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಡಿಎಸ್‌ಪಿ, ಸುರೇಶ ರಡ್ಡಿ, ಸಿಪಿಐ ಎನ್,ಆರ್, ಕಿಲ್ಲಾರೆ, ಮಲ್ಲಿಕಾರ್ಜುನ ಬಿರಾದರ ಹಾಗೂ ಸಿಬ್ಬಂದಿಗಳು ಇದ್ದರು.