ಮಗು ಜನಿಸಿದ ಆರು ತಿಂಗಳವರೆಗೆ ಎದೆ ಹಾಲನ್ನೇ ಕುಡಿಸಿ: ಡಾ. ಸಂಕ್ರಟ್ಟಿ
Breastfeed your baby for six months after birth: Dr. Sankratti
ಅಥಣಿ, 18 ; ತಾಯಂದಿರು ತಮ್ಮ ಮಗುವಿಗೆ ಮೊದಲಿನ ಆರು ತಿಂಗಳು ಎದೆ ಹಾಲು ಮಾತ್ರ ಕುಡಿಸಬೇಕು ಆಗಲೇ ಜೀವನವಿಡಿ ಮಗು ಆರೋಗ್ಯವಂತವಾಗಿರಲು ಸಾಧ್ಯವಾಗುತ್ತದೆ ಎಂದು ಚಿಕ್ಕ ಮಕ್ಕಳ ತಜ್ಞ ಡಾ.ಸಿ.ಎ.ಸಂಕ್ರಟ್ಟಿ ಹೇಳಿದರು. ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರೋಟರಿ ಮತ್ತು ಇನ್ನರ ವ್ಹೀಲ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸ್ತನಪಾನ ಸಪ್ತಾಹದ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಎದೆ ಹಾಲು ಕುಡಿಸುವ ಸಂಬಂಧ ಅನೇಕರಲ್ಲಿ ಗೊಂದಲಗಳಿವೆ ಹೀಗಾಗಿ ತಾಯಿಗೆ ಆರೋಗ್ಯ ಸರಿ ಇಲ್ಲದಾಗ ಅಥವಾ ಇನ್ನಿತರ ಅನೇಕ ಕಾರಣಗಳಿಂದ ಮಗುವಿಗೆ ಎದೆ ಹಾಲು ಕುಡಿಸುವುದನ್ನು ನಿಲ್ಲಿಸಿ ಮೇಲಿನಿಂದ ಹಾಲು ಹಾಕುತ್ತಾರೆ ಯಾವ ಕಾರಣಕ್ಕೂ ತಾಯಂದಿರು ಮೊದಲಿನ ಆರು ತಿಂಗಳು ಎದೆ ಹಾಲು ಕುಡಿಸಲೇಬೇಕು ಎಂದ ಅವರು ಇತ್ತೀಚಿನ ಸಂಶೋಧನೆಯಲ್ಲಿ ಎಚ್.ಐ.ವ್ಹಿ ಪಿಡಿತ ತಾಯಿಯೂ ತನ್ನ ಮಗುವಿಗೆ ಹಾಲು ಕುಡಿಸಬೇಕು ಎನ್ನುವುದು ಧೃಢವಾಗಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಡಾ.ಆನಂದ ಗುಂಜಿಗಾಂವಿ ಮಾತನಾಡಿ, ಕೆಲವೇ ಕೆಲ ಗಂಭೀರ ಅನಾರೋಗ್ಯ ಸಮಸ್ಯೆ ತಾಯಿ ಎದುರಿಸುತ್ತಿದ್ದು, ಆಗ ವೈದ್ಯರ ಸಲಹೆ ಪಡೆದು ಎದೆ ಹಾಲು ಕುಡಿಸುವುದನ್ನು ನಿಲ್ಲಿಸಬಹುದು ಎಂದ ಅವರು ಎದೆ ಹಾಲು ಕುಡಿಸುವುದರಿಂದ ಕ್ಯಾನ್ಸರಂತಹ ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ತಾಯಂದಿರಿಗೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಸಚೀನ್ ಮೀರಜ, ತಾಯಂದಿರು ವೈಜ್ಞಾನಿಕವಾಗಿ ಮಗುವನ್ನು ಎತ್ತಿಕೊಂಡು ಎದೆ ಹಾಲು ಕುಡಿಸಬೇಕು ಇಲ್ಲದೇ ಹೋದಲ್ಲಿ ಮಗುವಿನ ಕುತ್ತಿಗೆಯಲ್ಲಿ ನೋವು ಬಂದು ಮಗು ಹಾಲು ಕುಡಿಯುವುದನ್ನೇ ನಿಲ್ಲಿಸುತ್ತದೆ ಎಂದ ಅವರು ಮಗುವಿಗೆ ಹಾಲು ಕುಡಿಯುವ ಮೂಡ್ ಬಂದಾಗಲೇ ತಾಯಿ ಎದೆ ಹಾಲು ಕುಡಿಸಿದಲ್ಲಿ ಮಗು ಆರಾಮಾಗಿ ಹಾಲು ಕುಡಿಯುತ್ತದೆ ಎಂದರು.
ಡಾ.ರೋಹಿಣಿ ಗುಂಜಿಗಾಂವಿ ಮಾತನಾಡಿ, ಮಗುವಿಗೆ ಮೊದಲು ಆರು ತಿಂಗಳು ನೀರೂ ಸಹ ಕುಡಿಸಬಾರದು ಈ ಅವಧಿಯಲ್ಲಿ ತಾಯಿ ಎದೆ ಹಾಲನ್ನಷ್ಟೇ ಕುಡಿಸಬೇಕು ಎಂದ ಅವರು ಪ್ರತಿ ಎರಡು ಅಥವಾ ಮೂರು ಗಂಟೆಗಳಿಗೊಮ್ಮೆ ಹಾಲು ಕುಡಿಸಬೇಕು ಆದರೆ ಮೂರು ತಿಂಗಳಲ್ಲಿಯೇ ತಾಯಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾದಲ್ಲಿ ಹಾಲನ್ನು ಶೇಖರಿಸಿಟ್ಟು ಕೂಡ ಕುಡಿಸಬಹುದು ಇದಕ್ಕಾಗಿ ವೈದ್ಯರನ್ನು ಸಂಪರ್ಕಿಸಿ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಮಂಜುನಾಥ ಸೌಂದಲಗೇಕರ ಮಾತನಾಡಿ, ಈ ಸಮಾಲೋಚನಾ ಶಿಬಿರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಕೂಡಿಸಿ ಒಂದು ದಿನದ ಶಿಬಿರ ಆಯೋಜಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಡಾ.ಸದಾಶಿವ ಕಾಗವಾಡೆ, ಡಾ.ಅರುಣಾ ಅಸ್ಕಿ, ಡಾ.ಎ.ಬಿ.ಗುಳಿಧರ, ರೋಟರಿ ಮತ್ತು ಇನ್ನರ ವ್ಹೀಲ್ ಕ್ಲಬ್ ಪದಾಧಿಕಾರಿಗಳಾದ ಸಚೀನ್ ದೇಸಾಯಿ, ಪೂರ್ಣಿಮಾ ಪಾಂಗಿ, ಸುನೀತಾ ದೇಸಾಯಿ, ಶೋಭಾ ಕೋಲಾರ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ರೂಬಿಯಾ ಮುಜಾವರ, ಶಶಿಕಲಾ ಹೆಡಗೆ, ಆಶಾ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 