ಮಗುವಿನ ಉಜ್ವಲ ಭವಿಷ್ಯಕ್ಕೆ ಎದೆ ಹಾಲು ಅತ್ಯಗತ್ಯ: ಡಾ. ರಾಜೇಂದ್ರ ಗಡಾದ
Breast milk is essential for a child's bright future: Dr. Rajendra Gadad
ಗದಗ 6: ತಾಯಿ ಮತ್ತು ಮಗುವಿನ ಬಾಂಧವ್ಯವು ತುಂಬಾ ಪವಿತ್ರವಾದುದು ಮತ್ತು ನಿಷ್ಕಲ್ಮಶ ಹಾಗೂ ಭಾವನಾತ್ಮಕವಾದದು. ತಾಯಿ ತನ್ನ ಮಗುವಿಗೆ ಎದೆ ಹಾಲು ಉಣಿಸುವುದರ ಮೂಲಕ ತಾಯಿ ಮತ್ತು ಮಗುವಿನ ಜೀವನಕ್ಕೂ ಜೀವ ಭಾವದ ಕೊಂಡಿ ಗಾಢವಾಗಿ ಬೆಳೆಸಲು ಕಾರಣವೇ ಸ್ತನ್ಯಪಾನ .ಮಗುವಿನ ಉಜ್ವಲ ಭವಿಷ್ಯಕ್ಕೆ ಎದೆ ಹಾಲು ಅತ್ಯಗತ್ಯ ಮತ್ತು ಅಮೂಲ್ಯ ಎಂದು ಗದಗ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಎಸ್ ಗಡಾದ ಅವರು ಹೇಳಿದರು.
ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯವು ನಗರ ಆರೋಗ್ಯ ಕೇಂದ್ರ ಗದಗ, ತಾಲೂಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಇಲ್ಲಿನ ಕಾಶಿ ವಿಶ್ವನಾಥ ನಗರದ ಕಾಶಿ ಮಂದಿರದಲ್ಲಿ ಏರಿ್ಡಸಲಾಗಿದ್ದ ತಾಲೂಕ ಮಟ್ಟದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮೇಲಿನಂತೆ ಮಾತನಾಡಿದ ಡಾ. ಗಡಾದವರು ತಾಯಿಯ ಎದೆ ಹಾಲು ತುಂಬಾ ಶ್ರೇಷ್ಠ ವಾದದು ಮಗು ಬಯಸಿದಾಗಲೆಲ್ಲ ತಾಯಿ ನೀಡಬಹುದಾದ ಅಮೃತ ಎದೆ ಹಾಲಾಗಿದೆ.
ಇದಕ್ಕೆ ಯಾವುದೇ ಸಿದ್ಧತೆ ಬೇಕಾಗಿಲ್ಲ ಇದು ಮಗುವಿಗಾಗಿಯೇ ಸಿದ್ಧಪಡಿಸಿದ ಆಹಾರವಾಗಿದೆ. ತಾಯಿ ಎದೆ ಹಾಲಿನಲ್ಲಿ ಕೊಲೆಸ್ಟ್ರೋಮ್ ಎಂಬ ಅಂಶವು ಇದ್ದು ಇದು ತುಂಬಾ ಶಕ್ತಿವರ್ಧಕವಾಗಿದೆ. ಮತ್ತು ಇದು ಅನೇಕ ಸೋಂಕುಗಳ ವಿರುದ್ಧ ಮಗುವಿಗೆ ರಕ್ಷಣೆ ನೀಡುತ್ತದೆ. ಅನೇಕ ಜನರು ಮೂಢನಂಬಿಕೆ ಹಾಗೂ ತಪ್ಪು ತಿಳುವಳಿಕೆಯಿಂದ ಮಗು ಹುಟ್ಟಿದಾಗ ತಾಯಿಯ ಹಾಲನ್ನು ಕುಡಿಸುವುದೇ ಇಲ್ಲ ಇದು ತುಂಬಾ ತಪ್ಪು ನಿರ್ಧಾರ ಅರ್ಧ ಗಂಟೆ ಒಳಗಾಗಿ ಮಗುವಿಗೆ ಎದೆ ಹಾಲನ್ನು ಕುಡಿಸಬೇಕು ಇದು ತಾಯಿಯ ಮಮತೆಯ ಸಂಕೇತವೂ ಆಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಮಹೇಶ ಕೊಪ್ಪಳ್ ಅವರು ಮಾತನಾಡಿ ಎದೆ ಹಾಲು ಸುಸ್ಥಿರ ಜೀವನದ ಭದ್ರ ಅಡಿಪಾಯ ಎಂಬುದು ಈ ಸಲದ ಘೋಷವಾಕ್ಯವಾಗಿದ್ದು ತಾಯಿಯ ಎದೆ ಹಾಲು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಪ್ರತಿಯೊಬ್ಬ ತಾಯಿಗೂ ತನ್ನ ಮಗುವಿಗೆ ಸಾಕಾಗುವಷ್ಟು ಹಾಲನ್ನು ಉತ್ಪಾದಿಸುವ ಸಾಮರ್ಥ್ಯ ಇರುತ್ತದೆ ಎದೆ ಹಾಲನ್ನು ಬಿಟ್ಟು ಬೇರೆ ಯಾವ ಹಾಲನ್ನು ಮಗುವಿಗೆ ಕೊಡುವುದು ಸರಿಯಲ್ಲ ಎಂದರು.
ಕೆ ಎಚ್ ಪಾಟೀಲ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ತರಬೇತಿ ವೈದ್ಯರು ಡಾ. ವಸುಂಧರಾ ಆರ್ಯರ ಅವರ ನೇತೃತ್ವದಲ್ಲಿ ಪ್ರಸ್ತುತಪಡಿಸಿದ ಎದೆ ಹಾಲಿನ ಮಹತ್ವ ಕುರಿತಾದ ಬೀದಿ ನಾಟಕ ತುಂಬಾ ಗಮನಸೆಳೆಯಿತು.
ಆರಂಭದಲ್ಲಿ ಶ್ರೀಮತಿ ರೂಪಾ ಹುಯಿಲಗೋಳ ಪ್ರಾರ್ಥಿಸಿದರು. ಆಶಾ ಕಾರ್ಯಕರ್ತೆ ಶ್ರೀಮತಿ ಶೋಭಾ ಮಠ ಸರ್ವರನ್ನು ಸ್ವಾಗತಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಎಸ್ ಹೆಚ್. ಮುರುನಾಳ ವಿಶ್ವ ಎದೆ ಹಾಲಿನ ಸಪ್ತಾಹ ದಿನಾಚರಣೆಯ ಉದ್ದೇಶ ಕುರಿತು ಪ್ರಾಸ್ತಾವಿಕ ನುಡಿಗಳನ್ನಾ ಡಿದರು. ಆರೋಗ್ಯ ನೀರೀಕ್ಷೆನಾಧಿಕಾರಿ ಶ್ರೀ ಸಹಜಾನಂದ
ಸಾ ಸ್ವಿಹಳ್ಳಿಯವರು ಕಾರ್ಯಕ್ರಮ ನಿರೂಪಿಸಿದರು. ಆಶಾ ಕಾರ್ಯಕರ್ತೆ ಶ್ರೀಮತಿ ಸವಿತಾ ಪಾಟೀಲ್ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಹಾಗೂ ಆರೋಗ್ಯ ಇಲಾಖೆಯಸಿಬ್ಬಂದಿ ವರ್ಗದವರು, ಗರ್ಭಿಣಿಯರು ತಾಯಂದಿರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 