ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಇಂದು ದೆಹಲಿಗೆ
ನವದೆಹಲಿ, ಜ 24 : ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ 71 ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸನಾರೊ ಇಂದು ನಾಲ್ಕು ದಿನಗಳ ಭೇಟಿಗಾಗಿ ದೆಹಲಿಗೆ ಆಗಮಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅಧ್ಯಕ್ಷ ಬೋಲ್ಸೊನಾರೊ ಭೇಟಿ ನೀಡುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟ ಪಡಿಸಿದೆ.
ಭೇಟಿ ನೀಡುವ ಗಣ್ಯರೊಂದಿಗೆ ಏಳು ಮಂತ್ರಿಗಳು, ಬ್ರೆಜಿಲ್ ಸಂಸತ್ತಿನ ಬ್ರೆಜಿಲ್-ಇಂಡಿಯಾ ಸ್ನೇಹ ಸಮೂಹದ ಅಧ್ಯಕ್ಷರು, ಹಿರಿಯ ಅಧಿಕಾರಿಗಳು ಮತ್ತು ವ್ಯಾಪಾರಿ ನಿಯೋಗ ಬರುತ್ತಿದೆ.
2019 ರ ನವೆಂಬರ್ ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಬ್ರೆಸಿಲಿಯಾಕ್ಕೆ ಭೇಟಿ ನೀಡಿದ್ದರು.
ಇದು ಅಧ್ಯಕ್ಷ ಬೋಲ್ಸೊನಾರೊ ಅವರ ಮೊದಲ ಭಾರತ ಭೇಟಿಯಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಅಧ್ಯಕ್ಷ ಬೋಲ್ಸೊನಾರೊ ಅವರು ನಾಳೆ ರಂದು ರಾಷ್ಟಪತಿ ರಾಂ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದು, ಅವರ ಗೌರವಾರ್ಥವಾಗಿ ಔತಣಕೂಟ ಆಯೋಜಿಸಲಾಗಿದೆ ನಂತರ ಅವರು ಪ್ರಧಾನ ನರೇಂದ್ರ ಮೋದಿ ಜೊತೆಯೂ ದ್ವಿಪಕ್ಷೀಯ ಅಂತಾರಾಷ್ಟ್ರೀಯ ವಿಚಾರ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರನ್ನೂ ಬೆಜಿಲ್ ಅಧ್ಯಕ್ಷರು ಭೇಟಿ ಮಾಡಲಿದ್ದಾರೆ.
ಇದೆ 27 ರಂದು ಅಧ್ಯಕ್ಷ ಬೋಲ್ಸನಾರೊರು ಭಾರತ ಮತ್ತು ಬ್ರೆಜಿಲ್ ಉದ್ಯಮ ರಂಗದ ನಾಯಕರ ವೇದಿಕೆಯನ್ಉ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ದ್ವಿಪಕ್ಷೀಯ ಸಂಬಂಧಗಳು ಸಾಮಾನ್ಯ ಜಾಗತಿಕ ದೃಷ್ಟಿ, ಹಂಚಿಕೆಯ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಎರಡೂ ದೇಶಗಳ ಆರ್ಥಿಕ ಪ್ರಗತಿಯ ಬದ್ಧತೆ ಆಧರಿಸಿದೆ.
ಭಾರತ ಮತ್ತು ಬ್ರೆಜಿಲ್ ನಡುವಿನ ದ್ವಿಪಕ್ಷೀಯ ವ್ಯಾಪಾರ 2018-19ರಲ್ಲಿ 8.2 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.
ಬ್ರೆಜಿಲ್ ನಲ್ಲಿ ಭಾರತೀಯ ಹೂಡಿಕೆಗಳು ಸುಮಾರು 6 ಬಿಲಿಯನ್ ಮತ್ತು ಭಾರತದಲ್ಲಿ ಬ್ರೆಜಿಲ್ ಹೂಡಿಕೆ 2018 ರಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಎಂದು ಅಂದಾಜು ಮಾಡಲಾಗಿದೆ.
ಭಾರತದಲ್ಲಿ ಬ್ರೆಜಿಲ್ ಹೂಡಿಕೆಗಳು ಮುಖ್ಯವಾಗಿ ಮೋಟಾರು, ವಾಹನ , ಐಟಿ, ಗಣಿಗಾರಿಕೆ, ಇಂಧನ ಮತ್ತು ಜೈವಿಕ ಇಂಧನ ಕ್ಷೇತ್ರಗಳಲ್ಲಿದೆ ಪ್ರತಿಯಾಗಿ ಭಾರತ ಬ್ರೆಜಿಲ್ ಐಟಿ, ಔಷಧ , ಇಂಧನ, ಕೃಷಿ ವ್ಯವಹಾರ, ಗಣಿಗಾರಿಕೆ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದೆ.
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ 