ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಏರಿ​‍್ಡಸಿದ ಹಿರಿಯ ನಾಗರಿಕರ ಆರೈಕೆದಾರರಿಗೆ ಸನ್ಮಾನ

ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಏರಿ​‍್ಡಸಿದ ಹಿರಿಯ ನಾಗರಿಕರ ಆರೈಕೆದಾರರಿಗೆ ಸನ್ಮಾನ Brahmakumari Ishwari University felicitates caregivers of senior citizens

                           ಕೊಪ್ಪಳ 28: ಹಿರಿಯರು ಮುಂಬರುವ ಪೀಳಿಗೆಗೆ ದಾರಿ ದೀಪ ಹಿರಿಯರ ಸೇವೆ ಕಿರಿಯರ ಆಧ್ಯ ಕರ್ತವ್ಯ ಹಿರಿಯರನ್ನು ಆರೈಕೆ ಮಾಡುವವರು ಸಮಾಜಕ್ಕೆ ಒಂದು ಆದರ್ಶ ಇದು ಒಂದು ಪುಣ್ಯಕಾರ್ಯ ಪವಿತ್ರ ಕಾರ್ಯ ಎಂದು ಡಾಕ್ಟರ್ ಬಿ ಕೆ ಮಹೇಶ್ ಹೇ ಮಾದ್ರಿ ವೃದ್ಧರೋಗ ಚಿಕಿತ್ಸಕರು ರಾಜಸ್ಥಾನ ಮೌಂಟ್ ಅಬು ಇವರು ಹಿತನುಡಿಗಳನ್ನು ತಿಳಿಸಿದರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಏರಿ​‍್ಡಸಿದ ಹಿರಿಯ ನಾಗರಿಕರ ಆರೈಕೆದಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಮುಂದುವರಿದು ತಿಳಿಸುತ್ತಾ ವೃದ್ಧಾಪ್ಯದಲ್ಲಿ ಖುಷಿಯಲ್ಲಿರಲು ತಮ್ಮ ದಿನಚರಿಯನ್ನು ಸರಿಯಾಗಿ ಸೆಟ್ ಮಾಡಿಕೊಳ್ಳಿ ನಿಯಮಿತ ಆಹಾರ ಲಘು ವ್ಯಾಯಾಮ ಸರಿಯಾಗಿರಲಿ. ಮೊಬೈಲ್ ಬಳಕೆ ಕಡಿಮೆ ಇರಲಿ, ನಿದ್ರೆ ಚೆನ್ನಾಗಿ ಮಾಡಿ ಅಧ್ಯಾತ್ಮ ಜ್ಞಾನ ಮತ್ತು ಮೆಡಿಟೇಶನ್ ಜೀವನದಲ್ಲಿ ಖಾಯಂ ಇಟ್ಟುಕೊಳ್ಳಿ ಎಂದು ಕಿವಿ ಮಾತು ತಿಳಿಸಿದರು

                    ಅಧ್ಯಾತ್ಮ ಜ್ಞಾನವನ್ನು ಪ್ರತಿನಿತ್ಯ ಕೇಳುವುದರಿಂದ ನಕರಾತ್ಮಕ ವಿಚಾರಗಳು ನಕರಾತ್ಮಕ ಭಾವನೆಗಳು ದೂರವಾಗಿ ಮನಸ್ಸು ಖುಷಿಯಲ್ಲಿರಲು ಸಾಧ್ಯ ಎಂದರು ಮೆಡಿಟೇಶನ್ ಎಂದರೆ ಮನುಷ್ಯನ ಮನಸ್ಸನ್ನು ಸಕರಾತ್ಮಕತೆಯ ಕಡೆಗೆ ಕೊಂಡೊಯ್ಯುವ ಮಾರ್ಗ ಎಂದರು ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಮಾತನಾಡುತ್ತಾ ಹಿರಿಯ ನಾಗರಿಕರು ಅನುಭವದ ಗಣಿ ಅವರ ಮಾರ್ಗದರ್ಶನ ಇಂದಿನ ಪೀಳಿಗೆಗೆ ಅತ್ಯಗತ್ಯ ವೃದ್ಧಾಪ್ಯದಲ್ಲಿ ಹಿರಿಯರನ್ನು ಆರೈಕೆ ಮಾಡುತ್ತಿರುವವರನ್ನು ಪರಮಾತ್ಮನ ಸ್ಥಾನದಲ್ಲಿ ಸನ್ಮಾನ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಹಿರಿಯ ನಾಗರಿಕರ ಆರೈಕೆದಾರರಿಗೆ ಪರಮಾತ್ಮ ಇನ್ನಷ್ಟು ಶಕ್ತಿಯನ್ನು ಆರೋಗ್ಯ ಆಶೀರ್ವಾದವನ್ನು ನೀಡಲಿ ಎಂದು ಶುಭ ಹಾರೈಸಿದರು ವೇದಿಕೆಯ ಮೇಲೆ ಸುಮಂಗಲ ಹಂಚಿನಾಳ ರಾಜೇಶ್ವರಿ, ಶಾಂತಯ್ಯ, ಶಾಂತಪ್ಪ, ಕೋಮಲ ಕುದರಿ ಮೋತಿ, ಮಾಲ ಮುಂತಾದವರು ಉಪಸ್ಥಿತರಿದ್ದರು ಹಿರಿಯ ನಾಗರಿಕರ ಆರೈಕೆದಾರರನ್ನು ಸನ್ಮಾನಿಸಲಾಯಿತು ಬ್ರಹ್ಮಕುಮಾರಿ ಸ್ನೇಹಕ್ಕ ಸ್ವಾಗತಿಸಿ ವಂದಿಸಿದರು ಎಲ್ಲರೂ ಬ್ರಹ್ಮ ಭೋಜನ ಸವಿದು ಪ್ರಸನ್ನರಾದರು