ಮಾರ್ಚ 29 ರಂದು ಗ್ರಂಥ ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮ
Book launch ceremony program on March 29th
ಲೋಕದರ್ಶನ ವರದಿ
ಜಮಖಂಡಿ 27: ಡಾ.ತಾತಾಸಾಹೇಬ ಬಾಂಗಿ ಅವರ ಸಂಶೋಧನೆಯ ಕೃತಿಯು ಸ್ವಾತಂತ್ರ್ಯ ಸೇನಾನಿ ಪದ್ಮಾವತಿಬಾಯಿ ವಾಮನರಾಯ ದೇಸಾಯಿ ಬಿದರಿ ಗ್ರಾಮದವರ ಕುರಿತು ಗ್ರಂಥ ಲೋಕಾರ್ಪಣೆ ಸಮಾರಂಭ ಕಾರ್ಯಕ್ರಮ ಮಾರ್ಚ 29 ರಂದು ಬೆಳಗ್ಗೆ 10 ಗಂಟೆಗೆ ಬಸವ ಭವನದಲ್ಲಿ ಜರುಗಲಿದೆ ಎಂದು ಕೃತಿ ಸಂಶೋಧಕ ಡಾ, ತಾತಾಸಾಹೇಬ ಬಾಂಗಿ ಅವರು ತಿಳಿಸಿದರು.
ನಗರದ ದಾನಮ್ಮ ದೇವಿಯ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಸೇನಾನಿ ಪದ್ಮಾವತಿಬಾಯಿ ವಾಮನರಾಯ ದೇಸಾಯಿ ಅವರು ಇತಿಹಾಸ ಪುಟಗಳ ಮುಂಚೂಣಿಯಲ್ಲಿ ಇರಬೇಕಾಗಿದರು. ಅವರು ಜಮಖಂಡಿಯವರು. ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಮೌನಕಾಂತ್ರಿ ಜೀವನದುದ್ದಕ್ಕೂ ಮಾಡಿದ ಸಾಮಾಜಿಕ ಸೇವೆ. ಹೋರಾಟದ ಹೆಜ್ಜೆ ಅನನ್ಯವಾದದ್ದು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ ಜೈಲು ಶಿಕ್ಷೆ ಅನುಭವಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಜಮಖಂಡಿ ಸಂಸ್ಥಾನದ ಸಭೆಯ ಸದಸ್ಯರಾಗಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದ ಏಕೈಕ ಮಹಿಳಾ ಶಾಸಕಿಯಾಗಿದರು. ಸ್ವಾತಂತ್ರ್ಯ ಸೇನಾನಿ ಪದ್ಮಾವತಿಬಾಯಿ ವಾಮನರಾಯ ದೇಸಾಯಿ ಅವರ ಹೆಜ್ಜೆ ಗುರುತುಗಳನ್ನು ನಾಡಿಗೆ ಪರಿಚಯಿಸುವ ಕಾರ್ಯವನ್ನು ಡಾ,ತಾತಾಸಾಹೇಬ ಬಾಂಗಿ ಅವರು ಮಾಡುವ ಮೂಲಕ ಸಂಶೋಧನಾ ಕೃತಿಯನ್ನು ಪ್ರಕಟಿಸುವುದರ ಮೂಲಕ ಪದ್ಮಾವತಿಬಾಯಿ ಅವರ ದಿಟ್ಟ ಹೆಜ್ಜೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಮಾಡಿದ್ದೇನೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂತೋಷ ತಳಕೇರಿ ಮಾತನಾಡಿ, ಮಾರ್ಚ್ 29 ರಂದು ನಡೆಯುವ ಡಾ,ತಾತಾಸಾಹೇಬ ಬಾಂಗಿ ಅವರ ಸಂಶೋಧನಾ ಕೃತಿಯಾದ ಸೇನಾನಿ ಪದ್ಮಾವತಿಬಾಯಿ ವಾಮನರಾಯ ದೇಸಾಯಿ ಅವರ ಗ್ರಂಥ ಲೋಕಾರೆ್ಣ ಕಾರ್ಯಕ್ರಮದಲ್ಲಿ ಮೂಲ ಸಿದ್ದೇಶ್ವರ ಸಿದ್ದಮುತ್ಯಾ ಶ್ರೀಗಳು ಸಾನಿಧ್ಯವನ್ನು ವಹಿಸುವರು. ಪದ್ಮಾವತಿಬಾಯಿ ಅವರ ಮೊಮ್ಮಗ ಸಾಹಿತಿ, ಪತ್ರಕರ್ತ ಮನೋಜ ಪಾಟೀಲ ಅವರು ಉದ್ಘಾಟನೆಯನ್ನು ನೇರವೆರಿಸುವರು. ಕೃತಿ ಲೋಕಾರೆ್ಣಯನ್ನು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೋ, ಮೀನಾ ಚಂದಾವರಕರ ನೇರವೆರಿಸುವರು. ಸವದತ್ತಿ ಖ್ಯಾತ ಸಾಹಿತಿ ಡಾ,ವಾಯ್,ಎಂ, ಯಾಕ್ಕೋಳಿ ಕೃತಿ ಪರಿಚಯ ಮಾಡುವರು. ಮುಖ್ಯ ಅತಿಥಿಗಳಾಗಿ ಮಹಾದೇವ ಬಸರಕೋಡ, ಸವಿತಾ ಬೆಳಗಲಿ, ಡಾ,ಎ.ಬಿ.ವಗ್ಗರ, ಕೆ.ಚನ್ನಬಸಪ್ಪ, ಸುಬೇದಾರ ಮೇಜರ್ ರಾಮು ಎಸ್.ಶಿರೋಳ, ಬಸವರಾಜ ಹಟ್ಟಿಗೌಡರ, ಡಾ,ಹೆಚ್.ಬಿ.ಚೌಧರಿ ಸೇರಿದಂತೆ ಅನೇಕ ಸಾಹಿತಿಗಳು, ಗಣ್ಯಮಾನ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಪ್ಟನ್ ಗಿರಮಲ್ಲಪ್ಪಾ ಹಂಚಿನಾಳ, ಬಸವರಾಜ ನಾಗಮೋತಿ, ಶ್ರೀಪಾದ ಪ್ರಕಾಶ ಹೊನವಾಡ, ಶಿವಾನಂದ ಸಾತ್ಯಾಳ ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 