ಗುರು ಮಡಿವಾಳೇಶ್ವರರ ಮಹಿಮೆ ಸಾರುವ ಗ್ರಂಥ ಲೋಕಾರೆ್ಣ
Book extolling the glory of Guru Madiwaleshwara released to the public
ಲೋಕದರ್ಶನ ವರದಿ
ಯರಗಟ್ಟಿ 03: ಗುರು ಮಡಿವಾಳೇಶ್ವರರು ಯಾವುದೇ ಅಧಿಕಾರ, ಅಂತಸ್ತು ಅಥವಾ ಐಶ್ವರ್ಯವನ್ನು ಬಯಸದೆ ವೈರಾಗ್ಯಮೂರ್ತಿಯಾಗಿ ಜನಸೇವೆಗೆ ಜೀವನವನ್ನೇ ಅರ್ಿಸಿದ ಮಹಾನ್ ಸಂತರು ಎಂದು ಹೊಸೂರು ಗ್ರಾಮದ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಗಂಗಾಧರ ಮಹಾಸ್ವಾಮೀಜಿ ಹೇಳಿದರು.
ಹೊಸೂರು ಗ್ರಾಮದ ಗುರು ಮಡಿವಾಳೇಶ್ವರ ಮಠದಲ್ಲಿ ನಡೆದ ‘ಮುರುಗೋಡು ನಾಡಿನ ಹೊನ್ನು ಹಿ ಹೊಸೂರಿನ ಪುಣ್ಯಪುರುಷ ಗುರು ಮಡಿವಾಳೇಶ್ವರ’ ಗ್ರಂಥದ ಲೋಕಾರೆ್ಣ ಸಮಾರಂಭದಲ್ಲಿ ಅವರು ಮಾತನಾಡಿದರು. ಗುರು ಮಡಿವಾಳೇಶ್ವರರು 11 ವರ್ಷಗಳ ಕಾಲ ಹೊಸೂರಿನಲ್ಲಿ ವಾಸವಿದ್ದು ತಮ್ಮ ಕೈಯಾರೆ ಬಾವಿ ತೋಡಿ ಮಠವನ್ನು ನಿರ್ಮಿಸಿ ಗ್ರಾಮವನ್ನು ಪುಣ್ಯಭೂಮಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಹೂಲಿ ಸಂಬಯ್ಯನವರ ಮಠದ ಪೂಜ್ಯ ಉಮೇಶಜ್ಜನವರು ಮಾತನಾಡಿ, ಗುರು ಮಡಿವಾಳೇಶ್ವರರು ಅನೇಕ ಪವಾಡಗಳ ಮೂಲಕ ಜನಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದ ಮಹನೀಯರು. ಅವರ ಜೀವನ ಚರಿತ್ರೆ ಮತ್ತು ಸೇವೆಯನ್ನು ಗ್ರಂಥ ರೂಪದಲ್ಲಿ ಪರಿಚಯಿಸಿರುವುದು ಶ್ಲಾಘನೀಯ ಕಾರ್ಯ ಎಂದರು.
ಅಂಕಲಗಿ ಅಡವಿ ಸಿದ್ದೇಶ್ವರ ಮಠದ ಪೂಜ್ಯ ಅಮರಸಿದ್ದೇಶ್ವರ ಸ್ವಾಮೀಜಿ ಹಾಗೂ ವಿರಕ್ತಮಠದ ಪ್ರಭು ನೀಲಕಂಠ ಸ್ವಾಮೀಜಿ ಮಾತನಾಡಿ, ಗುರು ಮಡಿವಾಳೇಶ್ವರರು ಸಮಾಜ ಸುಧಾರಣೆಗೆ ಶ್ರಮಿಸಿದ ಅಪಾರ ಜ್ಞಾನಿಗಳು. ಅವರ ಜೀವನ ಮತ್ತು ಸಂದೇಶಗಳು ಇಂದಿನ ಪೀಳಿಗೆಗೂ ದಾರೀದೀಪವಾಗಿವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಪಿಕೆಪಿಎಸ್ ಅಧ್ಯಕ್ಷ ಪ್ರಕಾಶ ಮೊಗಬಸವ ಹಾಗೂ ನ್ಯಾಯವಾದಿ ಎಫ್.ಎಸ್. ಸಿದ್ದನಗೌಡ ಮಾತನಾಡಿ, ಹೊಸೂರು ಗ್ರಾಮವು ಚನ್ನಬಸವಣ್ಣ ಹಾಗೂ ಗುರು ಮಡಿವಾಳೇಶ್ವರರ ಆಶೀರ್ವಾದದಿಂದ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದ್ದು, ಗ್ರಾಮದ ಸಾಮಾಜಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಗಣ್ಯರು, ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಗ್ರಂಥ ರಚನೆಗೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಭಜನಾ ಮಂಡಳಿಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಉಪನ್ಯಾಸಕ ಎಸ್.ಕೆ. ಮಳ್ಳಿಕೇರಿ ಸ್ವಾಗತಿಸಿದರು. ಶಿಕ್ಷಕ ಈರಣ್ಣ ಬೆಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಜಾನನ ಸೂರ್ಯವಂಶಿ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಕಮತಗಿ ವಂದಿಸಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 