ನೂತನ ಆಂಜನೇಯಸ್ವಾಮಿ ಮೂತರ್ಿಯ ಮರೆವಣಿಗೆಗೆ ಬೊಮ್ಮಾಯಿ ಚಾಲನೆ
ಲೋಕದರ್ಶನ ವರದಿ
ಶಿಗ್ಗಾವಿ05 : ತಾಲೂಕಿನ ಬಂಕಾಪುರ ಪಟ್ಟಣದ ಕೊಟ್ಟಿಗೇರಿಯಲ್ಲಿ ಪ್ರಾಣ ಪ್ರತಿಷ್ಠಾಪನೆ ಗೊಳ್ಳಲಿರುವ ನೂತನ ಆಂಜನೇಯಸ್ವಾಮಿ ಮೂತರ್ಿಯ ಮೆರವಣಿಗೆಗೆ ಶಾಸಕ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆ ಸಕಲ ವಾದ್ಯ ವೈಭವ, ಮಹಿಳೆಯರ ಪೂರ್ಣ ಕುಂಭ ಮೇಳಗಳೊಂದಿಗೆ ಕೆಂಡದಮಠದ ಆವರಣದಿಂದ ಪ್ರಾರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿಬಂದಿತು.
ತನ್ನಿಮಿತ್ಯ ಪಟ್ಟಣವೆಲ್ಲ ತಳಿರು, ತೋರಣ, ಕೇಸರಿ ದ್ವಜಗಳಿಂದ ಶ್ರೀಂಗರಿಸಲ್ಪಟ್ಟಿತ್ತು. ಭಕ್ತರು ಅಂಗಳಕೆ ನೀರು ಚಿಮುಕಿಸಿ ರಂಗೋಲಿಹಾಕಿ ಮೇರವಣಿಗೆಯನ್ನು ಭವ್ಯವಾಗಿ ಸ್ವಾಗತಿಸಿ ಹಣ್ಣು ಕಾಯಿ ಪುಷ್ಫಗಳನ್ನು ಸಮಪರ್ಿಸಿ ತಮ್ಮ ಭಕ್ತಿ ನಮನ ಸಲ್ಲಿಸಿದರು.
ಮೆರವಣಿಗೆಯಲ್ಲಿ ಮಹಿಳೆಯರ ಪೂರ್ಣ ಕುಂಭ ಮೇಳ, ಡೊಳ್ಳು ಕುಣಿತ ಜನರ ಕಣ್ಮನ ಸೆಳೆದವು. ಮೇರವಣಿಗೆ ಭಕ್ತ ಜನಸಾಗರದ ಮದ್ಯ ಸಾಗಿಬಂದು ನೂತನ ದೇವಸ್ಥಾನದ ಪ್ರಾಂಗಣಕ್ಕೆ ಬಂದು ತಲುಪಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶಿಗ್ಗಾವಿ ವೀರಕ್ತಮಠದ ಸಂಗನಬಸವಸ್ವಾಮಿಗಳು,ಕೆಂಡದಮಠದ ಬಸಯ್ಯಸ್ವಾಮಿಗಳು, ಭೋವಿ ಸಮಾಜದ ತಾಲೂಕಾ ಅದ್ಯಕ್ಷ ಅಜರ್ುನ ಹಂಚಿನಮನಿ, ಮಂಜುನಾಥ ಗುಡಗೇರಿ, ಬಸವರಾಜ ನಾರಾಯಣಪುರ, ಭೀರಪ್ಪ ಸಣ್ಣತಮ್ಮನವರ, ವಿಜಯ ಗುಡಗೇರಿ, ಯಂಕಣ್ಣ ಮುಳಗುಂದ, ಸತೀಷ ವನಹಳ್ಳಿ, ಮಹೇಶ ಕುರಂದವಾಡ, ಯಲ್ಲಪ್ಪ ದೊಡ್ಡಮನಿ, ಆಂಜನೇಯ ಗುಡಗೇರಿ, ರಾಜು ಹುಲಗೂರ, ಮಂಜುನಾಥ ಹೊಸಮನಿ, ನೀಲಪ್ಪ ಸಣ್ಣಕ್ಕಿ, ಜಗದೀಶ ಕುರಂದವಾಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 