೧೦ ಮಂದಿ ತಬ್ಲಿಘಿ ಜಮಾತ್ ವಿದೇಶಿ ಸದಸ್ಯರಿಗೆ ಬಾಂಬೆ ಹೈಕೋರ್ಟ್ ಜಾಮೀನು

ನಾಗಪುರ್, ಜೂನ್ ೧೩, ತಬ್ಲಿಘಿ ಜಮಾತ್ ನ  ೧೦ ಮಂದಿ  ವಿದೇಶಿ  ಸದಸ್ಯರಿಗೆ  ಬಾಂಬೆ ಹೈಕೋರ್ಟ್ ನ    ನಾಗಪುರ್  ನ್ಯಾಯಪೀಠ   ಶನಿವಾರ   ಜಾಮೀನು ಮಂಜೂರು ಮಾಡಿದೆ. ಈ ಹತ್ತು ಮಂದಿ ಕಜಕಿಸ್ತಾನ್ ಹಾಗೂ ಕಿರ್ಗಿಸ್ಥಾನ ದೇಶಗಳ ನಾಗರೀಕರಾಗಿದ್ದಾರೆ.ಲಾಕ್ ಡೌನ್ ಹಿನ್ನಲೆಯಲ್ಲಿ  ಗಡ್ಚಿರೋಲಿಯಲ್ಲಿ ನಾವು ಸಿಲುಕಿಕೊಂಡಿದ್ದು, ಯಾವುದೇ ವೀಸಾ ನಿಯಮಗಳನ್ನು ಉಲ್ಲಂಘಿಸಿಲ್ಲ ಹಾಗೂ ಗಡ್ ಚಿರೋಲಿಯಲ್ಲಿ  ತಬ್ಲಿಘಿ ಜಮಾತ್  ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ  ಎಂದು   ತಮ್ಮ ಆರ್ಜಿಗಳಲ್ಲಿ   ಹೇಳಿಕೊಂಡಿದ್ದರು.ದಾರೂಲ್ ಉಲೂಂ ಶಾಹಿಯಲ್ಲಿ ವಾಸ್ತವ್ಯ ಹೂಡಬೇಕು ಹಾಗೂ ಪ್ರತಿ  ಸೋಮವಾರ  ಚಂದ್ರಾಪುರ್  ನಗರ  ಪೊಲೀಸ್  ಠಾಣೆಗೆ  ಹಾಜರಾಬೇಕು ಎಂಬ ಷರತ್ತುಗಳನ್ನು  ವಿಧಿಸಿ  ನ್ಯಾಯಾಧೀಶ ಮನೀಷ್ ಪಿಟಾಲೆ  ಈ ೧೦ ಮಂದಿಗೆ  ಜಾಮೀನು ಮಂಜೂರು ಮಾಡಿದ್ದಾರೆ.ಅಲ್ಲದೆ,  ಎಲ್ಲ ಪಾಸ್ ಪೋರ್ಟ್ ಗಳನ್ನು   ತನಿಖಾ ಸಂಸ್ಥೆಗೆ  ಒಪ್ಪಿಸುವಂತೆ  ನ್ಯಾಯಾಲಯ ಆದೇಶಿಸಿದೆ.ಯಾವುದೇ ಪುರಾವೆಗಳನ್ನು ನಾಶಪಡಿಸುವ ಅಥವಾ  ಷರತ್ತು  ಉಲ್ಲಂಘನೆಯಾದರೆ  ಜಾಮೀನು ರದ್ದಾಗಲಿದೆ ಎಂದು  ನ್ಯಾಯಾಲಯ  ಎಚ್ಚರಿಕೆ ನೀಡಿದೆ.ಈ ಎಲ್ಲ ೧೦ ಮಂದಿ ವಿದೇಶಿ ತಬ್ಲಿಘಿ ಜಮಾತ್ ಸದಸ್ಯರನ್ನು   ಗಡ್ ಚಿರೋಲಿ ಪೊಲೀಸರು ಕಳೆದ ಏಪ್ರಿಲ್ ೫ ರಂದು   ವಿದೇಶಿಯರ ತಿದ್ದುಪಡಿ ಕಾಯ್ದೆ ೨೦೦೪ ಸೆಕ್ಷನ್ ೧೪(ಬಿ),  ಭಾರತೀಯ ದಂಡ ಸಂಹಿತೆ ಸೆಕ್ಷನ್  ೧೮೮.೨೬೯. ೨೭೦ ಹಾಗೂ  ಸಾಂಕ್ರಾಮಿಕ ರೋಗಗಳ ಕಾಯ್ದೆ ೧೮೯೭ರ ಸೆಕ್ಷನ್ ೩,೪ರಡಿ  ಬಂಧಿಸಿದ್ದರು.